ಕೆಎಂಸಿಆರ್‌ಐನಲ್ಲಿ ತೀವ್ರ ನಿಗಾ ಘಟಕ ಕಾಮಗಾರಿಗೆ ಚಾಲನೆ

KannadaprabhaNewsNetwork |  
Published : Aug 06, 2025, 01:15 AM IST
5ಎಚ್‌ಯುಬಿ33ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ₹13.4 ಕೋಟಿ ವೆಚ್ಚದ ತೀವ್ರ ನಿಗಾ ಘಟಕ ಕಾಮಗಾರಿಗೆ ಶಾಸಕ ಮಹೇಶ ಟೆಂಗಿನಕಾಯಿ ಸೋಮವಾರ ಚಾಲನೆ ನೀಡಿದರು. | Kannada Prabha

ಸಾರಾಂಶ

ಸತತ ಪ್ರಯತ್ನದಿಂದ 50 ಹಾಸಿಗೆಯುಳ್ಳ ಅಂದಾಜು ₹13.4 ಕೋಟಿ ವೆಚ್ಚದ ಬಹುಮಹಡಿ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ.

ಹುಬ್ಬಳ್ಳಿ: ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ₹13.4 ಕೋಟಿ ವೆಚ್ಚದ ತೀವ್ರ ನಿಗಾ ಘಟಕ ಕಾಮಗಾರಿಗೆ ಶಾಸಕ ಮಹೇಶ ಟೆಂಗಿನಕಾಯಿ ಸೋಮವಾರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಸತತ ಪ್ರಯತ್ನದಿಂದ 50 ಹಾಸಿಗೆಯುಳ್ಳ ಅಂದಾಜು ₹13.4 ಕೋಟಿ ವೆಚ್ಚದ ಬಹುಮಹಡಿ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ. ಆಸ್ಪತ್ರೆಗೆ ಎರಡು ಬಾರಿ ಭೇಟಿ ನೀಡಿದಾಗ ಜನರಿಗೆ ಆಗುತ್ತಿರುವ ಸಮಸ್ಯೆ ಮನಗಂಡು ತೀವ್ರ ನಿಗಾ ಘಟಕ ಯೋಜನೆ ರೂಪಿಸಿ ಸತತವಾಗಿ ಸರ್ಕಾರದ ಗಮನ ಸೆಳೆದು ಅನುದಾನ ಪಡೆದು ಭೂಮಿಪೂಜೆ ಮಾಡಿದ್ದೇನೆ ಎಂದು ತಿಳಿಸಿದರು.

ಕಟ್ಟಡ ನಿರ್ಮಾಣಕ್ಕೆ ಗುತ್ತಿಗೆದಾರರಿಗೆ 11 ತಿಂಗಳ ಅವಧಿ ನಿಗದಿಪಡಿಸಲಾಗಿದೆ. ಇಲ್ಲಿ ತೀವ್ರ ನಿಗಾ ಘಟಕ, ಡಯಾಲಿಸಿಸ್ ಮತ್ತು ವೈದ್ಯರ ಕೊಠಡಿಗಳು ಇರಲಿವೆ ಎಂದು ಹೇಳಿದರು.

ಈ ವೇಳೆ ಕೆಎಂಸಿಆರ್‌ಐ ನಿರ್ದೇಶಕ ಈಶ್ವರ್ ಹೊಸಮನಿ, ಸುಪರಿಡೆಂಟ್ ಈಶ್ವರ ಹಸಬಿ, ವೈದ್ಯರಾದ ರಾಜಶೇಖರ ದ್ಯಾಬೇರಿ, ಲಕ್ಷ್ಮೀಕಾಂತ್ ಲೋಕರೆ, ಸಂತೋಷ್ ಕಟ್ಟಿಮನಿ, ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ, ಗುತ್ತಿಗೆದಾರರು ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