ಸೂರಾಪುರ ಆಂಜನೇಯಸ್ವಾಮಿ ದೇಗುಲದ ಗರುಡಕಂಬ ಸ್ಥಾಪನೆ

KannadaprabhaNewsNetwork |  
Published : Nov 16, 2025, 01:30 AM IST
ಬೇಲೂರು ತಾಲೂಕು ಕಸಬಾ ಹೋಬಳಿ ಎಸ್. ಸೂರಾಪುರ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಗರುಡಕಂಬ ಸ್ಥಾಪನೆ | Kannada Prabha

ಸಾರಾಂಶ

ಗ್ರಾಮಸ್ಥರ ಹಲವಾರು ವರ್ಷಗಳ ಕನಸಾಗಿದ್ದ ಗರುಡಕಂಬ ಸ್ಥಾಪನಾ ಕಾರ್ಯ ಶನಿವಾರ ಬೆಳಗ್ಗೆ 8 ಗಂಟೆಗೆ ಆರಂಭಗೊಂಡು ಶ್ರೀ ಆಂಜನೇಯಸ್ವಾಮಿ ಹಾಗೂ ಪರಿವಾರ ದೇವತೆಗಳಿಗೆ ಅಚ್ಚುಕಟ್ಟಾಗಿ ಅಭಿಷೇಕ ಹಾಗೂ ಹೋಮ, ಹವನ ನೆರವೇರಿಸಲಾಯಿತು. ಗರುಡಕಂಬ ಸ್ಥಾಪನೆಯ ಬಳಿಕ ಮಹಾಮಂಗಳಾರತಿ ನೆರವೇರಿದ್ದು, ಭಕ್ತರಿಗೆ ತೀರ್ಥ, ಪ್ರಸಾದವನ್ನು ವಿತರಿಸಲಾಯಿತು. . ದೇವಸ್ಥಾನದ ಮುಂದಿನ ಭಾಗದಲ್ಲಿ ಗರುಡಕಂಬವನ್ನು ಪ್ರತಿಷ್ಠಾಪಿಸಬೇಕು ಎಂಬ ಅಭಿಲಾಷೆಯನ್ನು ಗ್ರಾಮಸ್ಥರ ಸಭೆಯಲ್ಲಿ ಚರ್ಚಿಸಿ, ಇಂದು ಗರುಡಕಂಬ ಸ್ಥಾಪನೆಯ ಮಹೋತ್ಸವ ಯಶಸ್ವಿಯಾಗಿ ಜರುಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಬೇಲೂರು: ಎಸ್. ಸೂರಾಪುರ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಗರುಡಕಂಬ ಸ್ಥಾಪನಾ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಗ್ರಾಮಸ್ಥರ ಹಲವಾರು ವರ್ಷಗಳ ಕನಸಾಗಿದ್ದ ಗರುಡಕಂಬ ಸ್ಥಾಪನಾ ಕಾರ್ಯ ಶನಿವಾರ ಬೆಳಗ್ಗೆ 8 ಗಂಟೆಗೆ ಆರಂಭಗೊಂಡು ಶ್ರೀ ಆಂಜನೇಯಸ್ವಾಮಿ ಹಾಗೂ ಪರಿವಾರ ದೇವತೆಗಳಿಗೆ ಅಚ್ಚುಕಟ್ಟಾಗಿ ಅಭಿಷೇಕ ಹಾಗೂ ಹೋಮ, ಹವನ ನೆರವೇರಿಸಲಾಯಿತು. ಗರುಡಕಂಬ ಸ್ಥಾಪನೆಯ ಬಳಿಕ ಮಹಾಮಂಗಳಾರತಿ ನೆರವೇರಿದ್ದು, ಭಕ್ತರಿಗೆ ತೀರ್ಥ, ಪ್ರಸಾದವನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮದ ರಮೇಶ್, ಅಣ್ಣೇಗೌಡ ಹಾಗೂ ಕೃಷ್ಣಮೂರ್ತಿ ಅವರು, ಶ್ರೀ ಆಂಜನೇಯಸ್ವಾಮಿ ದೇಗುಲವನ್ನು ಹೊಸದಾಗಿ ನಿರ್ಮಿಸಿ ಇದೀಗ ನಾಲ್ಕು ವರ್ಷಗಳು ಕಳೆದಿವೆ. ದೇವಸ್ಥಾನದ ಮುಂದಿನ ಭಾಗದಲ್ಲಿ ಗರುಡಕಂಬವನ್ನು ಪ್ರತಿಷ್ಠಾಪಿಸಬೇಕು ಎಂಬ ಅಭಿಲಾಷೆಯನ್ನು ಗ್ರಾಮಸ್ಥರ ಸಭೆಯಲ್ಲಿ ಚರ್ಚಿಸಿ, ಎಲ್ಲರ ಸಹಕಾರದಿಂದ ನಿರ್ಣಯ ಕೈಗೊಂಡಿದ್ದೇವೆ. ಅದರ ಫಲವಾಗಿ ಇಂದು ಗರುಡಕಂಬ ಸ್ಥಾಪನೆಯ ಮಹೋತ್ಸವ ಯಶಸ್ವಿಯಾಗಿ ಜರುಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಈ ಮಹತ್ವದ ಧಾರ್ಮಿಕ ಕಾರ್ಯಕ್ರಮದಲ್ಲಿ ಗ್ರಾಮದ ಆನಂದ್, ಲೋಕೇಶ್, ಅಣ್ಣಪ್ಪ, ಕಾಂತರಾಜು, ಶ್ರೀಧರ್, ವಿನಯ್, ಸೋಮಶೇಖರ್ ಸೇರಿದಂತೆ ಗ್ರಾಮಸ್ಥರು ಹೆಚ್ಚಿನ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ
ಹೋರಾಟಗಾರರ ಮೇಲಿನ ಎಲ್ಲ ಕೇಸ್ ಹಿಂಪಡೆಯಿರಿ