- ಶ್ರೀ ನೀಲಕಂಠೇಶ್ವರ ಸ್ನೇಹ ಬಳಗ ವಾರ್ಷಿಕೋತ್ಸವ
ಕನ್ನಡಪ್ರಭ ವಾರ್ತೆ ಹರಿಹರ
ಸರ್ಕಾರದ ವಿವಿಧ ಅಭಿವೃದ್ಧಿ ನಿಗಮಗಳ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲು, ಶೀಘ್ರದಲ್ಲಿ ಹರಿಹರ ತಾಲೂಕು ಹಿಂದುಳಿದ ವರ್ಗಗಳ ಸಮಾನ ಮನಸ್ಕರ ವೇದಿಕೆಯಿಂದ ಹರಿಹರದಲ್ಲಿ ಮಾಹಿತಿ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಜಿ.ಎಚ್. ಮರಿಯೋಜಿರಾವ್ ಹೇಳಿದರು.ನಗರದ ಶ್ರೀ ನೀಲಕಂಠೇಶ್ವರ ಸ್ನೇಹ ಬಳಗ ಕುರುಹಿನಶೆಟ್ಟಿ ಸಮಾಜ ಟ್ರಸ್ಟ್ ವತಿಯಿಂದ ನೇಕಾರ ಬಡಾವಣೆ ಸಮೀಪದ ಶ್ರೀ ಚೌಡಾಂಬಿಕಾ ದೇವಸ್ಥಾನ ಆವರಣದಲ್ಲಿ ಭಾನುವಾರ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ನೀಲಕಂಠೇಶ್ವರ ಸ್ನೇಹ ಬಳಗ ಅಧ್ಯಕ್ಷ ಎಚ್.ಕೆ. ಕೊಟ್ರಪ್ಪ ಮಾತನಾಡಿ, ಸಂಘ ಹಲವಾರು ವರ್ಷಗಳಿಂದ ಸಾಮಾಜಿಕ, ಧಾರ್ಮಿಕ ಸಾಹಿತ್ಯಕ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಕೋವಿಡ್ ಹಾವಳಿಯಿದ್ದ ಸಂದರ್ಭದಲ್ಲಿ ಬಡವರಿಗೆ ಬಳಗ ವತಿಯಿಂದ ಸಹಾಯ ಮಾಡಿದೆ. ಶ್ರೀ ಶಕ್ತಿ ವೃದ್ಧಾಶ್ರಮಕ್ಕೆ ಟಿವಿ ಕೊಡಿಸಲಾಗಿದೆ. ಸಂಘದ ನೋಂದಣಿ ಆಗಿರಲಿಲ್ಲ. ಈಗ ನೊಂದಣಿಯಾಗಿ ವರ್ಷ ಪೂರೈಸಿದ ಹಿನ್ನೆಲೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷೆ ಆಶಾ ಮರಿಯೋಜಿ ರಾವ್, ರಾಧಾ ಸಿ.ಎನ್. ಹುಲಿಗೇಶ್, ಸದಸ್ಯೆ ಲಕ್ಷ್ಮೀ ಮೋಹನ್ ದುರುಗೋಜಿ, ದಾವಣಗೆರೆ ನಗರಸಭೆ ಮಾಜಿ ಅಧ್ಯಕ್ಷ ಆರ್.ಎಚ್. ನಾಗಭೂಷಣ್, ಸವಿತಾ ಸಮಾಜದ ಹನುಮಂತಪ್ಪ, ಹಿರಿಯ ಕ್ರೀಡಾಪಟು ಎಚ್.ನಿಜಗುಣ, ಬ್ರಹ್ಮಯ್ಯ, ರಾಜು ಮಣಿ, ವೀರಣ್ಣ ಅಗಡಿ, ಗಂಗಾಧರ್ ಕೊಟಗಿ, ಮಂಜುನಾಥ ಅಗಡಿ, ಪ್ರಭು ಕೊಟಗಿ, ಚಂದ್ರಪ್ಪ ಅಗಡಿ, ಜ್ಞಾನದೇವ ಇತರರು ಉಪಸ್ಥಿತರಿದ್ದರು.
-16HRR.01: