ನಗರಸಭೆಯಿಂದ ಮೂಲಭೂತ ಸೌಕರ್ಯದ ವ್ಯವಸ್ಥೆ: ಪೌರಾಯುಕ್ತ ಪ್ರಕಾಶ

KannadaprabhaNewsNetwork |  
Published : Feb 25, 2026, 02:15 AM IST
ನಗರಸಭೆ ಪೌರಾಯುಕ್ತ ಪ್ರಕಾಶ ಚನ್ನಪ್ಪನವರ ಮಾತನಾಡಿದರು. | Kannada Prabha

ಸಾರಾಂಶ

ಪ್ರಸಿದ್ದ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ಆಗಮಿಸುತ್ತಿರುವ ಭಕ್ತಾಧಿಗಳಿಗೆ ನಗರ ಸಭೆಯಿಂದ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ

ಕನ್ನಡಪ್ರಭ ವಾರ್ತೆ ಶಿರಸಿ

ಪ್ರಸಿದ್ದ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ಆಗಮಿಸುತ್ತಿರುವ ಭಕ್ತಾಧಿಗಳಿಗೆ ನಗರ ಸಭೆಯಿಂದ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಪ್ರಕಾಶ ಚನ್ನಪ್ಪನವರ ತಿಳಿಸಿದರು.

ಮಂಗಳವಾರ ನಗರಸಭೆ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಲ್ಲದೇ ನಗರದ ಪ್ರಮುಖ ನಗರಸಭೆ ವ್ಯಾಪ್ತಿಗೆ ಬರುವ ರಸ್ತೆಗಳ ಡಾಂಬರೀಕರಣ ಹಾಗೂ ಹೊಂಡಗಳನ್ನು ಭರ್ತಿ ಮಾಡಲಾಗಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು ಝೂ ಸರ್ಕಲ್ ಮತ್ತು ಕುಮಟಾ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ನಗರಸಭೆಯ ಸಾರ್ವಜನಿಕ ಬಾವಿ, ಶೌಚಾಲಯ ಹಾಗೂ ವೃತ್ತಗಳಿಗೆ ಪೇಂಟ್ ಮಾಡಿಸಲಾಗಿದೆ ಎಂದರು.ಅಲ್ಲದೇ ಸಂಚಾರ ದಟ್ಟಣೆ ನಿಯಂತ್ರಿಸಲು ಬನವಾಸಿ ರಸ್ತೆಯ ಸಿರ್ಸಿಕರ ಕಾಲನಿಯಿಂದ ಕರಿಗುಂಡಿ ರಸ್ತೆ ಸಂಪರ್ಕಿಸಲು ತಾತ್ಕಾಲಿಕ ರಸ್ತೆ ನಿರ್ಮಾಣ, ಜಾತ್ರೆಯ ನಿಮಿತ್ತ ಸಾರ್ವಜನಿಕರ ರಕ್ಷಣೆಗಾಗಿ 7 ಸ್ಥಳಗಳಲ್ಲಿ ವಾಚ್ ಟವರ್ ಅಳವಡಿಸಲಾಗಿದೆ. ಬೇಸಿಗೆ ಸಮಯದಲ್ಲಿ ನೀರಿನ ಅಭಾವ ಆಗದಂತೆ ಮುಂಜಾಗ್ರತೆ ವಹಿಸಿ ಕೆಂಗ್ರೆ ಜಾಕ್‌ವೆಲ್ ಮತ್ತು ಮಾರಿಗದ್ದೆ ಜಾಕ್‌ವೆಲ್‌ನ ಪ್ರದೇಶದಲ್ಲಿ ಕಾಂಕ್ರೀಟ್ ಬಂಡ್ ಮೇಲ್ಭಾಗದಲ್ಲಿ ತಾತ್ಕಾಲಿಕ ಮರಳಿನ ಚೀಲ ತುಂಬಿ ತಾತ್ಕಾಲಿಕ ಒಡ್ಡು ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು‌.ಜಾತ್ರಾ ಪ್ರದೇಶಗಳಾದ ಸರ್ಕಾರಿ ಆಸ್ಪತ್ರೆ ಎದುರು, ವ್ಯಾಯಾಮ ಶಾಲೆ ಹೊಟೇಲ್ ಹತ್ತಿರ. ಶಿವಾಜಿ ಚೌಕ್, ಐದು ರಸ್ತೆ ವೃತ್ತ, ಮಾರಿಗುಡಿ ದೇವಸ್ಥಾನ ಹಿಂಭಾಗ, ಕೋಟೆಕರೆ ಮಂಗಳೂರು ಹೊಟೇಲ್ ಹತ್ತಿರ ಒಟ್ಟೂ 5 ಸ್ಥಳಗಳಲ್ಲಿ ಆರ್.ಓ. ಪ್ಲಾಂಟ್ ಮುಖಾಂತರ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದು, ಇದನ್ನು ಹೊರತುಪಡಿಸಿ ಒಟ್ಟೂ 7 ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ವಿದ್ಯುತ್ ವಿಭಾಗದಿಂದ ಕೋಟೆಕೆರೆ ಸುತ್ತಲೂ ಬೆಳಕಿನ ವ್ಯವಸ್ಥೆಗೆ ಕಂಬ ಮತ್ತು ಎಲ್.ಇ.ಡಿ. ದೀಪ ಅಳವಡಿಸಲಾಗಿದೆ. ನಗರದ ಮುಖ್ಯರಸ್ತೆಗಳಲ್ಲಿ ದೀಪಾಲಂಕಾರ ಮತ್ತು ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.

ನಂತರ ನಗರಸಭೆಯ ಪರಿಸರ ವಿಭಾಗದ ಎಂಜಿನಿಯರ್ ಶಿವರಾಜ ಮಾತನಾಡಿ, ನಗರದ ಸ್ವಚ್ಛತೆ ಕಾಪಾಡಲು ಈಗಾಗಲೇ ಪೌರ ಕಾರ್ಮಿಕರಿಗೆ ಸೂಚನೆ ನೀಡಲಾಗಿದೆ. ಭಕ್ತಾಧಿಗಳ‌ ಅನುಕೂಲಕ್ಕೆ ನಗರದ ಆಯ್ದ ಸ್ಥಳಗಳಲ್ಲಿ ಮೊಬೈಲ್ ಟಾಯ್ಲೆಟ್ ಇರಿಸಲಾಗಿದೆ ಎಂದು ಹೇಳಿದರು.ಈ ಸಂದರ್ಭ ನಗರಸಭೆ ಎಇ ಪ್ರಶಾಂತ ವೆರ್ಣೇಕರ, ಸೋಪಿಯಾನ್, ಎಂಜಿನಿಯರ್ ಹರೀಶ್, ಗಣೇಶ ಭಟ್, ವೇಣುಗೋಪಾಲ ಶಾಸ್ತ್ರಿ, ನೂತನ ಎನ್. ಶಿರೂರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನಪ್ರತಿನಿಧಿಗಳು ಜಡ; ಅಖಂಡ ಬಳ್ಳಾರಿಯ ಪ್ರವಾಸೋದ್ಯಮಕ್ಕೆ ಬರ !
ಗ್ರಾಮ ಸಹಾಯಕರಿಗೂ ನಿವೇಶನ ನೀಡಲು ಮನವಿ