ಗ್ರಾಮ ಪಂಚಾಯ್ತಿ ಮೀಸಲಾತಿಯಲ್ಲಿ ಕಾಣದ ಕೈಗಳ ಹಸ್ತಕ್ಷೇಪ

KannadaprabhaNewsNetwork |  
Published : Aug 25, 2026, 02:00 AM IST
24ಎಚ್ಎಸ್ಎನ್10 :  | Kannada Prabha

ಸಾರಾಂಶ

ದಾಖಲೆಗಳನ್ನು ನೋಡಿದ ಬಳಿಕ ನನಗೆ ಹಲವು ಅನುಮಾನಗಳು ಮೂಡಿವೆ. ಅದಕ್ಕಾಗಿಯೇ ಜಿಲ್ಲಾಧಿಕಾರಿ ಅವರೊಂದಿಗೆ ಮಾತನಾಡಲು ಪ್ರಯತ್ನಿಸಿದೆ. ಅವರ ವೈಯಕ್ತಿಕ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದೆ. ಆದರೆ ಅವರು ಕರೆ ಸ್ವೀಕರಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಮ್ಮ ಸಾರ್ವಜನಿಕ ಜೀವನದ ಅನುಭವವನ್ನು ಉಲ್ಲೇಖಿಸಿದ ರೇವಣ್ಣ, ಅವರು ಐಎಎಸ್ ಅಧಿಕಾರಿಯಾಗಿದ್ದಾರೆ. ನಾನು ಐಎಎಸ್ ಓದಿಲ್ಲ. ನಾನು ಅವರಷ್ಟು ವಿದ್ಯಾವಂತನೂ ಅಲ್ಲ. ಅವರಷ್ಟು ಆಡಳಿತದ ಅನುಭವ ಹೊಂದಿದ್ದೇನೆ ಎಂದು ಹೇಳಿಕೊಳ್ಳುವುದಿಲ್ಲ. ಆದರೆ ನನ್ನ ಕ್ಷೇತ್ರದ ಜನರು ನನ್ನನ್ನು ಆರು ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಜನರ ಸಮಸ್ಯೆ ಬಂದಾಗ ನಾನು ಮಾತನಾಡಬಾರದೆ ಎಂದು ಪ್ರಶ್ನಿಸಿದರು.

