ಇಂದು ಅಂತಾರಾಷ್ಟ್ರೀಯ ಕ್ರಿಕೆಟ್‌: ಸಂಸದೆ ಡಾ.ಪ್ರಭಾ ಚಾಲನೆ

KannadaprabhaNewsNetwork |  
Published : Nov 25, 2025, 01:30 AM IST
25ಕೆಡಿವಿಜಿ5-ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರಿಕೆಟ್ ಟೂರ್ನಿಯ ಟಿ ಶರ್ಟ್‌ಗಳನ್ನು ಬಿಡುಗಡೆ ಮಾಡಿದ ದಿನೇಶ ಶೆಟ್ಟಿ, ಶ್ರೀನಿವಾಸ ಶಿವಗಂಗಾ, ಜಯಪ್ರಕಾಶ ಗೌಡ ಇತರರು. .................25ಕೆಡಿವಿಜಿ6-ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರಿಕೆಟ್ ಟೂರ್ನಿ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ದಿನೇಶ ಶೆಟ್ಟಿ, ಶ್ರೀನಿವಾಸ ಶಿವಗಂಗಾ, ಜಯಪ್ರಕಾಶ ಗೌಡ ಇತರರು. | Kannada Prabha

ಸಾರಾಂಶ

ದಿವಂಗತ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸವಿನೆನಪಿಗಾಗಿ 18ನೇ ವರ್ಷದ ಅಂತರ ರಾಷ್ಟ್ರೀಯಮಟ್ಟದ ಐದು ದಿನಗಳ ಹೊನಲು ಬೆಳಕಿನ ಲೀಗ್ ಕಂ ನಾಕೌಟ್ ಕ್ರಿಕೆಟ್ ಪಂದ್ಯಾವಳಿಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನ.25ರಂದು ಮಧ್ಯಾಹ್ನ 3.30ಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಹೇಳಿದ್ದಾರೆ.

- ಪಾರ್ವತಮ್ಮ ಶಾಮನೂರು ಸವಿನೆನಪಿನ 18ನೇ ವರ್ಷದ ಟೂರ್ನಿ: ದಿನೇಶ ಶೆಟ್ಟಿ । ಶಾಮನೂರು ಡೈಮಂಡ್-ಶಿವಗಂಗಾ ಕಪ್‌ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಿವಂಗತ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸವಿನೆನಪಿಗಾಗಿ 18ನೇ ವರ್ಷದ ಅಂತರ ರಾಷ್ಟ್ರೀಯಮಟ್ಟದ ಐದು ದಿನಗಳ ಹೊನಲು ಬೆಳಕಿನ ಲೀಗ್ ಕಂ ನಾಕೌಟ್ ಕ್ರಿಕೆಟ್ ಪಂದ್ಯಾವಳಿಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನ.25ರಂದು ಮಧ್ಯಾಹ್ನ 3.30ಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಸಂಜೆ ಟೂರ್ನಿ ಸಿದ್ಧತೆ ವೀಕ್ಷಿಸಿದ ನಂತರ ಅಫಿಷಿಯಲ್ ಕಪ್ ಟೂರ್ನಿಯ ಸಮವಸ್ತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು. ಡಿಸಿ ಜಿ.ಎಂ. ಗಂಗಾಧರ ಸ್ವಾಮಿ, ಎಸ್‌ಪಿ ಉಮಾ ಪ್ರಶಾಂತ, ದೂಡಾ ಆಯುಕ್ತ ಹುಲ್ಮನಿ ತಿಮ್ಮಣ್ಣ, ಪಾಲಿಕೆ ಆಯುಕ್ತೆ ರೇಣುಕಾ, ಹಿರಿಯ ಉದ್ಯಮಿ ಅಥಣಿ ಎಸ್.ವೀರಣ್ಣ, ಯುವ ಉದ್ಯಮಿ ಶ್ರೀನಿವಾಸ ವಿ. ಶಿವಗಂಗಾ, ಮಹದೇವ, ಮಾಜಿ ಮೇಯರ್ ಕೆ.ಚಮನ್ ಸಾಬ್‌, ಎ.ನಾಗರಾಜ, ಜಿ.ಎಸ್.ಮಂಜುನಾಥ ಗಡಿಗುಡಾಳ ಇನ್ನಿತರ ಗಣ್ಯರು ಭಾಗವಹಿಸುವರು ಎಂದರು.

