- ಒಳಮೀಸಲಾತಿ ತಪ್ಪಿಸಲು ಕೆಲ ಸಚಿವರ ಹುನ್ನಾರ: ಆಲೂರು ನಿಂಗರಾಜ ಆರೋಪ
- - -
ಕನ್ನಡಪ್ರಭ ವಾರ್ತೆ ದಾವಣಗೆರೆಮಾದಿಗರ 35 ವರ್ಷಗಳ ನಿರಂತರ ಹೋರಾಟದ ಫಲವಾಗಿ ಲಭಿಸಿರುವ ಒಳ ಮೀಸಲಾತಿ ಅವಕಾಶವನ್ನೇ ನಾಶಪಡಿಸಲು ರಾಜ್ಯ ಸರ್ಕಾರದ ಕೆಲ ಸಚಿವರು ಮುಂದಾಗಿದ್ದಾರೆ. ಈ ನಡೆ ಖಂಡಿಸಿ ಹಾಗೂ 56432 ಸರ್ಕಾರಿ ಹುದ್ದೆಗೆ ಭರ್ತಿಗೆ ಒಳಮೀಸಲಾತಿ ಅಳವಡಿಸಲು ಒತ್ತಾಯಿಸಿ ಮಾ.6ರಂದು ಜಿಲ್ಲೆಯ ವಿವಿಧ ಮಾದಿಗರ ಪರ ಸಂಘಟನೆಗಳ ಒಕ್ಕೂಟದಿಂದ ಮಾ.6ರಂದು ದಾವಣಗೆರೆ ಬಂದ್‌ಗೆ ಕರೆ ನೀಡಲಾಗಿದೆ.
ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ಆಲೂರು ನಿಂಗರಾಜ, ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ಒಳಮೀಸಲಾತಿ ಕಲ್ಪಿಸಬೇಕು. ಆನಂತರವೇ 56 ಸಾವಿರಕ್ಕೂ ಅಧಿಕ ಸರ್ಕಾರಿ ಹುದ್ದೆಗಳ ಭರ್ತಿಗೆ ಮುಂದಾಗಬೇಕು. ಒಳಮೀಸಲಾತಿಯನ್ನು ನಾಶಪಡಿಸಲು ಒಳಗೊಳಗೆ ಪ್ರಯತ್ನಿಸುತ್ತಿರುವ ಕಾಂಗ್ರೆಸ್ಸಿನ ಸಚಿವರು ತಮ್ಮ ವರ್ತನೆ ತಿದ್ದಿಕೊಳ್ಳಲಿ ಎಂದು ಎಚ್ಚರಿಸಿದರು.
ಕೆ.ಎಸ್.ಬಸವಂತಪ್ಪಗೆ ಘೇರಾವ್:
ಪಾಲಿಕೆ ಮಾಜಿ ಸದಸ್ಯ ಎಂ.ಹಾಲೇಶ, ಸಮಾಜದ ಮುಖಂಡರಾದ ಹಿರಿಯ ವಿಚಾರವಾಗಿ ಡಾ. ಎಚ್.ವಿಶ್ವನಾಥ, ಮಾದಿಗ ದಂಡೋರ ಅಧ್ಯಕ್ಷ ಎಚ್.ಸಿ. ಗುಡ್ಡಪ್ಪ, ಕಡತಿ ಅಂಜಿನಪ್ಪ, ಹರಿಹಲ ಎಚ್.ಮಲ್ಲೇಶ, ಉಚ್ಚಂಗಿ ಪ್ರಸಾದ, ರಾಘವೇಂದ್ರ ಕಡೇಮನಿ, ನಿಂಗರಾಜ ಚಿಕ್ಕನಹಳ್ಳಿ , ಕುಂದುವಾಡ ಮಂಜುನಾಥ, ಕೆಟಿಜೆ ನಗರ ಎಂ.ರವಿಕುಮಾರ, ಟಿ.ರವಿಕುಮಾರ, ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ಪ್ರಭಾಕರ, ಚನ್ನಗಿರಿ ಮೂರ್ತಿ, ಕೆಂಚಮ್ಮನಹಳ್ಳಿ ರುದ್ರೇಶ, ಗುಂಗುರು ಮಂಜುನಾಥ, ಗುನ್ನೂರ ಬಸವರಾಜ, ಮಹಾಂತೇಶ ಹಾಲವರ್ತಿ, ವಕೀಲರಾದ ಶಾಮ್, , ಮಂಜಪ್ಪ ಇತರರು ಇದ್ದರು.
(ಟಾಪ್ ಕೋಟ್) ಮಾದಿಗ ಸಮಾಜದ ಪ್ರತಿನಿಧಿಯಾಗಿ, ಶಾಸಕರಾಗಿ ಸದನದಲ್ಲಿ ನೀವು ಮಾತನಾಡದಿರುವುದನ್ನು ಖಂಡಿಸುತ್ತೇವೆ. ಒಳ ಮೀಸಲಾತಿ ಕಲ್ಪಿಸುವಂತೆ ಸರ್ಕಾರದ ಮೇಲೆ ನೀವು ಒತ್ತಡ ಹೇರಬೇಕಿತ್ತು. ಈ ಮೂಲಕ ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕಿತ್ತು. ಇನ್ನೂ ಕಾಲ ಮಿಂಚಿಲ್ಲ, ಸರ್ಕಾರದ ಕಿವಿ ಹಿಂಡಿ, ಮಾದಿಗ ಸಮಾಜಕ್ಕೆ ಒಳ ಮೀಸಲಾತಿಯನ್ನು ಯಥಾವತ್ತಾಗಿ ಜಾರಿಗೊಳಿಸಿ, ಸಾಮಾಜಿಕ ನ್ಯಾಯ ಕೊಡಿಸುವ ಕೆಲಸ ಮಾಡಿರಿ.
- - -
ದಾವಣಗೆರೆ ಹಳೆ ಪ್ರವಾಸಿ ಮಂದಿರದ ಬಳಿ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಮಾದಿಗ ಸಮಾಜದ ಮುಖಂಡರು, ಸಮಾಜ ಬಾಂಧವರು ಘೇರಾವ್ ಹಾಕಿ, ಒಳಮೀಸಲಾತಿ ಜಾರಿ ಕುರಿತು ಸರ್ಕಾರದ ಗಮನ ಸೆಳೆಯಲು ಒತ್ತಾಯಿಸಿದರು.
-1ಕೆಡಿವಿಜಿ6.ಜೆಪಿಜಿ: ದಾವಣಗೆರೆ ಹಳೆ ಪ್ರವಾಸಿ ಮಂದಿರದಲ್ಲಿ ಮಾದಿಗ ಸಮುದಾಯದ ವಿವಿಧ ಪಕ್ಷ, ಸಂಘಟನೆಗಳ ಮುಖಂಡರ ಸಭೆ ನಡೆಯಿತು.