ಗಾಂಧಿ ಗ್ರಾಮ ಪುರಸ್ಕಾರದ ಆಯ್ಕೆಯಲ್ಲಿ ಅನ್ಯಾಯ

KannadaprabhaNewsNetwork |  
Published : Oct 29, 2024, 01:09 AM IST
೨೮ಕೆಎಂಎನ್‌ಡಿ-೧ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೆಮ್ಮನಹಳ್ಳಿ ಗ್ರಾಪಂ ಸದಸ್ಯ ಹಾಗೂ ವಕೀಲ ಮಧುಸೂಧನ್ ಮಾತನಾಡಿದರು. | Kannada Prabha

ಸಾರಾಂಶ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ೧೩೪ ಪ್ರಶ್ನಾವಳಿಗಳ ಮೂಲಕ ಗ್ರಾಪಂಗಳಿಗೆ ಅಂಕಗಳನ್ನು ನೀಡಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುವುದು, ಹೀಗೆ ಆಯ್ಕೆ ಮಾಡಲಾದ ಅಂತಿಮ ಪಟ್ಟಿಯಲ್ಲಿ ಹೆಮ್ಮನಹಳ್ಳಿ, ಭಾರತೀನಗರ, ಮತ್ತು ಕದಲೂರು ಗ್ರಾಪಂಗಳ ಹೆಸರುಗಳಿದ್ದು, ನಮಗಿಂತ ಕಡಿಮೆ ಅಂಕ ಪಡೆದ ಭಾರತೀನಗರ ಗ್ರಾಪಂನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಿ ದ್ರೋಹವೆಸಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೇಂದ್ರ ಸರ್ಕಾರದಿಂದ ಅತ್ಯುತ್ತಮ ಗ್ರಾಮ ಪಂಚಾಯ್ತಿಗಳಿಗೆ ಕೊಡಮಾಡುವ ೨೦೨೩-೨೪ನೇ ಸಾಲಿನ ಜಿಲ್ಲಾ ಮಟ್ಟದ ಗಾಂಧಿ ಗ್ರಾಮ ಪುರಸ್ಕಾರ ಆಯ್ಕೆಯಲ್ಲಿ ಹೆಮ್ಮನಹಳ್ಳಿ ಗ್ರಾಮ ಪಂಚಾಯ್ತಿಗೆ ಅನ್ಯಾಯವಾಗಿದೆ ಎಂದು ಗ್ರಾಪಂ ಸದಸ್ಯ ಹಾಗೂ ವಕೀಲ ಮಧುಸೂದನ್ ಆರೋಪಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ೧೩೪ ಪ್ರಶ್ನಾವಳಿಗಳ ಮೂಲಕ ಗ್ರಾಪಂಗಳಿಗೆ ಅಂಕಗಳನ್ನು ನೀಡಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುವುದು, ಹೀಗೆ ಆಯ್ಕೆ ಮಾಡಲಾದ ಅಂತಿಮ ಪಟ್ಟಿಯಲ್ಲಿ ಹೆಮ್ಮನಹಳ್ಳಿ, ಭಾರತೀನಗರ, ಮತ್ತು ಕದಲೂರು ಗ್ರಾಪಂಗಳ ಹೆಸರುಗಳಿದ್ದು, ನಮಗಿಂತ ಕಡಿಮೆ ಅಂಕ ಪಡೆದ ಭಾರತೀನಗರ ಗ್ರಾಪಂನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಿ ದ್ರೋಹವೆಸಗಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಈ ಆಯ್ಕೆ ವಿರುದ್ಧ ಜಿಪಂ ಸಿಇಒ ಮತ್ತು ಪಂಚಾಯತ್‌ರಾಜ್ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗಳು ಹಾಗೂ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲಾಗಿದೆ. ಜಿಪಂ ಸಿಇಒ ಅವರು ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒಗಳ ಜೊತೆ ಜಿಪಂನಲ್ಲಿ ಸಭೆ ನಡೆಸಿ ಹೆಮ್ಮನಹಳ್ಳಿ, ಭಾರತೀನಗರ ಗ್ರಾಪಂಗಳ ಅಂಕಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹೆಮ್ಮನಹಳ್ಳಿ ಗ್ರಾಪಂಗೆ ೨೧ ಹೆಚ್ಚು ಅಂಕಗಳು ಲಭಿಸಿರುವುದು ದೃಢಪಟ್ಟಿದೆ ಎಂದರು.

ಭಾರತೀನಗರ ಗ್ರಾಪಂಗೆ ಅಂಕ ದೊರೆಯದ ಹಲವು ಭಾಗಗಳಿಗೆ ೨ ದಿನಗಳಲ್ಲಿ ಕೃತಕ ದಾಖಲಾತಿ ಸೃಷ್ಟಿಸಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಿದ್ದು, ಇದು ಮೇಲಧಿಕಾರಿಗಳ ಮಟ್ಟದಲ್ಲಿ ನಡೆದಿರುವ ವಂಚನೆಯಾಗಿದೆ. ಅಧಿಕಾರಿ ಮಟ್ಟದಲ್ಲಿ ಅನ್ಯಾಯವಾಗಿದ್ದು, ಈ ಸಂಬಂಧ ಅಧಿಕಾರಿಗಳು ನ್ಯಾಯ ದೊರಕಿಸಿಕೊಡದೇ ಹೋದಲ್ಲಿ ನ್ಯಾಯಾಲಯದ ಮಟ್ಟಿಲೇರುವುದಾಗಿ ಎಚ್ಚರಿಸಿದರು.

ಗೋಷ್ಠಿಯಲ್ಲಿ ಹೆಮ್ಮನಹಳ್ಳಿ ಗ್ರಾಪಂ ಅಧ್ಯಕ್ಷೆ ವೀಣಾ, ಸದಸ್ಯ್ಯ ಕಮಲಾಕ್ಷಿ, ಎಚ್.ಸಿ.ಉಮೇಶ್, ನಾಗೇಶ್, ಎಚ್.ಕೆ. ನಂದೀಶ್‌ಗೌಡ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!