6 ಸಂಶೋಧಕರಿಗೆ ಇನ್ಫೋಸಿಸ್ ವಾರ್ಷಿಕ ಪ್ರಶಸ್ತಿ

KannadaprabhaNewsNetwork |  
Published : Nov 13, 2025, 12:45 AM IST
Infosys Science Foundation 14 | Kannada Prabha

ಸಾರಾಂಶ

ಇನ್ಫೋಸಿಸ್ ಸೈನ್ಸ್‌ ಫೌಂಡೇಶನ್ ಪ್ರತಿಷ್ಠಿತ ಇನ್ಫೋಸಿಸ್-2025 ಪ್ರಶಸ್ತಿ ಘೋಷಣೆ ಮಾಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇನ್ಫೋಸಿಸ್ ಸೈನ್ಸ್‌ ಫೌಂಡೇಶನ್ ಪ್ರತಿಷ್ಠಿತ ಇನ್ಫೋಸಿಸ್-2025 ಪ್ರಶಸ್ತಿ ಘೋಷಣೆ ಮಾಡಿದ್ದು, ಬೆಂಗಳೂರಿನ ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸಸ್ ಅಸೋಸಿಯೇಟ್ ಪ್ರೊಫೆಸರ್ ಅಂಜನಾ ಬದರಿನಾರಾಯಣ ಸೇರಿ ಭಾರತದ ಶೈಕ್ಷಣಿಕ ಸಂಸ್ಥೆಗಳ ಇಬ್ಬರು ಹಾಗೂ ಅಮೆರಿಕದ ನಾಲ್ವರು ಸಂಶೋಧಕರು ಆಯ್ಕೆಯಾಗಿದ್ದಾರೆ.

ಆರ್ಥಿಕ, ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್, ಹ್ಯುಮ್ಯಾನಿಟೀಸ್ ಮತ್ತು ಸೋಶಿಯಲ್ ಸೈನ್ಸಸ್, ಲೈಫ್ ಸೈನ್ಸಸ್, ಗಣಿತ ವಿಜ್ಞಾನ ಮತ್ತು ಫಿಸಿಕಲ್ ಸೈನ್ಸಸ್ ಎಂಬ ಆರು ವಿಭಾಗಗಳಲ್ಲಿ ಈ ಬಹುಮಾನ ನೀಡಲಾಗಿದೆ. 40 ವರ್ಷದೊಳಗಿನ ಸಂಶೋಧಕರನ್ನು ಗುರುತಿಸಿ ಈ ಪ್ರಶಸ್ತಿ ನೀಡುವ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ. ಬಹುಮಾನವು ಚಿನ್ನದ ಪದಕ, ಪ್ರಶಂಸಾ ಪತ್ರ ಮತ್ತು 100,000 ಯುಎಸ್‌ ಡಾಲರ್‌ (ಅಂದಾಜು 88.57 ಲಕ್ಷ ರು.) ಒಳಗೊಂಡಿದೆ.

ಪ್ರತಿಷ್ಠಿತ ಇನ್ಫೋಸಿಸ್ ಪ್ರಶಸ್ತಿ 2025 ರ ವಿಜೇತರನ್ನು ಐಎಫ್‌ಎಸ್‌ನ ಕೆ.ದಿನೇಶ್, ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ, ಶ್ರೀನಾಥ್ ಬಂಟಿ, ಕ್ರಿಸ್ ಗೋಪಾಲಕೃಷ್ಣನ್, ಡಾ.ಪ್ರತಿಮಾ ಮೂರ್ತಿ ಮತ್ತು ಎಸ್.ಡಿ.ಶಿಬುಲಾಲ್ ಘೋಷಣೆ ಮಾಡಿದರು.

ವಿಜೇತರು:

ಆರ್ಥಿಕ ವಿಭಾಗದಲ್ಲಿ ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಆರ್ಥಿಕ ವಿಭಾಗದ ನಿಖಿಲ್ ಅಗರ್ವಾಲ್, ಪೌಲಾ ಎ.ಸ್ಯಾಮ್ಯುವಲ್ಸನ್ ಆಯ್ಕೆಯಾಗಿದ್ದಾರೆ. ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಟೊರಾಂಟೊ ವಿವಿಯ ಮ್ಯಾಥಮ್ಯಾಟಿಕಲ್ ಆ್ಯಂಡ್ ಕಂಪ್ಯುಟೇಶನಲ್ ಸೈನ್ಸಸ್‌ನ ಅಸೋಸಿಯೇಟ್ ಪ್ರೊಫೆಸರ್ ಸುಶಾಂತ್ ಸಚ್ ದೇವ್ ಅವರನ್ನು ಆಯ್ಕೆ ಮಾಡಲಾಗಿದೆ.

ಮಾನವಶಾಸ್ತ್ರ ಮತ್ತು ಸಮಾಜ ವಿಜ್ಞಾನ ವಿಭಾಗದಲ್ಲಿ ಷಿಕಾಗೋ ವಿವಿಯ ದಕ್ಷಿಣ ಏಷ್ಯಾ ಭಾಷೆಗಳು ಮತ್ತು ನಾಗರಿಕತೆಗಳ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಆ್ಯಂಡ್ರ್ಯೂ ಒಲೆಟ್, ಜೀವ ವಿಜ್ಞಾನ ಕ್ಷೇತ್ರದಲ್ಲಿ ಬೆಂಗಳೂರಿನ ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸಸ್ ನ ಅಸೋಸಿಯೇಟ್ ಪ್ರೊಫೆಸರ್ ಅಂಜನಾ ಬದರಿನಾರಾಯಣ ಅವರು ಆಯ್ಕೆಯಾಗಿದ್ದಾರೆ. ಗಣಿತ ವಿಜ್ಞಾನ ಕ್ಷೇತ್ರದಲ್ಲಿ ಮುಂಬೈನ ಟಾಟಾ ಇನ್ಸ್‌ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಗಣಿತ ಶಾಲೆಯ ಅಸೋಸಿಯೇಟ್ ಪ್ರೊಫೆಸರ್ ಸವ್ಯಸಾಚಿ ಮುಖರ್ಜಿ ಅವರಿಗೆ ಲಭಿಸಿದೆ. ಭೌತವಿಜ್ಞಾನ ಕ್ಷೇತ್ರದಲ್ಲಿ ಕ್ಯಾಲಿಫೋರ್ನಿಯಾದ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಕ್ಯಾಲ್ಟೆಕ್) ನಲ್ಲಿ ಕೆಮಿಕಲ್ ಎಂಜಿನಿಯರಿಂಗ್ ಪ್ರಾಧ್ಯಾಪಕ ಕಾರ್ತೀಶ್ ಮಂಥಿರಾಮ್ ಭಾಜನರಾಗಿದ್ದಾರೆ.

PREV

Recommended Stories

250 ಕೋಟಿ ಹಗರಣ ಕಡತ ನಾಶ ಮಾಡಿದ್ರೂ ಸಿಕ್ಕಿದವು!?
ಬಿಳಿಕೆರೆ ಬಳಿ ಒಂದು ಗಂಡು ಹುಲಿ ಮರಿ ಸೆರೆ