ಬಳ್ಳಾರಿ ಜಿಲ್ಲೆಯ ಕೈಗಾರಿಕೆ ಬೆಳವಣಿಗೆ ಪ್ರಗತಿದಾಯಿಕ

KannadaprabhaNewsNetwork |  
Published : Oct 28, 2025, 12:20 AM IST
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ 72ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಬಿಐಟಿಎಂ ಕಾಲೇಜಿನ ಮುಖ್ಯಸ್ಥ ಡಾ.ಯಶವಂತ ಭೂಪಾಲ್ ಅವರಿಗೆ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.  | Kannada Prabha

ಸಾರಾಂಶ

ಬಿಡಿಸಿಸಿ ಅಂಡ್ ಐ ಬ್ಯುಸಿನೆಸ್ ಅವಾರ್ಡ್-2025 ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಬಲಿಜ ಭವನದಲ್ಲಿ ಜರುಗಿತು.

ಬಳ್ಳಾರಿ: ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ನೀಡುತ್ತಿರುವ ಬಿಡಿಸಿಸಿ ಅಂಡ್ ಐ ಬ್ಯುಸಿನೆಸ್ ಅವಾರ್ಡ್-2025 ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಬಲಿಜ ಭವನದಲ್ಲಿ ಜರುಗಿತು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ 72ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಅಂಗವಾಗಿ ಜರುಗಿದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿದ ಸಂಸ್ಥೆಯ ಅಧ್ಯಕ್ಷ ಯಶ್ವಂತರಾಜ್ ನಾಗಿರೆಡ್ಡಿ ಅವರು, ವಾಣಿಜ್ಯ ಕ್ಷೇತ್ರದಲ್ಲಿ ಬಳ್ಳಾರಿ ಜಿಲ್ಲೆಯ ಸಾಧನೆ ಹಾಗೂ ಸಾಧಕರ ಕುರಿತು ತಿಳಿಸಿದರಲ್ಲದೆ, ಜಿಲ್ಲೆಯ ಕೈಗಾರಿಕೆ ಬೆಳವಣಿಗೆ ಪ್ರಗತಿದಾಯಿಕವಾಗಿದೆ ಎಂದು ಹೇಳಿದರು.

ಇದೇ ವೇಳೆ 2024-25ರ ಸಾಲಿನ ಸಂಸ್ಥೆಯ ಪ್ರಗತಿ ಪಕ್ಷಿನೋಟವನ್ನು ಸಭೆಯಲ್ಲಿ ಮಂಡಿಸಿ, 2024-25ರ ಆರ್ಥಿಕ ಲೆಕ್ಕಪರಿಶೋಧನಾ ವರದಿಗೆ ಅನುಮೋದನೆ ಪಡೆದರು.

ಶಿಕ್ಷಣ ಕ್ಷೇತ್ರದ ಸಾಧನೆಗೆ ಬಿಐಟಿಎಂ ಇಂಜಿನಿಯರಿಂಗ್ ಕಾಲೇಜಿನ ಡಾ.ಯಶವಂತ ಭೂಪಾಲ್, ವೈದ್ಯಕೀಯ ಸೇವೆ ಹಾಗೂ ಸಮಾಜ ಸೇವೆಯನ್ನು ಪರಿಗಣಿಸಿ ಡಾ.ನಾಗರತ್ನ ಅನ್ನಾವರ್ಜುಲ (ಡಾ. ರತ್ನಾ ಸುಯಜ್ಞ), ಕೈಗಾರಿಕಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗೆ ಸಿರುಗುಪ್ಪದ ವಾಸವಿ ವೆಂಕಣ್ಣ, ಕೃಷಿ ಉತ್ಪನ್ನಗಳು ಮತ್ತು ಮಾರಾಟ ಕ್ಷೇತ್ರದಲ್ಲಿನ ಸಾಧನೆ ಪರಿಗಣಿಸಿ ಚಾಣಕನೂರು ಮರೇಗೌಡ, ವಾಣಿಜ್ಯೋದ್ಯಮ ಕ್ಷೇತ್ರದಲ್ಲಿನ ಎಚ್. ತಿಮ್ಮನಗೌಡ ಮತ್ತು ಕಂಪ್ಲಿಯ ವೆಂಕಟೇಶ್ ಎಣ್ಣಿ ಅವರಿಗೆ `ವಾಣಿಜ್ಯ ರತ್ನ'''''''' ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಸನ್ಮಾನಿತರ ಪರ ಮಾತನಾಡಿದ `ವಾಣಿಜ್ಯ ರತ್ನ’ ಪ್ರಶಸ್ತಿ ಪುರಸ್ಕೃತೆ ವಾಸವಿ ವೆಂಕಣ್ಣ ಅವರು, ಸಿರುಗುಪ್ಪದಲ್ಲಿ ರೈಸ್‌ಮಿಲ್‌ಗಳನ್ನು ನಡೆಸುತ್ತಿರುವ ನನ್ನನ್ನು ಗುರುತಿಸಿ, ಪ್ರಶಸ್ತಿ ನೀಡಿದ್ದಕ್ಕಾಗಿ ಸಂಸ್ಥೆಗೆ ನಾನು ಅಭಾರಿಯಾಗಿದ್ದೇನೆ. ಜಿಲ್ಲೆಯಲ್ಲಿ ಮಹಿಳಾ ಉದ್ಯಮಿಗಳಿಗೆ ಉತ್ತಮ ಅವಕಾಶಗಳಿವೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಉದ್ಯಮಗಳನ್ನು ಪ್ರಾರಂಭಿಸಬೇಕು ಎಂದು ಹೇಳಿದರು. 2024-25ರ ಶೈಕ್ಷಣಿಕ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ರ‍್ಯಾಂಕ್‌ಗಳನ್ನು ಪಡೆದಿರುವ ವಿದ್ಯಾರ್ಥಿಗಳನ್ನು ಇದೇ ವೇಳೆ ಸನ್ಮಾನಿಸಲಾಯಿತು. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಬಿ.ಮಹಾರುದ್ರಗೌಡ, ಉಪಾಧ್ಯಕ್ಷ ಎಸ್. ದೊಡ್ಡನಗೌಡ, ಸೊಂತ ಗಿರಿಧರ್, ಜಂಟಿ ಕಾರ್ಯದರ್ಶಿ ಡಾ. ಮರ್ಚೆಡ್ ಮಲ್ಲಿಕಾರ್ಜುನಗೌಡ, ವಿ.ರಾಮಚಂದ್ರ, ಖಜಾಂಚಿ ಪಿ.ಪಾಲಣ್ಣ ಇತರರಿದ್ದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಅವ್ವಾರು ಮಂಜುನಾಥ್, ಎಚ್.ಎ. ದಕ್ಷಿಣಾಮೂರ್ತಿ ಹಾಗೂ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಸಿ.ಸುರೇಶಬಾಬು ಅವರು ಕಾರ್ಯಕ್ರಮ ನಿರ್ವಹಿಸಿದರು.

PREV

Recommended Stories

ಸರ್ಕಾರಿ ಸಭೆಗಳಲ್ಲಿ ಪ್ಲಾಸ್ಟಿಕ್‌ ನೀರಿನ ಬಾಟಲಿಗೆ ನಿಷೇಧ
ಪ್ರತಿಕ್ಷಣವು ಕನ್ನಡ ನಾಡು-ನುಡಿ ಅಭಿಮಾನವಿರಲಿ