ಶೈಕ್ಷಣಿಕ ಪ್ರಗತಿಗೆ ಮೂಲಸೌಕರ್ಯದ ಅಗತ್ಯವಿದೆ: ಡಾ. ಎನ್.ಟಿ. ಶ್ರೀನಿವಾಸ್

KannadaprabhaNewsNetwork |  
Published : Jun 16, 2025, 01:00 AM IST
ಕೂಡ್ಲಿಗಿ ತಾಲೂಕು ಹುಲಿಕೆರೆ ಗ್ರಾಮದಲ್ಲಿ 40 ಲಕ್ಷ ವೆಚ್ಚದಲ್ಲಿ ನೂತನ ಶಾಲಾ ಕೊಠಡಿ ನಿಮಾರ್ಣ ಕಾಮಗಾರಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಭೂಮಿ ಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಕೂಡ್ಲಿಗಿ ತಾಲೂಕು ಶೈಕ್ಷಣಿಕವಾಗಿ ಹಿಂದುಳಿದಿದ್ದು, ಈಗ ಪ್ರಗತಿ ಸಾಧಿಸಿಲು ಕಾಲ ಕೂಡಿಬಂದಿದೆ.

₹2 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಚಾಲನೆಕನ್ನಡಪ್ರಭ ವಾರ್ತೆ ಕೂಡ್ಲಿಗಿ

ಕೂಡ್ಲಿಗಿ ತಾಲೂಕು ಶೈಕ್ಷಣಿಕವಾಗಿ ಹಿಂದುಳಿದಿದ್ದು, ಈಗ ಪ್ರಗತಿ ಸಾಧಿಸಿಲು ಕಾಲ ಕೂಡಿಬಂದಿದೆ. ಗುಣಮಟ್ಟದ ಶಿಕ್ಷಣದ ಜತೆಯಲ್ಲಿ ಅಗತ್ಯ ಶಿಕ್ಷಕರು, ಸುವ್ಯವಸ್ಥಿತ ಕೊಠಡಿಗಳು ಮತ್ತು ಮೂಲಸೌಕರ್ಯಗಳನ್ನು ಕಲ್ಪಿಸುವ ಅಗತ್ಯವಿದ್ದು, ಶಿಕ್ಷಣಕ್ಕೆ ಕೋಟಿಗಟ್ಟಲೇ ಹಣ ವಿನಿಯೋಗಿಸಿದ್ದೇನೆ ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ತಿಳಿಸಿದರು.

ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ 40 ಲಕ್ಷ ವೆಚ್ಚದಲ್ಲಿ ನೂತನ ಶಾಲಾ ಕೊಠಡಿ ನಿಮಾರ್ಣ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಕ್ಷೇತ್ರದ ಪ್ರತಿಯೊಂದು ಹಳ್ಳಿಗೆ ಭೇಟಿ ನೀಡಿ ಮೊದಲು ಶಾಲೆಗಳ ಸಮಸ್ಯೆಗಳ ಕುರಿತು ಮಾಹಿತಿ ಪಡೆಯುತ್ತೇನೆ ಮತ್ತು ಅಗತ್ಯ ಸೌಕರ್ಯ ಪಟ್ಟಿ ಮಾಡಿಕೊಂಡು ಅದರಂತೆ ಅನುದಾನ ತಂದು ಶಾಲಾ ಕೊಠಡಿಗಳ ನಿಮಾರ್ಣ ಕಾಮಗಾರಿ ಚಾಲನೆ ನೀಡುತ್ತಿರುವೆ ಎಂದರು.

ಬಹುತೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವುದು ನಿಜ, ಅದಕ್ಕೆ ಅತಿಥಿ ಶಿಕ್ಷಕರ ನೇಮಕದ ಮೂಲಕ ಶಿಕ್ಷಕರ ಸಮಸ್ಯೆ ನಿಗಿಸುವ ಕೆಲಸ ಮಾಡಲಾಗುವುದು. ಕ್ಷೇತ್ರದಲ್ಲಿ ಈಗಾಗಲೇ ನೂರಾರು ಶಾಲಾ ಕೊಠಡಿ ಕಾಮಗಾರಿಗೆ ಅನುದಾನ ತಂದಿರುವೆ. ಕೆಲವು ಕಾಮಗಾರಿ ಪೂರ್ಣವಾಗಿದ್ದು ಇನ್ನು ಕೆಲವು ಕಾಮಗಾರಿಗಳು ನಿಮಾರ್ಣದ ಹಂತದಲ್ಲಿವೆ ಎಂದರು.

ಇದೇ ಸಂದರ್ಭ ₹1 ಕೋಟಿ ವೆಚ್ಚದಲ್ಲಿ ಹುಲಿಕೆರೆ, ಹಿರೇಕುಂಬಗುಂಟೆ ಗೊಲ್ಲರಹಟ್ಟಿ, ಶಾಂತನಹಳ್ಳಿ, ಗುಣಸಾಗರ ಗ್ರಾಮಗಳ ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು. ಟಿ.ಸೂರವ್ವನಹಳ್ಳಿಯಲ್ಲಿ ₹80 ಲಕ್ಷ ವೆಚ್ಚದ ಸಿಸಿ ರಸ್ತೆ ಮತ್ತು ಹಿರೇಕುಂಬಳಗುಂಟೆ, ಚಿಕ್ಕಕುಂಬಗುಂಟೆ ಅಂಗನವಾಡಿ ಕೇಂದ್ರ ನಿಮಾರ್ಣ ಕಾಮಗಾರಿಗೆ ಚಾಲನೆ ನೀಡಲಾಯಿತು. ಈ ಸಂದರ್ಭ ಎಂ.ಜಿ. ರಮೇಶಗೌಡ, ಗ್ರಾಪಂ ಮಾಜಿ ಉಪಾಧ್ಯಕ್ಷ ಎಚ್.ದುರುಗೇಶ್, ಡಾ. ಟಿ. ಓಂಕಾರಪ್ಪ, ಮಾರಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಓಬಳೇಶ್, ತಾಪಂ ಮಾಜಿ ಸದಸ್ಯ ಶರಣನಗೌಡ, ನಿವೃತ್ತ ಶಿಕ್ಷಕ ಜಗದೀಶ್, ಷಪಿವುಲ್ಲಾ, ಮುಖ್ಯಶಿಕ್ಷಕಿ ವಾಣಿ ಸೇರಿದಂತೆ ಹಲವರು ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