ದಕ್ಷಿಣ ಕರ್ನಾಟಕದ ಹಲವು ತಾಲೂಕುಗಳು ಬರ ಪಟ್ಟಿಗೆ, ನಮ್ಮ ಭಾಗದ ತಾಲೂಕುಗಳೇ ಇಲ್ಲ: ಸ್ಪೀಕರ್ ಬೇಸರಕನ್ನಡಪ್ರಭ ವಾರ್ತೆ ಗದಗ
ಬುಧವಾರ ಗದಗ ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ನಾಗರಿಕ ಸಮಿತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಬರ ಪರಿಸ್ಥಿತಿ ಕುರಿತು ಆಡಳಿತ ಪಕ್ಷದವರೂ ಸಮೀಕ್ಷೆ ನಡೆಸಿದ್ದಾರೆ. ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳ ಹಲವು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಆದರೆ ಬರ ಘೋಷಣೆ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದ ಹಲವು ತಾಲೂಕುಗಳೇ ಕಾಣಿಸಿಲ್ಲ. ಇದು ಯಾವ ರೀತಿಯ ತಾರತಮ್ಯ ? ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಎಂಬ ಭೇದ ಮಾಡುತ್ತಿದ್ದೀರಾ ಎಂದು ಮುಖ್ಯಮಂತ್ರಿ ಅವರಿಗೆ ಖಾರವಾಗಿ ಪ್ರಶ್ನಿಸಿದ್ದೇನೆ ಎಂದರು.ಅನ್ಯಾಯವಾದಾಗ ವಿರೋಧಿಸುವೆ:
ವಿರೋಧ ಪಕ್ಷದವರು ಮಾಡುವ ಕೆಲವು ಹೋರಾಟಗಳು ಕೂಡಾ ಸರಿಯಾಗಿರುತ್ತವೆ. ಇತ್ತೀಚೆಗೆ ವಿರೋಧ ಪಕ್ಷದವರು ಹೋರಾಟ ನಡೆಸಿದಾಗ, ಸಾಕಷ್ಟು ಬಾರಿ ಮನವಿ ಮಾಡಿದರೂ ಅವರು ಹೋರಾಟ ಮುಂದುವರಿಸಿದರು. ಕೊನೆಯಲ್ಲಿ ಏನಾಯಿತು ಎಂಬುದನ್ನು ನೀವೇ ನೋಡಿದ್ದೀರಿ. ಆಡಳಿತ ಪಕ್ಷವೇ ತಲೆಬಾಗುವಂತಾಯಿತು ಎಂದು ಅವರು ಹೇಳಿದರು. ಕಾವೇರಿ ವಿಚಾರ, ಕೆಪಿಎಸ್ಸಿ ಸೇರಿದಂತೆ ರಾಜ್ಯದ ಪ್ರಮುಖ ವಿಷಯಗಳ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆಯುವ ಸಂದರ್ಭದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳು ಪರಸ್ಪರ ಸಹಕಾರ ನೀಡಬೇಕು. ಜನರ ಸಮಸ್ಯೆಗಳನ್ನು ಬದಿಗೊತ್ತಿ ರಾಜಕೀಯ ಮಾಡುವುದಕ್ಕಿಂತ ರಾಜ್ಯದ ಹಿತದೃಷ್ಟಿಯಿಂದ ಚರ್ಚೆ ನಡೆಸುವುದು ಮುಖ್ಯ ಎಂದರು.
ಈ ಹಿಂದೆ ನಾನೂ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದೆ. ಆದರೆ ಪಕ್ಷ ನನಗೆ ವಿಧಾನಸಭಾಧ್ಯಕ್ಷ ಸ್ಥಾನ ನೀಡಿದೆ. ಸಚಿವ ಸ್ಥಾನದ ಬೇಡಿಕೆ ಹಾಗೂ ಹೋರಾಟದ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರು ಸೇರಿದಂತೆ ಹಲವರಿಂದ ಗೊಂದಲಕಾರಿ ಹೇಳಿಕೆಗಳು ಬಂದಿವೆ. ಯಾರೂ ಆ ವಿಚಾರಗಳನ್ನು ತಲೆಯಲ್ಲಿ ಇಟ್ಟುಕೊಳ್ಳದೆ ನಾವೆಲ್ಲರೂ ಒಗ್ಗಟ್ಟಿನಿಂದ ಮುಂದುವರಿಯಬೇಕು ಎಂದು ಹೇಳಿದರು. ಈ ಮೂಲಕ ಸಚಿವ ಸ್ಥಾನಕ್ಕಾಗಿ ಪಕ್ಷದೊಳಗೆ ನಡೆದಿದ್ದ ಪೈಪೋಟಿ ಹಾಗೂ ಆ ಸಂದರ್ಭದಲ್ಲಿ ಉಂಟಾಗಿದ್ದ ಗೊಂದಲದ ಕುರಿತು ಜಿ.ಎಸ್. ಪಾಟೀಲ ಪರೋಕ್ಷವಾಗಿ ಪ್ರಸ್ತಾಪಿಸಿದರು.