ಹಾಸನ: ಗ್ರಾಮ ಪಂಚಾಯಿತಿ ಚುನಾವಣೆ ಮೀಸಲಾತಿ ನಿಗದಿ ವಿಚಾರವಾಗಿ ತೀವ್ರ ಸಮಾಧಾನಗೊಂಡಿರುವ ಶಾಸಕ ಎಚ್‌.ಡಿ.ರೇವಣ್ಣ ಅವರು, ನಾನು ದೊಡ್ಡ ಅಧಿಕಾರಿ ಅಲ್ಲ, ಸಾಮಾನ್ಯ ಶಾಸಕ. ಆದರೆ ಜನರ ನೋವಿಗೆ ಧ್ವನಿಯಾಗುವುದು ನನ್ನ ಕರ್ತವ್ಯ ಎಂದು ಹೇಳುವ ಮೂಲಕ ಜಿಲ್ಲಾಡಳಿತದ ಕಾರ್ಯವೈಖರಿಯ ಬಗ್ಗೆ ಟೀಕಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಪಟ್ಟಿಯ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ದಾಖಲೆಗಳನ್ನು ಪಡೆದುಕೊಂಡಿದ್ದೇನೆ. ದಾಖಲೆಗಳನ್ನು ನೋಡಿದ ಬಳಿಕ ನನಗೆ ಹಲವು ಅನುಮಾನಗಳು ಮೂಡಿವೆ. ಅದಕ್ಕಾಗಿಯೇ ಜಿಲ್ಲಾಧಿಕಾರಿ ಅವರೊಂದಿಗೆ ಮಾತನಾಡಲು ಪ್ರಯತ್ನಿಸಿದೆ. ಅವರ ವೈಯಕ್ತಿಕ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದೆ. ಆದರೆ ಅವರು ಕರೆ ಸ್ವೀಕರಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಮ್ಮ ಸಾರ್ವಜನಿಕ ಜೀವನದ ಅನುಭವವನ್ನು ಉಲ್ಲೇಖಿಸಿದ ರೇವಣ್ಣ, ಅವರು ಐಎಎಸ್ ಅಧಿಕಾರಿಯಾಗಿದ್ದಾರೆ. ನಾನು ಐಎಎಸ್ ಓದಿಲ್ಲ. ನಾನು ಅವರಷ್ಟು ವಿದ್ಯಾವಂತನೂ ಅಲ್ಲ. ಅವರಷ್ಟು ಆಡಳಿತದ ಅನುಭವ ಹೊಂದಿದ್ದೇನೆ ಎಂದು ಹೇಳಿಕೊಳ್ಳುವುದಿಲ್ಲ. ಆದರೆ ನನ್ನ ಕ್ಷೇತ್ರದ ಜನರು ನನ್ನನ್ನು ಆರು ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಜನರ ಸಮಸ್ಯೆ ಬಂದಾಗ ನಾನು ಮಾತನಾಡಬಾರದೆ ಎಂದು ಪ್ರಶ್ನಿಸಿದರು. ಮೀಸಲಾತಿ ನಿಗದಿ ಪ್ರಕ್ರಿಯೆಯ ಮೂಲ ಹಂತವನ್ನೇ ಪ್ರಶ್ನಿಸಿದ ಅವರು, ತಹಶೀಲ್ದಾರರು ಯಾವ ಆಧಾರದ ಮೇಲೆ ಈ ಪಟ್ಟಿಯನ್ನು ಕಳುಹಿಸಿದರು? ಎಲ್ಲಾ ತಹಸೀಲ್ದಾರರಿಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದ್ದು ಯಾರು? ಈ ಪ್ರಕ್ರಿಯೆಗೆ ಯಾವ ಮಾನದಂಡವನ್ನು ಅನುಸರಿಸಲಾಗಿದೆ ಎಂದು ಸರಣಿ ಪ್ರಶ್ನೆಗಳನ್ನು ಮುಂದಿಟ್ಟರು. ಮೀಸಲಾತಿ ನಿಗದಿಯಲ್ಲಿ ರಾಜಕೀಯ ಪ್ರಭಾವ ನಡೆದಿದೆ ಎಂಬ ಆರೋಪವನ್ನೂ ಮಾಡಿದರು. ಒಬ್ಬ ರಾಜಕಾರಣಿಯ ಸೂಚನೆಯಂತೆ ಮೀಸಲಾತಿ ಪಟ್ಟಿಯನ್ನು ನಿಗದಿ ಮಾಡಿದ್ದಾರೆ. ಆ ವ್ಯಕ್ತಿ ಯಾರು ಎಂಬುದನ್ನು ಈಗಲೇ ಹೇಳುವುದಿಲ್ಲ. ಸೂಕ್ತ ಸಮಯ ಬಂದಾಗ ಹೆಸರು ಹೇಳುತ್ತೇನೆ ಎಂದು ಎಚ್ಚರಿಕೆಯ ಧಾಟಿಯಲ್ಲಿ ಹೇಳಿದರು. ಅಧಿಕಾರದಲ್ಲಿದ್ದೇವೆ ಎಂದ ಮಾತ್ರಕ್ಕೆ ಮನಬಂದಂತೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅಧಿಕಾರವೂ ಒಂದು ಜವಾಬ್ದಾರಿ. ಪ್ರತಿಯೊಂದು ಕ್ರಮಕ್ಕೂ ನಿಯಮ, ಕಾನೂನು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೆದ್ದಾರಿ ಸೇತುವೆ ದುರಸ್ತಿ ಮರೀಚಿಕೆ
ಜನಸಾಮಾನ್ಯರ ಕೆಲಸ ಮಾಡಿಕೊಡಲು ಪಕ್ಷ ಭೇದ ಬೇಡ: ಡಾ.ಕೆ.ಸುಧಾಕರ್