ಅಂತರ ಜಿಲ್ಲಾ ಕಳ್ಳನ ಬಂಧನ

KannadaprabhaNewsNetwork |  
Published : Jul 15, 2024, 01:49 AM IST
14ಕಕಡಿಯು1. | Kannada Prabha

ಸಾರಾಂಶ

ಕಡೂರು, ಭದ್ರಾವತಿ, ಅರಸೀಕೆರೆ, ಬೀರೂರು, ಮೈಸೂರು, ಕೆ.ಆರ್ ನಗರ, ಬೆಂಗಳೂರು, ಶಿವಮೊಗ್ಗ, ಹಾಸನ ಮತ್ತು ಚಿತ್ರದುರ್ಗ ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಕಳ್ಳತನ ಮಾಡಿದ್ದ ವ್ಯಕ್ತಿಯನ್ನುಬಂಧಿಸಿ ಆತನಿಂದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ಕಡೂರು ಪೊಲೀಸ್ ಠಾಣೆ ಪಿಎಸ್‍ಐ ಪವನ್‍ಕುಮಾರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಕಡೂರು

ಭದ್ರಾವತಿ, ಅರಸೀಕೆರೆ, ಬೀರೂರು, ಮೈಸೂರು, ಕೆ.ಆರ್ ನಗರ, ಬೆಂಗಳೂರು, ಶಿವಮೊಗ್ಗ, ಹಾಸನ ಮತ್ತು ಚಿತ್ರದುರ್ಗ ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಕಳ್ಳತನ ಮಾಡಿದ್ದ ವ್ಯಕ್ತಿಯನ್ನುಬಂಧಿಸಿ ಆತನಿಂದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ಕಡೂರು ಪೊಲೀಸ್ ಠಾಣೆ ಪಿಎಸ್‍ಐ ಪವನ್‍ಕುಮಾರ್ ತಿಳಿಸಿದರು.

ಈ ಕುರಿತು ಮಾಹಿತಿ ನೀಡಿದ ಅವರು, ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಮೂಲದ ನಿವಾಸಿ ಭದ್ರಾವತಿ ಸಮೀಪದ ಸೀಗೆಬಾಗಿಯಲ್ಲಿ ವಾಸವಾಗಿದ್ದ ಆರೋಪಿ ದಾದಾಪೀರ್ (54)ನನ್ನು ಕಡೂರು ಪೊಲೀಸ್ ತಂಡ ಬಂಧಿಸಿದೆ. ಬೆರಳಚ್ಚು ಪರೀಕ್ಷೆ ನಡೆಸಿದ ನಂತರ ತನಿಖೆ ನಡೆಸಿ ಆರೋಪಿಯಿಂದ 61 ಗ್ರಾಂ ಚಿನ್ನದ ಆಭರಣಗಳು, 102 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿ ಕೊಂಡಿದ್ದು ಇದರ ಮೌಲ್ಯ 4,19,287 ರು. ಎಂದು ಅಂದಾಜಿಸಲಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ಅಧೀಕ್ಷಕ ಕೃಷ್ಣಮೂರ್ತಿ, ತರೀಕೆರೆ ಡಿವೈಎಸ್‍ಪಿ ಹಾಲಮೂರ್ತಿ ರಾವ್, ವೃತ್ತ ನಿರೀಕ್ಷಕ ದುರ್ಗಪ್ಪ ಇವರ ಮಾರ್ಗದರ್ಶನದಲ್ಲಿ ಕಡೂರು ಪಿಎಸ್‍ಐ ಪವನ್‍ಕುಮಾರ್, ನವೀನ್‍ಕುಮಾರ್, ಸಿಬ್ಬಂದಿ ಮಂಜುನಾಥಸ್ವಾಮಿ, ಮಧುಕುಮಾರ್, ಹರೀಶ್, ಧನಪಾಲ ನಾಯ್ಕ, ಮಹಮದ್ ರಿಯಾಜ್ ಹಾಗೂ ಜಯಮ್ಮ ಇವರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದರು. ಈ ಯಶಸ್ವಿ ಕಾರ್ಯಾಚರಣೆ ನಡೆಸಿದ ತಂಡವನ್ನು ಜಿಲ್ಲಾ ಪೋಲೀಸ್‌ ಅಧೀಕ್ಷರು ಅಭಿನಂದಿಸಿ ಬಹುಮಾನ ಘೋಷಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಠಿಣ ಪರಿಶ್ರಮದಿಂದ ಉತ್ತಮ ಫಲಿತಾಂಶ ಸಾಧ್ಯ
ಔರಾದ್ ತಾಲೂಕು ಅದ್ಧೂರಿ ಕಸಾಪ ಸಮ್ಮೇಳನ