ಜಿಲ್ಲಾ ವಕ್ಫ್ ಅಧಿಕಾರಿಗಳಿಂದ ಹುಣಸೂರು ತಾಲೂಕಿನ ವಕ್ಫ್ ಆಸ್ತಿಗಳ ತಪಾಸಣೆ

KannadaprabhaNewsNetwork |  
Published : Jul 30, 2025, 12:45 AM IST
43 | Kannada Prabha

ಸಾರಾಂಶ

ಹುಣಸೂರು ಟೌನ್ ಮತ್ತು ತಾಲೂಕಿನ ಹಲವಾರು ಮಸೀದಿಯ ವಕ್ಫ್ ಕಮಿಟಿಗಳು, ಈದಿಗಾ, ದರ್ಗಾಗಳು ತಮ್ಮ ಸಮಸ್ಯೆಗಳ ಬಗ್ಗೆ ಜ್ಞಾಪನಾ ಪತ್ರ ಸಲ್ಲಿಸಿದರು. ಅಜೀಜ್‌ ಉಲ್ಲಾ ಅವರು ವಕ್ಫ್ ಸಚಿವ ಜಮೀರ್ ಅಹಮದ್ ಖಾನ್‌ ಅವರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ಜಿಲ್ಲಾ ವಕ್ಫ್ ಬೋಡ್ ಸಲಹಾ ಸಮಿತಿ ಪದಾಧಿಕಾರಿಗಳು ಜಿಲ್ಲಾ ವಕ್ಫ್ ಅಧಿಕಾರಿಗಳಿಂದ ಹುಣಸೂರು ತಾಲೂಕಿನ ವಕ್ಫ್ ಆಸ್ತಿಗಳ ತಪಾಸಣೆ ಮತ್ತು ಮುತಾವಲಿ ಸಭೆ ನಡೆಯಿತು.

ಜಿಲ್ಲಾ ವಕ್ಫ್ ಬೋಡ್ ಸಲಹಾ ಸಮಿತಿಯು ಅಧಿಕಾರ ವಹಿಸಿಕೊಂಡ ನಂತರ ಪ್ರಥಮ ಬಾರಿಗೆ ಹುಣಸೂರು ತಾಲೂಕಿಗೆ ಒಂದು ದಿನದ ಭೇಟಿ ನೀಡಿ ವಕ್ಫ್ ಬೋರ್ಡ್ ಅಧೀನದಲ್ಲಿರುವ ವಕ್ಫ್ ಸಂಸ್ಥೆಗಳು, ಮಸೀದಿ ಮದ್ರೀಸ್‌ಗಳು, ದರ್ಗಾಗಳಿಗೆ ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿ ಮುಸ್ತಾಕ್ ಅಹಮದ್ ಮತ್ತು ವಕ್ಫ್ ಇನ್ಸ್‌ಪೆಕ್ಟರ್ ಮೊಹಮ್ಮದ್ ಯೂನುಸ್, ಸಿಬ್ಬಂದಿ ಸಮ್ಮುಖದಲ್ಲಿ ತಪಾಸಣೆ ನಡೆಸಿತು.

ನಿಯೋಗದಲ್ಲಿ ಅಧ್ಯಕ್ಷ ಶ್ರೀಅಜೀಜ್‌ ಉಲ್ಲಾ, ಉಪಾಧ್ಯಕ್ಷರಾದ ಎಸ್.ಎ.ಖಲೀಲ್ ಅಹಮದ್, ಸಬ್ನಮ್ ಸಯೀದ್, ಸದಸ್ಯರಾದ ನಸೀರುದ್ದೀನ್ ಬಾಬು, ಸೈಯದ್ ಇಬ್ರಾಹಿಂ, ಎ.ಆರ್.ಎಂ.ಅಮ್ಜದ್ ಪಾಷ, ನಿಸಾರ್ ಅಹಮದ್, ಅಸ್ಗರ್, ಸರ್ಫುದ್ದೀನ್ ಮತ್ತು ಇತರೆ ಗಣ್ಯರಾದ ಸಮೀ ಅಜ್ಜು, ರಿಜ್ವಾನ್ ಅಜ್ಜು ಇದ್ದರು.

ಮಾರ್ಗ ಮಧ್ಯೆ ಬಿಳಿಕೆರೆಯ ಈದಿಗಾ ಮಸೀದಿಗೆ ಭೇಟಿ ನೀಡಿ ಶೇ.75 ರಷ್ಟು ಪೂರ್ಣಗೊಂಡ ಕಟ್ಟಡವನ್ನು ಪರಿಶೀಲಿಸಲಾಯಿತು. ಇದರ ವ್ಯವಸ್ಥಾಪಕರು ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಲು ಹಣ ಬಿಡುಗಡೆ ಮಾಡಲು ಕೋರಿದರು.

