ಅಂಬೇಡ್ಕರ್‌ಗೆ ಅವಮಾನ: ನಾಳೆ ಜನ ನಾಯಕರ ಚಿತ್ರಗಳಿಗೆ ಮೋರಿ ನೀರಿನ ಅಭಿಷೇಕ

KannadaprabhaNewsNetwork |  
Published : May 08, 2025, 12:31 AM IST
ಅಂಬೇಡ್ಕರ್‌ಗೆ ಅವಮಾನ: ನಾಳೆ ಜನ ನಾಯಕರ ಚಿತ್ರಗಳಿಗೆ ಮೋರಿ ನೀರಿನ ಅಭಿಷೇಕ | Kannada Prabha

ಸಾರಾಂಶ

ವರುಣಾ ವಿಧಾನಸಭಾ ಕ್ಷೇತ್ರದ ವಾಜಮಂಗಲದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅಪಮಾನವೆಸಗಿ, ಅಗೌರವ ತೋರಿರುವ ಸಂಬಂಧ ಯಾವುದೇ ಕಾನೂನು ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್, ಸಚಿವ ಎಚ್.ಸಿ.ಮಹದೇವಪ್ಪ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಭಾವಚಿತ್ರಗಳಿಗೆ ಮೇ ೮ರಂದು ಮೋರಿ ನೀರು ಎರಚಿ ಆಕ್ರೋಶ ವ್ಯಕ್ತಪಡಿಸಲಾಗುವುದು.

ಕನ್ನಡಪ್ರಭ ವಾರ್ತೆ ಮಂಡ್ಯ

ವರುಣಾ ವಿಧಾನಸಭಾ ಕ್ಷೇತ್ರದ ವಾಜಮಂಗಲದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅಪಮಾನವೆಸಗಿ, ಅಗೌರವ ತೋರಿರುವ ಸಂಬಂಧ ಯಾವುದೇ ಕಾನೂನು ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್, ಸಚಿವ ಎಚ್.ಸಿ.ಮಹದೇವಪ್ಪ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಭಾವಚಿತ್ರಗಳಿಗೆ ಮೇ ೮ರಂದು ಮೋರಿ ನೀರು ಎರಚಿ ಆಕ್ರೋಶ ವ್ಯಕ್ತಪಡಿಸಲಾಗುವುದು ಎಂದು ವಿಶ್ವ ಜ್ಞಾನಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸ್ವಾಭಿಮಾನಿ ಜಾಗೃತಿ ಅಭಿಯಾನ ಸಮಿತಿಯ ರಾಜ್ಯಾಧ್ಯಕ್ಷ ಸಿ.ಎಂ.ಕೃಷ್ಣ ತಿಳಿಸಿದರು.

ಮೈಸೂರಿನ ವಾಜಮಂಗಳ ಗ್ರಾಮದಲ್ಲಿ ರಾತ್ರೋರಾತ್ರಿ ಕಿಡಿಗೇಡಿಗಳಿಂದ ಅಂಬೇಡ್ಕರ್ ಅವರ ಪ್ರತಿಮೆಗೆ ಮಲ ಬಳೆದು, ವಿರೂಪಗೊಳಿಸಿ, ಅಪಮಾನ ಮಾಡಿರುವುದು ಸಿದ್ದರಾಮಯ್ಯ ಸರ್ಕಾರದ ಅಸಮರ್ಥತೆಯನ್ನು ತೋರುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ಇಂತಹ ದುರ್ಘಟನೆ ನಡೆದು ೨೦ ದಿನ ಕಳೆದರೂ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳದೆ ಆರೋಪಿಗಳನ್ನು ರಕ್ಷಣೆ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಸಾರ್ವಜನಿಕವಾಗಿ ಯಾವುದೇ ರೀತಿ ಪ್ರತಿಕ್ರಿಯೆ ನೀಡದೇ ಮೌನ ವಹಿಸಿ, ತಟಸ್ಥ ನಿಲುವು ತೋರುವುದು ಅಕ್ಷಮ್ಯ ಅಪರಾದ ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗೃಹ ಸಚಿವ ಪರಮೇಶ್ವರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭಾವಚಿತ್ರಗಳಿಗೆ ಮೋರಿ ನೀರು ಎರಚಲಾಗುವುದು, ಪ್ರಕರಣದ ಆರೋಪಿಗಳನ್ನು ಬಂಧಿಸಿ, ಸೂಕ್ತ ಕ್ರಮ ಕೈಗೊಳ್ಳುವವರೆಗೂ ಮುಖ್ಯಮಂತ್ರಿಗಳು ಭೇಟಿ ನೀಡುವ ಎಲ್ಲಾ ಸ್ಥಳಗಳಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಟಿ.ಆರ್.ಅರ್ಪಿತ, ಮುಖಂಡರಾದ ಎಚ್.ಕೆ.ನಾಗರಾಜು, ಪಿ.ಆನಂದ್, ವೈ.ನಾಗೇಶ್, ಶ್ರೀಕಂಠ ಗೋಷ್ಠಿಯಲ್ಲಿದ್ದರು.

