ಕನ್ನಡಪ್ರಭ ವಾರ್ತೆ ಬೀದರ್
ನಗರದ ಮೊಘಲ್ ಗಾರ್ಡನ್ ಫಂಕ್ಷನ್ ಹಾಲ್‌ನಲ್ಲಿ ಇತ್ತಿಚೇಗೆ ನಡೆದ ಸಂಘದ 9ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸಂಘ ಒಟ್ಟು 4.13 ಕೋಟಿ ರು. ಸಾಲ ವಿತರಿಸಿದೆ. ಒಟ್ಟು ವಹಿವಾಟು 97.26 ಕೋಟಿ ರು. ಆಗಿದ್ದು, ಪ್ರಸಕ್ತ ವರ್ಷ 18.8 ಲಕ್ಷ ರು.ಲಾಭ ಗಳಿಸಿದೆ ಎಂದು ತಿಳಿಸಿದರು.
ಸಂಘದಿಂದ ಬಡ್ಡಿ ರಹಿತ ವ್ಯಾಪಾರ ಸಾಲ, ಬಡ್ಡಿ ರಹಿತ ತುರ್ತು ಸಾಲ, ಶೈಕ್ಷಣಿಕ ಸಾಲ ಸೇರಿದಂತೆ ಅವಶ್ಯಕತೆ ಇರುವವರಿಗೆ ವಿವಿಧ ರೀತಿಯ ಸಾಲ ಕೊಡಲಾ ಗುತ್ತಿದೆ. ಬಡ್ಡಿ ರಹಿತ ಸಾಲ ಸಣ್ಣ ವ್ಯಾಪಾರಿಗಳಿಗೆ ಜೀವನಾಡಿಯಾಗಿದೆ. ವ್ಯಾಪಾರಿಗಳು ತಮ್ಮ ಲಾಭದ ಬಹು ಪಾಲನ್ನು ಬಡ್ಡಿಗೆ ಕೊಡುವುದನ್ನು ತಪ್ಪಿದೆ ಎಂದು ತಿಳಿಸಿದರು.ಸಂಘದ ಅಧ್ಯಕ್ಷ ರಫೀಕ್ ಅಹಮ್ಮದ್ ಗಾದಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೈಕ್ರೋ ಫೈನಾನ್ಸ್ ಪರಿಣಿತರಾದ ಅಬ್ದುಲ್ ಜಬ್ಬಾರ್ ಸಿದ್ದಿಕಿ ಸಂಘದ ಅಭಿವೃದ್ಧಿಗೆ ಸಲಹೆ ನೀಡಿದರು. ಸಹಕಾರ ಇಲಾಖೆಯ ಆಡಿಟ್ ವಿಭಾಗದ ಮಹೆಬೂಬ್ ಖಾನ್, ಹೈದ್ರಾಬಾದ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಹಮ್ಮದ್ ಇಕ್ಬಾಲ್, ಬೀದರ್ ಘಟಕದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಹಮ್ಮದ್ ಮಸಿಯುದ್ದೀನ್, ಸಂಘದ ನಿರ್ದೇಶಕರಾದ ಮುಹಮ್ಮದ್ ಆಸಿಫುದ್ದೀನ್, ಅಶ್ಫಾಕ್ ಅಹಮ್ಮದ್, ಮುಬಸ್ಸಿರ್ ಸಿಂಧೆ, ಮುಹಮ್ಮದ್ ಅಕ್ರಂ ಅಲಿ, ಮುಹಮ್ಮದ್ ಜಾವೀದ್, ಶೇಖರ್ ಚವ್ಹಾಣ, ಸಬಿಹಾ ಖಾನಂ, ಅಸ್ಮಾ ಬೇಗಂ, ಪ್ರಮುಖರಾದ ಓಂಪ್ರಕಾಶ್ ರೊಟ್ಟೆ, ಜಗದೀಶ್ ಬಿರಾದಾರ, ವೇದಮಣಿ ಮತ್ತಿತರರು ಇದ್ದರು.
--
ಬೀದರಿನ ಮೋಘಲ್ ಗಾರ್ಡನ್ ಪಂಕ್ಷನ್ ಹಾಲ್‌ನಲ್ಲಿ ನಡೆದ ಬೀದರ್ ಕಾರುಣ್ಯ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಮುಜ್ತಬಾ ಖಾನ್ ಮಾತನಾಡಿದರು.