ಗ್ರಾಮ ಸುಭೀಕ್ಷೆಯಾಗಿರಬೇಕೆಂದು ಕರಿಗಲ್ಲು ಸ್ಥಾಪನೆ: ವಾಲ್ಮೀಕಿ ಶ್ರೀ

KannadaprabhaNewsNetwork | Published : May 10, 2025 1:07 AM
Follow Us

ಸಾರಾಂಶ

ಕರಿಗಲ್ಲು ಪ್ರತಿಷ್ಠಾಪನೆಯಿಂದ ಇಡೀ ಊರಿಗೆ ಒಳ್ಳೆಯದಾಗಲಿ, ಸಕಾಲಕ್ಕೆ ಮಳೆಯಾಗಿ ಸಮೃದ್ಧಿ ಬೆಳೆ ಕೈಗೆ ಸಿಗುವಂತಾಗಲಿ

ಹರಪನಹಳ್ಳಿ: ಇಡೀ ಗ್ರಾಮ ಸುಭಿಕ್ಷೆಯಾಗಿರಬೇಕು, ಯಾವುದೇ ಕೆಡಕು ಆಗಬಾರದು ಎಂಬ ಕಾರಣಕ್ಕೆ ಪ್ರತಿಯೊಂದು ಗ್ರಾಮದಲ್ಲಿ ಕರಿಗಲ್ಲು ಸ್ಥಾಪನೆ ಮಾಡಲಾಗುತ್ತದೆ, ಸನಾತನ ಕಾಲದಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲೂಕಿನ ಕನಕನಬಸಾಪುರ ಗ್ರಾಮದಲ್ಲಿ ನೂತನ ಕರಿಗಲ್ಲು ಪ್ರತಿಷ್ಠಾಪನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು ಭಾರತ ವೇದ ಉಪನಿಷತ್ತು ಮಹತ್ವ ಇಡೀ ಜಗತ್ತಿಗೆ ಸಾರಿದ ದೇಶ ಇಲ್ಲಿ ಧಾರ್ಮಿಕವಾಗಿ ಭಕ್ತಿಭಾವಕ್ಕೆ ವಿಶಿಷ್ಟ ಆದ್ಯತೆ ನೀಡಲಾಗುತ್ತದೆ ಎಂದು ನುಡಿದರು.

ಕರಿಗಲ್ಲು ಪ್ರತಿಷ್ಠಾಪನೆಯಿಂದ ಇಡೀ ಊರಿಗೆ ಒಳ್ಳೆಯದಾಗಲಿ, ಸಕಾಲಕ್ಕೆ ಮಳೆಯಾಗಿ ಸಮೃದ್ಧಿ ಬೆಳೆ ಕೈಗೆ ಸಿಗುವಂತಾಗಲಿ ಎಂದು ಹಾರೈಸಿದರು.

ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ಧಾರ್ಮಿಕ ಆಚರಣೆಗಳಿಂದ ಗ್ರಾಮಕ್ಕೆ ಶಾಂತಿ, ನೆಮ್ಮದಿ ದೊರಕಲಿ ಜತೆಗೆ ಗ್ರಾಮಸ್ಥರು ಸರ್ಕಾರದ ಸೌಲಭ್ಯ ಪಡೆದು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಎಂದರು.

ಮಾಜಿ ಸಂಸದ ವೈ. ದೇವೇಂದ್ರಪ್ಪ ಮಾತನಾಡಿ, ಗ್ರಾಮದಲ್ಲಿ ಒಗ್ಗಟ್ಟು ಇದ್ದರೆ ಇಂತಹ ಧಾರ್ಮಿಕ ಕಾರ್ಯಕ್ರಮಗಳು ನಡೆಯಲು ಸಾಧ್ಯ, ಇದರ ಜತೆಗೆ ಶಿಕ್ಷಣಕ್ಕೂ ಆದ್ಯತೆ ನೀಡಿ ನಾನು ನನ್ನ ಸ್ವಂತ ಪರಿಶ್ರಮದಿಂದ ಮಕ್ಕಳನ್ನ ಓದಿಸಿ ಇಂದು ರಾಜ್ಯಕ್ಕೆ ಉತ್ತಮ ಪ್ರಜೆಗಳಾಗಿ ನೀಡಿದ್ದೇನೆ ಎಂದರು.

ಆವರಗೊಳ್ಳದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕನಕನಬಸಾಪುರ ಎನ್ನುವುದು ಬಂಗಾರದ ಬಸಾಪುರ ಇಲ್ಲಿ ಸರ್ವ ಜನಾಂಗದವರು ಸೇರಿ ಬಹಳ ವಿಜೃಂಭಣೆಯಿಂದ ಕರಿಗಲ್ಲು ಸ್ಥಾಪಿಸಿರುವುದು ಸಂತೋಷ ನಮ್ಮ ಸನಾತನ ಧರ್ಮಕ್ಕೆ ಎಷ್ಟು ಮಹತ್ವವಿದೆ ಎನ್ನುವುದು ಇಲ್ಲಿ ಎತ್ತಿ ತೋರಿಸುತ್ತದೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿರುವುದು ಖುಷಿ ವಿಚಾರ ಎಂದರು.

ಬಸವ ತತ್ವ ಚಿಂತಕ ಡಿ. ಶಾಬ್ರಿನ ಮಹಮದ್ ಅಲಿ ಬಸವ ತತ್ವ ಕುರಿತು ಮಾತನಾಡಿದರು.

ಅರಸೀಕೆರೆ ಕೋಲಶಾಂತೇಶ್ವರ ಮಠದ ಶ್ರೀಶಾಂತಲಿಂಗ ದೇಶೀಕೇಂದ್ರ ಸ್ವಾಮಿಜಿ ಆಶೀರ್ವಚನ ನೀಡಿದರು, ಗ್ರಾ ಪಂ ಅಧ್ಯಕ್ಷ ಕೆ. ಆನಂದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ. ಅಣ್ಣಪ್ಪ, ಅರಸೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಂಮ್ಮತ್ತಹಳ್ಳಿ ಮಂಜುನಾಥ್, ಟಿಎಪಿಸಿಎಂಎಸ್‌ ಅಧ್ಯಕ್ಷ ಬಿ.ಕೆ. ಪ್ರಕಾಶ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಕೆ. ಮಂಜುನಾಥ, ಕೆ.ಮಹಾಂತೇಶ, ಸಲಾಂ ಸಾಹೇಬ್, ಡಿ. ವೀರಣ್ಣ, ಶಾರದಾ ಬಾಯಿ, ಕೆಂಚಪ್ಪ, ಶಾರದಾ, ಬರ್ಕತ್‌ಅಲಿ, ಎ. ರವಿಕುಮಾರ್ ಸೇರಿದಂತೆ ಗ್ರಾಮಸ್ಥರು ಇದ್ದರು.