ನಾಳೆಯಿಂದ ಮಾಹೆಯಲ್ಲಿ ಅಂತರ್ ಕಾಲೇಜು ಸಾಂಸ್ಕೃತಿಕ ಹಬ್ಬ ಉತ್ಸವ್‌ 2026

KannadaprabhaNewsNetwork |  
Published : Apr 05, 2026, 02:45 AM IST
04ಉತ್ಸವ್ | Kannada Prabha

ಸಾರಾಂಶ

ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯದ ಬಹುನಿರೀಕ್ಷಿತ ವಾರ್ಷಿಕ ಅಂತರ್-ಕಾಲೇಜು ಸಾಂಸ್ಕೃತಿಕ ಹಬ್ಬ ಉತ್ಸವ್ 2026 ಏ 6 ರಿಂದ 10ರವರೆಗೆ ನಡೆಯಲಿದೆ.

ಮಣಿಪಾಲ: ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯದ ಬಹುನಿರೀಕ್ಷಿತ ವಾರ್ಷಿಕ ಅಂತರ್-ಕಾಲೇಜು ಸಾಂಸ್ಕೃತಿಕ ಹಬ್ಬ ಉತ್ಸವ್ 2026 ಏ 6 ರಿಂದ 10ರವರೆಗೆ ನಡೆಯಲಿದೆ.ಈ ಹಬ್ಬಕ್ಕೆ ಏ. 7ರ ಸಂಜೆ 6.30ಕ್ಕೆ ಕೆಎಂಸಿ ಗ್ರೀನ್ಸ್‌ನಲ್ಲಿ ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್. ಪೈ ಚಾಲನೆ ನೀಡಲಿದ್ದಾರೆ. ಮಾಹೆ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಮತ್ತು ಕುಲಪತಿ ಲೆಜ (ಡಾ.) ಎಂ.ಡಿ. ವೆಂಕಟೇಶ್ ಅವರು ಉಪಸ್ಥಿತರಿರುತ್ತಾರೆ.

ಉತ್ಸವ್‌ 2026 ಅಂತರ ಕಾಲೇಜುಗಳ ನಡುವೆ ನಡೆಯುವ ಒಂದು ಪ್ರಮುಖ ಸಾಂಸ್ಕೃತಿಕ ಹಬ್ಬವಾಗಿದ್ದು, ವಿವಿಧ ವಿಭಾಗಗಳ ವಿದ್ಯಾರ್ಥಿಗಳ ನಡುವೆ ಕಲಾತ್ಮಕ ತೊಡಗಿಸಿಕೊಳ್ಳುವಿಕೆ ಮತ್ತು ಅಂತರಶಿಸ್ತೀಯ ಸಂವಹನವನ್ನು ಉತ್ತೇಜಿಸುತ್ತದೆ. ಐದು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಸಂಗೀತ, ನೃತ್ಯ, ನಾಟಕ, ಸಾಹಿತ್ಯಿಕ ಸ್ಪರ್ಧೆಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಇದೊಂದು ಉತ್ತಮ ವೇದಿಕೆಯಾಗಲಿದೆ. ಮಾಹೆಯ ಎಲ್ಲಾ ಕ್ಯಾಂಪಸ್‌ಗಳ ವಿದ್ಯಾರ್ಥಿಗಳು ಈ ಉತ್ಸವದಲ್ಲಿ ಭಾಗವಹಿಸಲಿದ್ದು, ಉತ್ಸವ್‌ 2026 ಯುವ ಉತ್ಸಾಹ ಮತ್ತು ಕಲಾತ್ಮಕತೆಯ ಸಂಗಮವಾಗಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವನ್ಯಜೀವಿ ಕಾರಿಡಾರ್ ಸಂರಕ್ಷಣೆ ನೀತಿಗೆ ಶೀಘ್ರ ಅನುಮತಿ ?
ಬಿಪಿಎಲ್‌ಗೆ ಆದಾಯ ಮಿತಿ ಹೆಚ್ಚಳಕ್ಕೆ ಶೀಘ್ರ ಕ್ರಮ : ಕೆಎಚ್‌ಎಂ