ಜಾತಿ ಸಮೀಕ್ಷೆ: ಹೊಲಯ ಎಂದು ನಮೂದಿಸಿ: ವಿಜಯಲಕ್ಷ್ಮೀ

ಕನ್ನಡಪ್ರಭ ವಾರ್ತೆ ಮಂಡ್ಯ

ಸುಪ್ರೀಂ ಆದೇಶದಂತೆ ರಾಜ್ಯ ಸರ್ಕಾರ ಜಾತಿಗಣತಿ ನಡೆಸುತ್ತಿದ್ದು, ಸಮುದಾಯದ ಬಂಧುಗಳು ಕಡ್ಡಾಯವಾಗಿ ‘ಆದಿ ಕರ್ನಾಟಕ’ ಎಂದು ಮತ್ತು ಮೂಲ/ಉಪಜಾತಿಯನ್ನು ಹೊಲಯ ಎಂದು ಸ್ಪಷ್ಟವಾಗಿ ನಮೂದಿಸಿ ಎಂದು ಮಾಜಿ ನಗರಸಭಾ ಅಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್ ಮನವಿ ಮಾಡಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಒಳ ಮೀಸಲಾತಿ ಜಾರಿಗೊಳಿಸಲು ಜಾತಿಗಣತಿ ನಡೆಸಲು ಆದೇಶಿಸಲಾಗಿದ್ದು, ಮನೆ ಮನೆ ಜಾತಿ ಗಣತಿ ಸಮೀಕ್ಷೆ ವೇಳೆ ಕುಟುಂಬ ಸದಸ್ಯರು ಹಾಜರಿದ್ದು ತಪ್ಪದೇ ಗಣತಿದಾರರಿಗೆ ಮಾಹಿತಿ ನೀಡಬೇಕು ಎಂದರು.

ಮೇ ೦೫ರಿಂದ ೧೭ವರೆಗೆ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದು, ಮೇ ೧೯ರಿಂದ ೨೧ರವರೆಗೆ ಪಂಚಾಯ್ತಿ ಬೂತ್ ಮಟ್ಟದಲ್ಲಿನ ತಾತ್ಕಾಲಿಕ ಕೇಂದ್ರಗಳಲ್ಲಿ ಸ್ವತಃ ಭೇಟಿ ನೀಡಿ ಮಾಹಿತಿ ನೀಡಬಹುದಾಗಿದೆ. ಮೇ ೨೩ರವರೆಗೆ ಆನ್‌ಲೈನ್ ಮೂಲಕವೂ ಮಾಹಿತಿ ನೀಡುವ ಅವಕಾಶ ಕಲ್ಪಿಸಲಾಗಿದೆ. ಸಮಾಜದ ಎಲ್ಲರೂ ಜಾತಿ ಪಟ್ಟಿಯ ಕ್ರಮಸಂಖ್ಯೆ ೪೪ ರಲ್ಲಿ ಹೊಲಯ ಎಂದು ಬರೆಸಬೇಕೆಂದು ಹೇಳಿದರು.

ದಲಿತ ಸಂಘರ್ಷ ಸಮಿತಿಯ ಎಂ.ವಿ.ಕೃಷ್ಣ , ನಗರಸಭಾ ಸದಸ್ಯ ಶ್ರೀಧರ್ , ನಿತ್ಯಾನಂದ , ಗುರುಶಂಕರ್, ಕೃಷ್ಣ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