ಯುವಜನ ಕೇಂದ್ರಿತ ಅಂಚೆ ವ್ಯವಸ್ಥೆಗೆ ವಿನೂತನ ಪ್ರಯತ್ನ

KannadaprabhaNewsNetwork |  
Published : Feb 05, 2026, 01:30 AM IST
ದೊಡ್ಡಬಳ್ಳಾಪುರದ ಗೀತಂ ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರ ನೂತನ ಝೆನ್‌-ಜೀ ಅಂಚೆ ಕಚೇರಿಯನ್ನು ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳಿಗೆ, ಯುವ ಪೀಳಿಗೆಗೆ ಭಾರತೀಯ ಅಂಚೆಯನ್ನು ತಲುಪಿಸುವ ನಿಟ್ಟಿನಲ್ಲಿ ಝೇನ್ ಜೀ ಗೆ ಅಗತ್ಯವಾದ ಸೌಲಭ್ಯಗಳನ್ನು ಒಳಗೊಂಡ ಅಂಚೆ ಕಚೇರಿಗಳನ್ನು ತೆರೆಯಲಾಗುತ್ತಿದೆ ಎಂದು ಕರ್ನಾಟಕ ಸರ್ಕಲ್‌ನ ಪೋಸ್ಟಲ್ ಸರ್ವೀಸ್ ನಿರ್ದೇಶಕ ಸಂದೇಶ್ ಮಹಾದೇವಪ್ಪ ತಿಳಿಸಿದರು.

ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳಿಗೆ, ಯುವ ಪೀಳಿಗೆಗೆ ಭಾರತೀಯ ಅಂಚೆಯನ್ನು ತಲುಪಿಸುವ ನಿಟ್ಟಿನಲ್ಲಿ ಝೇನ್ ಜೀ ಗೆ ಅಗತ್ಯವಾದ ಸೌಲಭ್ಯಗಳನ್ನು ಒಳಗೊಂಡ ಅಂಚೆ ಕಚೇರಿಗಳನ್ನು ತೆರೆಯಲಾಗುತ್ತಿದೆ ಎಂದು ಕರ್ನಾಟಕ ಸರ್ಕಲ್‌ನ ಪೋಸ್ಟಲ್ ಸರ್ವೀಸ್ ನಿರ್ದೇಶಕ ಸಂದೇಶ್ ಮಹಾದೇವಪ್ಪ ತಿಳಿಸಿದರು.ತಾಲೂಕಿನ ನಾಗದೇನಹಳ್ಳಿಯಲ್ಲಿರುವ ಗೀತಂ ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರ ಆರಂಭಿಸಲಾದ ನೂತನ ಝೆನ್‌-ಜೀ ಅಂಚೆ ಕಚೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಚೆ ವ್ಯವಸ್ಥೆಯಲ್ಲಿ ಕಾಲಾಂತರದಲ್ಲಿ ಪತ್ರಗಳ ವ್ಯವಹಾರ ಕಡಿಮೆ ಆಯಿತು. ಇದರಿಂದ ವಿವಿಧ ಸೇವೆಯನ್ನು ಅಂಚೆ ಅಡಿಯಲ್ಲಿ ಆರಂಭಿಸಲಾಯಿತು. ಪಾಸ್‌ಪೋರ್ಟ್, ಆಧಾರ ಸೀಡಿಂಗ್, ವಿಶ್ವಕರ್ಮ ಯೋಜನೆಯ ಕಿಟ್‌ನ್ನು ಹಳ್ಳಿಗಳಿಗೆ ಸರಬರಾಜು ಮಾಡುವ ನಿಟ್ಟಿನಲ್ಲಿ ಕೂಡ ಅಂಚೆ ಇಲಾಖೆ ಕೆಲಸ ಮಾಡುತ್ತಿದೆ. ಅಂಚೆ ಇಲಾಖೆ ಸಚಿವರು ಕೆಲ ಅಂಚೆ ಕಚೇರಿಯನ್ನು ಪರಿಶೀಲಿಸಿ, ವಿದ್ಯಾರ್ಥಿಗಳಿಗೆ ಯುವ ಜನತೆಯೊಂದಿಗೆ ಕನೆಕ್ಟ್ ಆಗುವ ನಿಟ್ಟಿನಲ್ಲಿ ಅಂಚೆ ಕಚೇರಿಯಲ್ಲಿ ಬದಲಾವಣೆಯನ್ನು ತರಲಾಗಿದೆ. ಯುವ ಜನತೆಗೆ ಸಾಕಷ್ಟು ರೀತಿಯ ಸೌಲಭ್ಯಗಳು ಇಲ್ಲಿ ಸಿಗುತ್ತದೆ ಎಂದರು.

