ಲಿಂಗಸುಗೂರು: ಪರಿಶಿಷ್ಟ ಜಾತಿಗಳ ಒಳಮೀಸಲು ವಿಚಾರವಾಗಿ ಸಂವಿಧಾನದ 341 ವಿಧೇಯಕಕ್ಕೆ ತಿದ್ದುಪಡಿಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವುದು ಖಂಡನೀಯ ಎಂದು ಮೀಸಲಾತಿ ಸಂರಕ್ಷಕ ಒಕ್ಕೂಟದ ಮುಖಂಡ ಲಾಲಪ್ಪ ರಾಠೋಡ ಆಕ್ರೋಶ ವ್ಯಕ್ತಪಡಿಸಿದರು.
ವರದಿಯಿಂದ ಕೊರಚ. ಭೋವಿ, ಕೊರಮ ಸೇರಿ 101 ಜಾತಿಗಳಿಗೆ ಅನ್ಯಾಯವಾಗಲಿದೆ. ಈ ಸತ್ಯಾಂಶ ಅರಿಯದೇ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಈಗಾಗಲೆ ವರದಿ ಜಾರಿಗೆ ಮುಂದಾಗಿ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿತು. ಕಾಂಗ್ರೆಸ್ ಪಕ್ಷವು ಸದಾಶಿವ ಆಯೋಗದ ವರದಿ ಜಾರಿಗೆ ಶಿಫಾರಸ್ಸು ಮಾಡಿರುವುದು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಭೋವಿ ಸಮಾಜದ ಮುಖಂಡರಾದ ಭೀಮಣ್ಣ ಹಿರೇಮನಿ, ನಾಗರೆಡ್ಡಿ, ನಾರಾಯಣಪ್ಪ ರಾಠೋಡ, ದೇವರಡ್ಡಿ ಬೋವಿ, ಹುಚ್ಚೇಶ್ವರ ಭಜಂತ್ರಿ, ದೇವಪ್ಪ ರಾಠೋಡ ಸೇರಿ ಇತರರಿದ್ದರು.