ಹರಪನಹಳ್ಳಿ: ನಮ್ಮ ಪೂರ್ವಿಕರು ಹಬ್ಬ- ಹರಿದಿನಗಳನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಸಂಪ್ರದಾಯಗಳನ್ನು ರೂಢಿ ಮಾಡಿದ್ದಾರೆ. ಅವುಗಳನ್ನು ಮುಂದಿನ ಪೀಳಿಗೆಯು ಆಚರಣೆ ಮಾಡುವ ಸಂಸ್ಕೃತಿಯನ್ನು ಮಕ್ಕಳಲ್ಲಿ ಬೆಳೆಸಬೇಕಿದೆ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ತಿಳಿಸಿದರು.
ತಾಲೂಕಿನ ಹಲುವಾಗಲು ಗ್ರಾಮದ ತುಂಗಭದ್ರಾ ನದಿ ಬಳಿ ಪ್ರತಿವರ್ಷದಂತೆ ಮಕರ ಸಂಕ್ರಾಂತಿ ಹಬ್ಬವನ್ನು ಸೋಮವಾರ ಎಳ್ಳು ಬೆಲ್ಲ ಬೀರಿ ಸಾಮೂಹಿಕ ರೊಟ್ಟಿ ಊಟದ ಸವಿಯೊಂದಿಗೆ ಮಾತನಾಡಿದರು.ಪ್ರತಿ ಹಬ್ಬಗಳಲ್ಲಿ ವಿಶಿಷ್ಟ ರೀತಿಯ ಭಕ್ಷ್ಯಗಳನ್ನು ತಯಾರಿಸಿ ನೈವೇದ್ಯ ಮಾಡುವ ಪರಿಪಾಠ ನಮ್ಮಲ್ಲಿ ಚಾಲ್ತಿಯಲ್ಲಿದೆ. ಪ್ರಮುಖವಾಗಿ ಸಂಕ್ರಾಂತಿ ಹಬ್ಬ ಚಳಿಗಾಲ ಮುಗಿಸಿ ಬೇಸಿಗೆ ಕಾಲಕ್ಕೆ ಪರ್ದಾಪಣೆ ಮಾಡುವ ಕಾಲ. ಈ ಹಬ್ಬದಲ್ಲಿ ಎಳ್ಳು ಬೆಲ್ಲ ಹಂಚಿ ಆಚರಣೆ ಮಾಡುವುದರಲ್ಲಿ ವೈಜ್ಞಾನಿಕ ಮಹತ್ವವಿದೆ ಎಂದರು.
ಸಂಕ್ರಾತಿ ಹಬ್ಬದಾಚರಣೆಗೆ ಆಗಮಿಸಿದ ಎಲ್ಲರಿಗೂ ಎಳ್ಳು- ಬೆಲ್ಲ ನೀಡಿ ಸ್ವಾಗತಿಸಿದ್ದು ವಿಶೇಷವಾಗಿತ್ತು. ಗದಗ ಜಿಲ್ಲೆಯ ರೋಣ ತಾಲೂಕಿನ ಕೋತಬಾಳ ಗ್ರಾಮದ ಅರುಣೋದಯ ಕಲಾ ತಂಡದ ಶಂಕರಣ್ಣ ಸಂಕಣ್ಣನವರ್ ಅವರ ನೇತೃತ್ವದಲ್ಲಿ 14 ಜನರು ಜಾನಪದ ಹಾಡು, ಜನಪದ ನೃತ್ಯ, ಸುಗ್ಗಿ ನೃತ್ಯ, ದೀಪದ ನೃತ್ಯ, ಕಾಡು ನೃತ್ಯ ನೆರೆದ ಪ್ರೇಕ್ಷಕರಿಗೆ ಮುದ ನೀಡಿದವು.ಮುಖಂಡರಾದ ಎಚ್.ಎಂ. ಮಲ್ಲಿಕಾರ್ಜುನ, ಗೌತಮಪ್ರಭು, ಪುರಸಭಾ ಸದಸ್ಯರಾದ ಎಂ.ವಿ. ಅಂಜಿನಪ್ಪ, ಗೊಂಗಡಿ ನಾಗರಾಜ, ಲಾಟಿ ದಾದಾಪೀರ, ಉದ್ದಾರ ಗಣೇಶ, ಟಿ. ವೆಂಕಟೇಶ, ಡಿವೈಎಸ್ಪಿ ವೆಂಕಟಪ್ಪ ನಾಯಕ, ಸಿಪಿಐ ನಾಗರಾಜ ಎಂ. ಕಮ್ಮಾರ, ಪಿಎಸ್‌ಐ ನಾಗರತ್ನ, ಹಾಗೂ ತಾಪಂ ಮಾಜಿ ಅಧ್ಯಕ್ಷ ಕುಬೇರಗೌಡ, ವಸಂತಪ್ಪ, ವೈ.ಕೆ.ಬಿ. ದುರುಗಪ್ಪ, ಎಂ.ಪಿ. ನಾಯ್ಕ, ಎಲ್.ಬಿ. ಹಾಲೇಶನಾಯ್ಕ, ಕನಕನಬಸ್ಸಾಪುರ ಮಂಜುನಾಥ, ಮೇಘರಾಜ, ಮತ್ತೂರು ಬಸವರಾಜ, ಪ್ರದೀಪಗೌಡ, ಮೈದೂರು ರಾಮಣ್ಣ, ಕೆ.ಎಂ. ಬಸವರಾಜಯ್ಯ, ಎಚ್.ಎಂ. ಕೊಟ್ರಯ್ಯ, ಎಂ. ಶಂಕರ, ಸಣ್ಣ ಹಾಲಪ್ಪ, ಚಿರಸ್ಥಹಳ್ಳಿ ಮಲ್ಲಿಕಾರ್ಜನ ಕಲ್ಮಠ, ಅಗ್ರಹಾರ ಅಶೋಕ, ಉದಯಶಂಕರ, ಕಡಬಗೇರಿ ಮಲ್ಲಿಕಾರ್ಜುನಗೌಡ, ಶಕ್ಷಾವಲಿ, ಕಂಚಿಕೇರಿ ಜಯಲಕ್ಷ್ಮಿ, ನೇತ್ರಾವತಿ, ಉಮಾ, ಕವಿತಾ ಸುರೇಶ, ಅಂಜುಮನ್ ಮಾಜಿ ಅಧ್ಯಕ್ಷ ಎಂ. ಜಾವೇದ್, ಬೆನ್ನೂರು ಶಶಿಧರ, ಸಾಸ್ವಿಹಳ್ಳಿ ನಾಗರಾಜ, ಶಿವರಾಜ, ಎನ್.ಟಿ. ರತ್ನವ್ವ ಸೋಮಣ್ಣ, ಶಂಕರ, ಎ.ಎಂ. ವಿಶ್ವನಾಥ, ಬಾಣದ ಅಂಜಿನಪ್ಪ ಇತರರು ಇದ್ದರು.