ಬೆಂಗಳೂರು ವಲಯದ ಪೋಸ್ಟಲ್ ಸರ್ವೀಸ್ ನಿರ್ದೇಶಕಿ ವಿ. ತಾರಾ ಮಾತನಾಡಿ, ಅಂಚೆ ಇಲಾಖೆಯೂ ಸಾಕಷ್ಟು ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ಇದೀಗ ಆರಂಭಿಸಲಾಗಿರುವ ಝೇನ್ ಜೀ ಫೋಸ್ಟ್ ಆಫೀಸ್ ಎಂಬ ವಿಶೇಷ ಅಂಚೆ ಕಚೇರಿಯಲ್ಲಿ ಇಂದಿನ ಯುವ ಪೀಳಿಗೆಗೆ ಅಗತ್ಯವಾದ ಸೌಲಭ್ಯಗಳಿದೆ. ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಈ ಅಂಚೆಗಳು ಆರಂಭಿಸಲಾಗುತ್ತಿದೆ. ಇಲ್ಲಿ ಉಚಿತ ವೈಪೈ, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಕ್ರೀಡಾ ಸ್ಥಳ, ಫೋಟೋ ಪ್ರೇಮ್, ಪುಸ್ತಕಗಳು ಸೇರಿದಂತೆ ಯುವ ಜನತೆಗೆ ಅಗತ್ಯವಾದ ಸೌಲಭ್ಯಗಳನ್ನು ಕೂಡ ಇಲ್ಲಿ ಲಭ್ಯವಿರಲಿದೆ. ಕಾಫಿ ವ್ಯವಸ್ಥೆ ಕೂಡ ಇಲ್ಲಿ ಇರಲಿದೆ. ಅಂಚೆ ಕಚೇರಿಯಲ್ಲಿ ಸಾಕಷ್ಟು ಬದಲಾವಣೆಗಳು ಬಂದಿವೆ. ಡಿಜಿಟಲ್ ಪಾವತಿಗೂ ಕೂಡ ಅಂಚೆ ಕಚೇರಿಗಳಲ್ಲಿ ಲಭ್ಯವಿದ್ದು, ಸಾಕಷ್ಟು ಯೋಜನೆಗಳ ಸೌಲಭ್ಯವನ್ನು ಕೂಡ ಅಂಚೆ ಕಚೇರಿಯ ಮೂಲಕ ಪಡೆಯಬಹುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರೆಸಿಡೆಂಟ್ ಡೈರೆಕ್ಟರ್ ವಿಜಯ್ ಗುಜ್ಜಿ, ಅಂಚೆ ಇಲಾಖೆ ಅಧಿಕಾರಿಗಳು, ಗೀತಂ ವಿಶ್ವವಿದ್ಯಾಲಯದ ಸಿಬ್ಬಂದಿ ವಿದ್ಯಾರ್ಥಿಗಳು ಹಾಜರಿದ್ದರು.

ಫೋಟೋ-

4ಕೆಡಿಬಿಪಿ4- ದೊಡ್ಡಬಳ್ಳಾಪುರದ ಗೀತಂ ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರ ನೂತನ ಝೆನ್‌-ಜೀ ಅಂಚೆ ಕಚೇರಿಯನ್ನು ಉದ್ಘಾಟಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅದ್ಧೂರಿ ಮಾರಿಕಾಂಬೆ ಉತ್ಸವ ಮೂರ್ತಿ ಮೆರವಣಿಗೆ
ಗುರಿ ಸಾಧನೆಗೆ ಶ್ರಮ ಮುಖ್ಯ: ಭುವನೇಶ್ವರಿ