ಕೊಪ್ಪಳ: ಪಾಲಕರು, ಶಿಕ್ಷಕರು ಮಕ್ಕಳಿಗೆ ಶೈಕ್ಷಣಿಕವಾಗಿ ಸಾಧನೆಗೈಯಲು ಅಚಲ ಆತ್ಮವಿಶ್ವಾಸ ತುಂಬಬೇಕು ಎಂದು ನಗರದ ಸರ್ಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ರಾಜಶೇಖರ ಪಾಟೀಲ್ ಹೇಳಿದರು.
ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಜಿ.ಎಸ್. ಮಾತನಾಡಿ, ಮಕ್ಕಳ ಮನಸು ಅತ್ಯಂತ ವಿಶಾಲವಾದದ್ದು. ಎಲ್ಲವನ್ನು ಗ್ರಹಿಸುವ ಶಕ್ತಿ ಹೊಂದಿರುತ್ತಾರೆ. ಅದನ್ನು ಸರಿಯಾಗಿ ಉಪಯೋಗಿಸಕೊಳ್ಳೆಬೇಕು ಎಂದರು.
ಶಾಲಾ ಉಪ ಪ್ರಾಂಶುಪಾಲೆ ಜ್ಯೋತಿ ಎಸ್.ಎಸ್ ಸಂಸ್ಥೆಯ ಶೈಕ್ಷಣಿಕ ವರ್ಷದ ಸಾಧನೆಯನ್ನು ಮತ್ತು ಮಕ್ಕಳ ಪ್ರಗತಿ ಕುರಿತು ಮಾತನಾಡಿದರು.ಸಂಸ್ಥೆಯ ಅಧ್ಯಕ್ಷ ದಾನಪ್ಪ ಕವಲೂರು ಮಾತನಾಡಿ, ಯಾವ ದೇಶದಲ್ಲಿ ಶಾಲೆಗಳಿಗಿಂತ ದೇವಾಲಯಗಳ ಘಂಟೆ ಹೆಚ್ಚು ಬಾರಿಸುತ್ತವೆಯೋ ಆ ದೇಶದಲ್ಲಿ ಅಜ್ಞಾನ ಮತ್ತು ಬಡತನವಿರುತ್ತದೆ. ಯಾವ ದೇಶದಲ್ಲಿ ದೇವಾಲಯಗಳಿಗಿಂತ ಶಾಲೆಗಳ ಗಂಟೆ ಹೆಚ್ಚು ಬಾರಿಸುತ್ತವೆಯೋ ಆ ದೇಶದಲ್ಲಿ ಶ್ರೀಮಂತಿಕೆ ಇರುತ್ತದೆ ಎಂದು ಡಾ.ಅಂಬೇಡ್ಕರ್ ಹೇಳಿದ್ದು, ಶಿಕ್ಷಣದ ಪ್ರಗತಿಗೆ ಆದ್ಯತೆ ಹೆಚ್ಚು ನೀಡಬೇಕು ಎಂದರು.
ಶಾಲಾ ಪ್ರಾಂಶುಪಾಲ ಲಿಲಿಯನ್ ಅಂಟೋನಿ, ಭಾಗ್ಯನಗರದ ಪಪಂ ಸದಸ್ಯರು, ಸಂಸ್ಥೆಯ ಸಿಬ್ಬಂದಿ, ಮಕ್ಕಳು, ಪಾಲಕರು ಇತರರಿದ್ದರು.