ನಾಳೆ ದಾವಣಗೆರೆಯಲ್ಲಿ ಒಳಮೀಸಲಾತಿ ವಿಜಯೋತ್ಸವ: ಶಂಭುಲಿಂಗಪ್ಪ

KannadaprabhaNewsNetwork |  
Published : Sep 12, 2025, 01:00 AM IST
11 ಜೆ.ಎಲ್.ಆರ್. ಚಿತ್ರ1 : ಜಗಳೂರು ಪಟ್ಟಣದ ಪಟ್ಟಣದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾದಿಗ ಸಮುದಾಯದ ಮುಖಂಡ ಶಂಭುಲಿಂಗಪ್ಪ ಇತರರು ಮಾತನಾಡಿದರು. | Kannada Prabha

ಸಾರಾಂಶ

ದಾವಣಗೆರೆ ನಗರದ ಮಹಾನಗರ ಪಾಲಿಕೆ ಆವರಣದ ರಾಧಮ್ಮ ಚನ್ನಗಿರಿ ರಂಗಪ್ಪ ರಂಗಮಂದಿರದಲ್ಲಿ ಸೆ.13ರಂದು ಜಿಲ್ಲಾ ಮಾದಿಗ ಮಹಾಸಭಾ ವತಿಯಿಂದ ಒಳಮೀಸಲಾತಿ ವಿಜಯೋತ್ಸವ ಕಾರ್ಯಕ್ರಮ ನಡೆಯಲಿದ್ದು, ಜಗಳೂರು ತಾಲೂಕಿನಾದ್ಯಂತ ಸಮುದಾಯ ಬಾಂಧವರು ತೆರಳಲು 5 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಹಿರಿಯ ಮುಖಂಡ ಶಂಭುಲಿಂಗಪ್ಪ ಹೇಳಿದ್ದಾರೆ.

- ಕಾರ್ಯಕ್ರಮಕ್ಕೆ ತೆರಳಲು ಮಾದಿಗ ಮಹಾಸಭಾದಿಂದ ತಾಲೂಕಿನಾದ್ಯಂತ 5 ಬಸ್‌ಗಳ ವ್ಯವಸ್ಥೆ - - -

ಕನ್ನಡಪ್ರಭ ವಾರ್ತೆ ಜಗಳೂರು

ದಾವಣಗೆರೆ ನಗರದ ಮಹಾನಗರ ಪಾಲಿಕೆ ಆವರಣದ ರಾಧಮ್ಮ ಚನ್ನಗಿರಿ ರಂಗಪ್ಪ ರಂಗಮಂದಿರದಲ್ಲಿ ಸೆ.13ರಂದು ಜಿಲ್ಲಾ ಮಾದಿಗ ಮಹಾಸಭಾ ವತಿಯಿಂದ ಒಳಮೀಸಲಾತಿ ವಿಜಯೋತ್ಸವ ಕಾರ್ಯಕ್ರಮ ನಡೆಯಲಿದ್ದು, ಜಗಳೂರು ತಾಲೂಕಿನಾದ್ಯಂತ ಸಮುದಾಯ ಬಾಂಧವರು ತೆರಳಲು 5 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಹಿರಿಯ ಮುಖಂಡ ಶಂಭುಲಿಂಗಪ್ಪ ಹೇಳಿದರು.

ಪಟ್ಟಣದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮಾದಿಗ ಸಮುದಾಯಕ್ಕೆ ಶೇ.6ರಷ್ಟು ಒಳಮೀಸಲಾತಿ ಕಲ್ಪಿಸಿದೆ. ಇದು ಅತ್ಯಂತ ಸಂಭ್ರಮದ ವಿಷಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟಕ್ಕೆ ಅಭಿನಂದನೆ ಸಲ್ಲಿಸುವ ಉದ್ದೇಶದಿಂದ ಮತ್ತು 40 ವರ್ಷದ ಹೋರಾಟಕ್ಕೆ ಹಗಲು- ಇರುಳು ಶ್ರಮಿಸಿದ ಸಚಿವರಾದ ಆರ್.ಬಿ.ತಿಮ್ಮಾಪುರ, ಕೆ.ಎಚ್.ಮುನಿಯಪ್ಪ, ಮಾಜಿ ಸಚಿವ ಎಚ್.ಆಂಜನೇಯ, ಸಂಸದ ಗೋವಿಂದ ಕಾರಜೋಳ, ಡಾ. ಎಲ್.ಹನುಮಂತಯ್ಯ, ಮಾಜಿ ಸಂಸದ ಎ.ನಾರಾಯಣ ಸ್ವಾಮಿ, ಬಿ.ಎನ್. ಚಂದ್ರಪ್ಪ ಸೇರಿದಂತೆ ಎಲ್ಲ ನಾಯಕರನ್ನು ಈ ವಿಜಯೋತ್ಸವದಲ್ಲಿ ಅಭಿನಂದಿಸಲಾಗುವುದು ಎಂದರು.