ಹುಣಸೂರು ಟೌನ್‌ನ ವಕ್ಫ್ ಆಸ್ತಿಗಳಿಗೆ ಭೇಟಿ ನೀಡಲಾಯಿತು. ರತ್ನಪುರಿಯಲ್ಲಿರುವ ಜಮಾಲ್ ಬೀ ಬೀ ಮಾ ಸಾಹೆಬ ಗೋರಿಗೆ ಭೇಟಿ ನೀಡಿ ಫಾತೆ ಹಾಖಾನಿ, ದುವಾ ನೆರವೇರಿಸಿ ಪುಷ್ಪ ನಮನ ಸಲ್ಲಿಸಲಾಯಿತು.

ಹುಣಸೂರಿನ ಮಾಜಿ ಶಾಸಕ ಮಂಜುನಾಥ್‌ ಅವರ ಮಾರ್ಗದರ್ಶನದಲ್ಲಿ ಜಾಮಿಯ ಕಮಿಟಿ ಪದಾಧಿಕಾರಿಗಳ ಸಮ್ಮುಖದಲ್ಲಿ ರತ್ನಪುರಿಯ ಜೆ.ಕೆ. ಪಂಕ್ಷನ್ ಹಾಲ್‌ನಲ್ಲಿ ಮುತಾವಲಿ ಸಭೆ ನಡೆಯಿತು.

ಮಂಜುನಾಥ್ ಮತ್ತು ಅಧ್ಯಕ್ಷ ಅಜೀಜ್‌ ಉಲ್ಲಾ ಅಜ್ಜು, ಸದಸ್ಯರಾದ ಅಸ್ಗರ್ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮತ್ತು ವಕ್ಫ್ ಮತ್ತು ಅಲ್ಪಸಂಖ್ಯಾತರ ಸಚಿವ ಜಮೀರ್ ಅಹಮದ್ ಖಾನ್ ಅವರ ಗಣನೀಯ ಸೇವೆಯನ್ನು ಶ್ಲಾಘಿಸಿ ವಕ್ಫ್ ಅಲ್ಪಸಂಖ್ಯಾತರಿಗೆ ಹೆಚ್ಚಿನ ಅನುದಾನ ನೀಡಿರುವುದಕ್ಕೆ ಅಭಿನಂದಿಸಿದರು.

ಜಿಲ್ಲಾ ವಕ್ಫ್ ಅಧಿಕಾರಿ ಮುಸ್ತಾಕ್ ಅಹಮದ್ ಅವರು ವಕ್ಫ್ ಆಸ್ತಿಯ ದಾಖಲಾತಿಗಳ ಬಗ್ಗೆ ಮಸೀದಿಯ ವ್ಯವಸ್ಥಾಪಕ ಸಮಿತಿ, ಈದಿಗಾ, ದರ್ಗಾ, ವಕ್ಫ್ ಸಂಸ್ಥೆಗಳಿಗೆ ವಿವರಿಸಿದರು. ವಕ್ಫ್ ಅದಾಲತ್ ನಡೆಯಿತು.

ಹುಣಸೂರು ಟೌನ್ ಮತ್ತು ತಾಲೂಕಿನ ಹಲವಾರು ಮಸೀದಿಯ ವಕ್ಫ್ ಕಮಿಟಿಗಳು, ಈದಿಗಾ, ದರ್ಗಾಗಳು ತಮ್ಮ ಸಮಸ್ಯೆಗಳ ಬಗ್ಗೆ ಜ್ಞಾಪನಾ ಪತ್ರ ಸಲ್ಲಿಸಿದರು. ಅಜೀಜ್‌ ಉಲ್ಲಾ ಅವರು ವಕ್ಫ್ ಸಚಿವ ಜಮೀರ್ ಅಹಮದ್ ಖಾನ್‌ ಅವರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.

ಸನ್ಮಾನ ಕಾರ್ಯಕ್ರಮದಲ್ಲಿ ಜಾಮಿಯ ಸಮಿತಿ ರತ್ನಪುರಿ ಮತ್ತು ಇತರೆ ವಕ್ಫ್ ಸಂಸ್ಥೆಗಳು, ಮಸೀದಿ ಈದಿಗಾ, ದರ್ಗಾ ಸಮಿತಿ ಪದಾಧಿಕಾರಿಗಳು ಜಿಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮಾಜಿ ಶಾಸಕ ಮಂಜುನಾಥ್, ರಾಜಕೀಯ ಮುಖಂಡರು ಸನ್ಮಾನಿಸಿದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಉಪಾಧ್ಯಕ್ಷ ಎಸ್.ಜಯರಾಂ ನಿರೂಪಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