ಕನ್ನಡಪ್ರಭ ವಾರ್ತೆ ಕಲಬುರಗಿ
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮುಂದುವರೆ ದಿಶಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷಿ ಇಲಾಖೆ ಸಂಬಂಧಿಸಿದಂತೆ ಮಾಹಿತಿ ರೈತರಿಗೆ ಸಿಗುವಂತೆ ಸೌಲಭ್ಯ ತುರ್ತಾಗಿ ನೀಡಬೇಕು. ಅವರು ರೈತರ ಬ್ಯಾಂಕ ಖಾತೆಗೆ ಹಣ ಜಮೆಯಾಗಬೇಕೆಂದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಸಮದ್ದ್ ಪಟೇಲ್ ಅವರು ಮಾತನಾಡಿ, ಈಗಾಗಲೆ ಬರಪರಿಸ್ಥಿತಿಯ ಹಿನ್ನಲೆಯಲ್ಲಿ ಸ್ಥಳೀಯ ವಿಕೋಪದಡಿಯಲ್ಲಿ ದೂರನ್ನು ಸಲ್ಲಿಸಿದ ರೈತರಿಗೆ ₹4.98 ಕೋಟಿ ಪರಿಹಾರ ರೈತರ ಜಮೆ ಮಾಡಲಾಗಿದೆ.ಬೆಳೆ ಸ್ಥಿರೀಕರಣ ಯೋಜನೆಯಡಿ ತೂಗರಿ ಖರೀದಿ ಕೇಂದ್ರ ಇದೆ ಮೊದಲ ಬಾರಿಗೆ ಕೇಂದ್ರ ಸರ್ಕಾರದ ಬೆಲೆ ಸ್ಥಿರೀಕರಣ ಎಂ.ಎಸ್.ಪಿ. ನಿಧಿ ಯೋಜನೆ ಅಡಿಯಲ್ಲಿ ಮಾರುಕಟ್ಟೆ ದರಲ್ಲಿ ಕರ್ನಾಟಕ ರಾಜ್ಯದ ಸಹಾಕರ ಮಾರಾಟ ಮಹಾ ಮಂಡಳಿ ಕಲಬುರಗಿ ಅಡಿಯಲ್ಲಿ 127 ಹಾಗೂ ಕರ್ನಾಟಕ ರಾಜ್ಯ ದ್ವೀದಳ ಧಾನ್ಯ ಅಭಿವೃದ್ಧಿ ಮಂಡಳಿ ಕಲಬುರಗಿ ಅಢಿಯಲ್ಲಿ 62 ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜಿಲ್ಲಾವಾರು ಹೋಲಿಸಿ ಇದರಲ್ಲಿ ಯಾವ ದರವು ಹೆಚ್ಚಾಗಿರುತ್ತದೆಯೋ ಆ ದರದಲ್ಲಿ ರೈತರಿಂದ ಖರೀದಿಸಲಾಗುವುದು ಎಂದರು.
ಯಾರದ್ದೇ ಹಸ್ತಕ್ಷೇಪ ಹಾಗೂ ಪ್ರಭಾವಕ್ಕೆ ಒಳಗಾಗದೇ ಪಾರದರ್ಶಕದಿಂದ ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಂತೆ ಸಂಸದ ಡಾ. ಉಮೇಶ ಜಾಧವ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ತಟಸ್ಥವಾಗಿ ಕೆಲಸ ಮಾಡಿದರೆ ಎಲ್ಲ ಯೋಜನೆಗಳು ಸಮರ್ಪಕವಾಗಿ ಜಾರಿಯಾಗಲು ಸಾಧ್ಯವಾಗುತ್ತವೆ ಎಂದು ಹೇಳಿದರು.
ವಿಮಾನ ನಿಲ್ದಾಣದಲ್ಲಿ ಮೂಲ ಸೌಕರ್ಯ ಕೈಗೊಳ್ಳಿ ಇಲ್ಲಿನ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಬರುವವರಿಗೆ ಹೊರಗಡೆ ಶೌಚಾಲಯ ವ್ಯವಸ್ಥೆ ಇಲ್ಲ. ಜತೆಗೆ ಟೀ ಸಹ ಕುಡಿಯುವ ಉಪಹಾರ ಗೃಹ ಇಲ್ಲದಿರುವುದು ತೊಂದರೆಯಾಗುತ್ತಿದೆ. ಹೀಗಾಗಿ ಮೂಲ ಸೌಕರ್ಯಗಳ ಗಮನ ಹರಿಸಿ ಎಂದು ಇಲ್ಲಿನ ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಸಂಸದರು ಸೂಚನೆ ನೀಡಿದರು.
ಪಿಕೆಪಿಎಸ್ ಬಲವರ್ಧನೆ ಗೊಳಿಸಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಫ್ಯಾಕ್ಸ್ ಗಳಿಗೆ ಕಂಪ್ಯೂಟರ್ ಹಾಗೂ ಇತರ ಸೌಲಭ್ಯಗಳನ್ನು ಕಲ್ಪಿಸಬೇಕು. ಇದರಲ್ಲಿ ನಿರ್ಲಕ್ಷ್ಯ ಸಲ್ಲದು ಎಂದು ಸಹಕಾರಿ ಕ್ಷೇತ್ರದ ಅಧಿಕಾರಿಗಳು ಹಾಗೂ ಡಿಸಿಸಿ ಬ್ಯಾಂಕ್ ನ ಅಧಿಕಾರಿಗಳಿಗೆ ಸಂಸದರು ನಿರ್ದೇಶನ ನೀಡಿದರು.
ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.