ಯುವಕ ಕೇಶವ್, ಯುವತಿ ತಸ್ಲಿಮಾ ಕಳೆದ ಎರಡು ವರುಷಗಳಿಂದ ಪ್ರೀತಿಸುತ್ತಿದ್ದರು
ಕನಕಗಿರಿ: ರಕ್ಷಣೆ ಕೋರಿ ಏ.10ರಂದು ಎಸ್ಪಿ ಕಚೇರಿಗೆ ತೆರಳಿದ್ದ ಇಬ್ಬರು ಪ್ರೇಮಿಗಳು ಕನಕಗಿರಿ ಪೊಲೀಸ್ ಠಾಣೆಯಲ್ಲಿ ಎರಡು ಕಡೆಯವರ ವಿರೋಧದ ನಡುವೆಯೂ ನವ ದಾಂಪತ್ಯಕ್ಕೆ ಕಾಲಿಟ್ಟರು.
ಯುವಕ ಕೇಶವ್, ಯುವತಿ ತಸ್ಲಿಮಾ ಕಳೆದ ಎರಡು ವರುಷಗಳಿಂದ ಪ್ರೀತಿಸುತ್ತಿದ್ದರು. ಈ ಪ್ರೀತಿಗೆ ಎರಡು ಕಡೆಗಳಿಂದಲೂ ವಿರೋಧ ಇರುವುದರಿಂದ ಪ್ರೇಮಿಗಳು ಎಸ್ಪಿ ಕಚೇರಿಗೆ ತೆರಳಿ ರಕ್ಷಣೆಗೆ ಮನವಿ ಮಾಡಿದ್ದರು.ಈ ಹಿನ್ನೆಲೆ ಏ.11ರಂದು ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪಿಐ ನೇತೃತ್ವದಲ್ಲಿ ಪ್ರೇಮಿಗಳ ಪೋಷಕರ ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಿದರು.
ಯುವಕ ಹುಲಿಹೈದರ ಹಾಗೂ ಯುವತಿ ಸುಳೇಕಲ್ ನಿವಾಸಿಗಳಾಗಿದ್ದು, ಎರಡು ವರುಷದ ಹಿಂದೆ ಸ್ನೇಹ ಪ್ರೀತಿಗೆ ತಿರುಗಿದೆ. ವಾರದ ಹಿಂದೆ ಕನಕಗಿರಿ ತಾಲೂಕಿನ ಗುಡ್ಡದ ಲಕ್ಷ್ಮಿದೇವಿ ದೇಗುಲದ ಬಳಿ ಮದುವೆಯಾಗಿದ್ದರು. ಪ್ರೇಮಿಗಳು ತಾವು ಮದುವೆಯಾಗಿರುವ ವಿಷಯ ಮನೆಯವರಿಗೆ ತಿಳಿಸಿದ್ದಾರೆ. ಪ್ರೇಮಿಗಳು ಮದುವೆಯಾಗಿರುವುದಕ್ಕೆ ಪಾಲಕರ ವಿರೋಧಿಸಿರುವ ವಿಷಯ ಪೊಲೀಸರಿಗೆ ತಿಳಿದಿದೆ.
ಪೊಲೀಸರು ಎರಡು ಕಡೆಯವರೆಗೂ ತಿಳಿ ಹೇಳಿ ಸಮಸ್ಯೆ ಇತ್ಯರ್ಥಪಡಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.