ಕನ್ನಡಪ್ರಭ ವಾರ್ತೆ ವಿಜಯಪುರ
ವೆಂಕಟೇಶ್ವರ ದೇವರಿಗೆ ಹಾಲಿನಿಂದ ಪೂಜೆ ಸಲ್ಲಿಸಿ, ಪುಟ್ಟ ಗೋವುಗಳಿಗೆ ಪೂಜೆ ಸಲ್ಲಿಸಿ, ಇಂದ್ರನನ್ನು ಪ್ರಾರ್ಥನೆ ಮಾಡಲು ವಿಶೇಷವಾದ ಇಂದ್ರ ಯಜ್ಞ ಮಾಡಿ, ಈ ಭೂಮಂಡಲಕ್ಕೆ ಸಾಕಷ್ಟು ಮಳೆಯಾಗಿ ಈ ನಾಡಿನ ಸಮಸ್ತ ರೈತರು ಸಮೃದ್ಧವಾಗಿ ಜೀವನ ಸಾಗಿಸಲಿ ಎಂದು ಪ್ರಾರ್ಥಿಸಲಾಯಿತು.
ಮುಖಂಡ ಉಮೇಶ ಕಾರಜೋಳ ಮಾತನಾಡಿ, ವರುಣದೇವ ಕೃಪೆ ತೋರಿದರೆ ಇಳೆಗೆ ಮಳೆ ಬರುತ್ತದೆ. ಮಳೆ ಬಂದರೆ ಬೆಳೆ ಬರುತ್ತದೆ, ಬೆಳೆ ಬಂದರೆ ರೈತರ ಬಾಳು ಬಂಗಾರವಾಗುತ್ತದೆ. ರೈತ ಸಮೃದ್ಧನಾದರೆ ದೇಶ ಸಮೃದ್ಧವಾಗಿರುತ್ತದೆ. ನಾವು ಸಹ ನಿತ್ಯ ಮಳೆಗಾಗಿ ದೇವರಲ್ಲಿ ಪ್ರಾರ್ಥಿಸಬೇಕು. ಪ್ರಕೃತಿಗೆ ಅದ್ಭುತ ಶಕ್ತಿ, ಪ್ರಕೃತಿ ಮುನಿಯುವ ಪರಿಸರ ವಿರೋಧಿ ಚಟುವಟಿಕೆಗಳನ್ನು ನಾವು ಯಾವತ್ತು ಕೈಗೊಳ್ಳಬಾರದು, ಪ್ರಕೃತಿ ಉಳಿದರೆ ನಾವು ಉಳಿದಂತೆ ಎಂದು ಅಭಿಪ್ರಾಯಪಟ್ಟರು.ಈ ವೇಳೆ ಮುಖಂಡರಾದ ಡಾ.ಸುರೇಶ ಬಿರಾದಾರ, ಸಂದೀಪ ಪಾಟೀಲ, ವಿಜಯ ಜೋಶಿ, ಪಂಚಪ್ಪ ಕಲಬುರಗಿ, ಸಂಗಮೇಶ ಸಗರ, ಸಾತಲಿಂಗಯ್ಯ ಸಾಲಿಮಠ, ರಾಮನಗೌಡ ಪಾಟೀಲ, ಮಹಾದೇವ ಬನಸೋಡೆ, ವಿರೇಶ ಗೊಬ್ಬುರ, ಶಾನೂರ್ ನಂದರಗಿ, ತಿಪ್ಪಣ್ಣ ನಾಟಿಕಾರ, ಧರೆಪ್ಪ ಅನಂತಪುರ, ಶಿವರಾಜ ಕುಮಟಗಿ ಸೇರಿದಂತೆ ಹಲವು ರೈತರು ಪಾಲ್ಗೊಂಡಿದ್ದರು.