ಅರಸಿಕೆರೆ ಭಾಗದ ಮಾದಿಗ ಸಮುದಾಯದ ಮುಖಂಡ ಹನುಮಂತಪ್ಪ ಮಾತನಾಡಿ, ಮೀಸಲಾತಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಮಾದಿಗ ಸಮುದಾಯದ ಸಚಿವರು, ಶಾಸಕರು ಶ್ರಮಿಸಿದ್ದಾರೆ. ಮುಖ್ಯಮಂತ್ರಿ ಅವರು ಪಾಲ್ಗೊಳ್ಳುವ ಈ ಕಾರ್ಯಕ್ರಮದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕರಾದ ಶಾಮನೂರು ಶಿವಶಂಕರಪ್ಪ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕರಾದ ಬಿ.ದೇವೇಂದ್ರಪ್ಪ, ಕೆ.ಎಸ್.ಬಸವಂತಪ್ಪ, ಶಿವಗಂಗಾ ಬಸವರಾಜ್ ಮತ್ತು ಬಿ.ಪಿ.ಹರೀಶ್ ಭಾಗವಹಿಸಲಿದ್ದಾರೆ. ಹೆಚ್ಚಿನ ರೀತಿಯಲ್ಲಿ ಜನರು ಭಾಗವಹಿಸಲು ಕೋರಿದರು.

ಸುದ್ದಿಗೋಷ್ಠಿಯಲ್ಲಿ ಪಪಂ ಮಾಜಿ ಅಧ್ಯಕ್ಷ ಮಂಜುನಾಥ್, ಮಾದಿಗ ಸಮುದಾಯದ ಮುಖಂಡರಾದ ಕುಬೇರಪ್ಪ, ಹಟ್ಟಿ ತಿಪ್ಪೇಸ್ವಾಮಿ, ಮರಿಯಪ್ಪ, ಹನುಮಂತಪ್ಪ, ರುದ್ರೇಶ್, ನಿಬಗೂರು ರುದ್ರಮುನಿ, ಶಿವಮೂರ್ತಿ, ಅಣಬೂರು ರಾಜಶೇಖರ್, ಉಮೇಶ್, ಪಾಂಡು, ಹನುಮಂತಪ್ಪ, ಸ್ವಾಮಿ ಇತರರು ಇದ್ದರು.

- - -

(ಕೋಟ್‌) ದಾವಣಗೆರೆ ಕಾರ್ಯಕ್ರಮಕ್ಕೆ ಜನರು ತೆರಳಲು ಜಗಳೂರು ಕ್ಷೇತ್ರ ಶಾಸಕ ಬಿ.ದೇವೇಂದ್ರಪ್ಪ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದಾರೆ. ತಾಲೂಕಿನ ಎಲ್ಲ ಹಳ್ಳಿಗಳಿಂದ ಮಾದಿಗ ಸಮುದಾಯದ ಜನರು ತಮ್ಮ ಒಂದು ದಿನದ ಮಟ್ಟಿಗೆ ಎಲ್ಲ ಕಾರ್ಯಗಳನ್ನು ಬದಿಗಿಟ್ಟು ಸಮಾರಂಭಕ್ಕೆ ಆಗಮಿಸಬೇಕು.

- ಶಂಭುಲಿಂಗಪ್ಪ, ಹಿರಿಯ ಮುಖಂಡ

- - -

-11ಜೆ.ಎಲ್.ಆರ್.ಚಿತ್ರ1:

ಜಗಳೂರು ಪಟ್ಟಣದ ಪತ್ರಕರ್ತರ ಭವನದಲ್ಲಿ ಗುರುವಾರ ಮಾದಿಗ ಸಮುದಾಯದ ಮುಖಂಡ ಶಂಭುಲಿಂಗಪ್ಪ ಇತರರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