ಕನ್ನಡಪ್ರಭ ವಾರ್ತೆ ಮಂಡ್ಯ
ಕೆರಗೋಡು ಪಂಚಾಯಿತಿ ಅಧಿಕಾರಿ. ಮಂಡ್ಯ ಉಪವಿಭಾಗಾಧಿಕಾರಿ, ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿ, ಇವರು ಸ್ಥಳೀಯ ಪಂಚಾಯಿತಿಯಿಂದ ಅನುಮತಿ ಪಡೆದು ಹಾಕಲಾಗಿದ್ದ ಹನುಮ ಧ್ವಜವನ್ನು ಬಲವಂತವಾಗಿ ಇಳಿಸಿ, ಆ ಜಾಗಕ್ಕೆ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ ಎಂದು ಆರೋಪಿಸಿದರು.
ರಾಷ್ಟ್ರಧ್ವಜವನ್ನು ಹಾರಿಸುವ ಸಂದರ್ಭದಲ್ಲಿ ರಾಷ್ಟ್ರೀಯ ಧ್ವಜ ಸಂಹಿತೆಯ ರೀತಿ ನೀತಿ ರಿವಾಜುಗಳನ್ನು ಸಂಪೂರ್ಣ ಉಲ್ಲಂಘಿಸಿರುತ್ತಾರೆ ಹಾಗೂ ಹನುಮಧ್ವಜ ಸಮಿತಿಯವರು ರಾಷ್ಟ್ರೀಯ ದಿನಾಚರಣೆಗಳಾದ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಹಾಗೂ ನಾಡ ಧ್ವಜವನ್ನು ನವೆಂಬರ್ 1 ರಂದು ಹಾಗೂ ಜನವರಿ 26, ಅಗಸ್ಟ್15 ರಂದು ಹಾರಿಸುವ ಬಗ್ಗೆ ಸ್ಪಷ್ಟತೆಯನ್ನು ಸಹ ನೀಡಿರುತ್ತಾರೆ. ಹಾಗಿದ್ದರೂ ಕೂಡ 40 ವರ್ಷದಿಂದ ಇದ್ದ ಧ್ವಜ ಸ್ಥಂಭದ ಬಾವುಟವನ್ನು ಇಳಿಸಿರುವುದು ಹಿಂದುಗಳಿಗೆ ಹಾಗೂ ರಾಷ್ಟ್ರ ಪ್ರೇಮಿಗಳಿಗೆ ಅಪಮಾನ ಮಾಡಿರುತ್ತಾರೆ ದೂರಿದರು.ಧ್ವಜ ಸ್ಥಂಭದ ಮಕ್ಕಾಲು ಭಾಗಕ್ಕೆ ತಿರಂಗವನ್ನು ಹಾರಿಸಿರುತ್ತಾರೆ. ಧ್ವಜ ಹಾರಿಸುವ ಸಂದರ್ಭದಲ್ಲಿ ಕಾಲಿಗೆ ಚಪ್ಪಲಿ ಮತ್ತು ಶೂ ಧರಿಸಿರುತ್ತಾರೆ. ಧ್ವಜಾರೋಹಣ ವೇಳೆ ಹಾಗೂ ಧ್ವಜ ಇಳಿಸುವ ವೇಳೆ ನಿಯಮಾನುಸಾರ ರಾಷ್ಟ್ರೀಯ ಗೀತೆಯನ್ನು ಹಾಡಿರುವುದಿಲ್ಲ, ಹಾಗೂ ತುತ್ತೂರಿಯ ಶಬ್ದ ಮಾಡಿರುವುದಿಲ್ಲ. ಧ್ವಜಾರೋಹಣ ಸಂದರ್ಭದಲ್ಲಿ ಧ್ವಜದ ಮಧ್ಯ ಹೂವಿನ ದಳಗಳನ್ನು ಹಾಕಿರುವುದಿಲ್ಲ, ಮಧ್ಯಾಹ್ನದ ನಂತರ ಧ್ವಜ ಹಾರಿಸಿರುತ್ತಾರೆ.
ಮುಖಂಡರಾದ ಸಿ.ಟಿ.ಮಂಜುನಾಥ್, ಚಂದ್ರು, ಶಿವಕುಮಾರ್, ವಿವೇಕ್, ಪ್ರಸನ್ನಕುಮಾರ್, ನವೀನ್ ಯಲಿಯೂರು ಭಾಗವಹಿಸಿದ್ದರು.
ಕೆರೆಗೋಡು ಗ್ರಾಮದಲ್ಲಿ ಹನುಮಧ್ವಜ ನಿಲಿಸಿದ ವೇಳೆ ಕಾನೂನು ವ್ಯವಸ್ಥೆಗೆ ದಕ್ಕೆ ಉಂಟು ಮಾಡಿದ ಮೂವರು ಹಾಗೂ ಪಾದಯಾತ್ರೆ ಸಮಯದಲ್ಲಿ ಮಂಡ್ಯದ ಮಹಾವೀರ ವೃತ್ತದಲ್ಲಿ ಹರಿದು ಹಾಕಿ ಶಾಂತಿ ಭಂಗ ತಂಡ ನಾಲ್ವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.ಇನ್ನುಳಿದಂತೆ ಕೆರಗೋಡು ಹಾಗೂ ಮಂಡ್ಯದಲ್ಲಿ ಶಾಂತಿ ಭಂಗ ಉಂಟುಮಾಡಿದವರ ಬಗ್ಗೆ ವಿಡಿಯೋ ಪರಿಶೀಲನೆ ನಡೆಸಲಾಗುತ್ತಿದ್ದು ಅವರ ಗುರುತು ಪತ್ತೆ ಹಚ್ಚಿ ಅವರ ವಿರುದ್ಧವು ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ಸಧೀಕ್ಷಕ ಎನ್. ಯತೀಶ್ ತಿಳಿಸಿದ್ದಾರೆ.ಧ್ವಜಸ್ತಂಭ ನಿರ್ಮಾಣಕ್ಕೆ ಗ್ರಾಪಂನಿಂದ ಅನುಮತಿ