5 ದಿನಗಳ ಕಾಲ ಕ್ರಿಕೆಟ್ ಹಬ್ಬ ನಡೆಯಲಿದೆ. ಎಲ್ಲ ಅಂತಿಮ ಸಿದ್ಧತೆಗಳೂ ಪೂರ್ಣಗೊಂಡಿವೆ. ದುಬೈ ಮೂಲಕ ಎಂ9 ಸ್ಪೋರ್ಟ್ಸ್‌ನಿಂದ ಯುಟ್ಯೂಬ್‌ನಲ್ಲಿ ಇಡೀ ಪಂದ್ಯಾವಳಿಯ ನೇರ ಪ್ರಸಾರವಿರುತ್ತದೆ. ಕಳೆದ ವರ್ಷ 2.5 ಲಕ್ಷಕ್ಕೂ ಅಧಿಕ ಜನರು ಕ್ರಿಕೆಟ್ ಪಂದ್ಯಾವಳಿಯನ್ನು ನೇರ ವೀಕ್ಷಣೆ ಮಾಡಿದ್ದರು. ಈ ಸಲ ಅದಕ್ಕಿಂತಲೂ ದುಪ್ಪಟ್ಟು ವೀಕ್ಷಕರಾಗುವ ನಿರೀಕ್ಷೆ ಇದೆ. ದೇಶ, ವಿದೇಶ, ವಿವಿಧ ಜಿಲ್ಲೆಗಳ ತಂಡಗಳಿಗೆ ಟಿಶರ್ಟ್‌, ಊಟ, ವಸತಿ ವ್ಯವಸ್ಥೆ ಸಹ ಮಾಡಲಾಗಿದೆ ಎಂದು ಹೇಳಿದರು.

ದಾವಣಗೆರೆ ಇಲೆವೆನ್ಸ್ ಕ್ರಿಕೆಟ್ ಕ್ಲಬ್‌, ಜಿಲ್ಲಾ ಕ್ರೀಡಾಪಟಗಳ ಸಾಂಸ್ಕೃತಿಕ ಸಂಘದಿಂದ ಪಂದ್ಯಾವಳಿ ನಡೆಯುತ್ತಿದೆ. ಶ್ರೀಲಂಕಾ, ನೇಪಾಳ ದೇಶದ ತಂಡಗಳು, ಮಹಾರಾಷ್ಟ್ರ, ಕೇರಳ, ಕರ್ನಾಟಕ ಸೇರಿದಂತೆ ವಿವಿಧ ಜಿಲ್ಲೆಗಳ ತಂಡಗಳ 900 ಕ್ರೀಡಾಪಟುಗಳು ಭಾಗವಹಿಸುವರು. ಚೆನ್ನೈ, ಬೆಂಗಳೂರು, ಹುಬ್ಬಳ್ಳಿ, ಶಿವಮೊಗ್ಗ, ಮಂಗಳೂರು, ಉಡುಪಿ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳ ತಂಡ ಪಾಲ್ಗೊಳ್ಳಲಿವೆ. ಹೊನಲು ಬೆಳಕಿನ ಕ್ರಿಕೆಟ್ ಟೂರ್ನಿಯು ರಾಜ್ಯ, ರಾಷ್ಟ್ರದಲ್ಲಿ ಗಮನ ಸೆಳೆದಿದೆ ಎಂದು ತಿಳಿಸಿದರು.

ಸಂಘದ ಉಪಾಧ್ಯಕ್ಷ, ಯುವ ಉದ್ಯಮಿ ಶ್ರೀನಿವಾಸ ವಿ. ಶಿವಗಂಗಾ, ಸಹ ಕಾರ್ಯದರ್ಶಿ ಜಯಪ್ರಕಾಶ ಗೌಡ, ಸುರೇಶ, ಹಾಲಪ್ಪ, ಗಾಂಧಿ, ರಘು, ಆಕಾಶ್, ಕಾರ್ತಿಕ್ ಆನಂದರಾಜ, ಯೋಗಿ, ಶಾಂತ, ಪ್ರಕಾಶ, ತಾಹೀರ್‌, ಪ್ರವೀಣ, ವರುಣ್‌, ಚಂದ್ರು, ಕೃಷ್ಣ ಇತರರು ಇದ್ದರು.

ಇದೇ ವೇಳೆ ಅಫಿಷಿಯಲ್ ಕಪ್ ತಂಡಗಳ ಟಿ ಶರ್ಟ್‌ಗಳನ್ನು ದಿನೇಶ ಶೆಟ್ಟಿ, ಶ್ರೀನಿವಾಸ ಶಿವಗಂಗಾ, ಜಯಪ್ರಕಾಶ ಗೌಡ ಇತರರು ಬಿಡುಗಡೆ ಮಾಡಿದರು.

- - -

(ಬಾಕ್ಸ್‌)

* ಅಫಿಷಿಯಲ್ ಕಪ್ ಅಫಿಷಿಯಲ್ ಕಪ್‌ ಸಹ ನಡೆಯಲಿದ್ದು, ಪಾರ್ವತಮ್ಮ ಶಾಮನೂರು ಸ್ಮರಣಾರ್ಥ ಮುಖ್ಯ ಟೂರ್ನಿಯ ವಿಜೇತ ತಂಡಕ್ಕೆ ₹5,55,555 ರು. ನಗದು ಬಹುಮಾನ, ಶಾಮನೂರು ಡೈಮಂಡ್ ಕಪ್, ದ್ವಿತೀಯ ಸ್ಥಾನಕ್ಕೆ ₹3,55,555 ರು., ಶಿವಗಂಗಾ ಟ್ರೋಫಿ, ತೃತೀಯ ಸ್ಥಾನಕ್ಕೆ ₹1,55,500 ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಸುಮಾರು ₹35-₹40 ಲಕ್ಷ ವೆಚ್ಚದಲ್ಲಿ ಇಡೀ ಪಂದ್ಯಾವಳಿ ನಡೆಯುತ್ತಿದೆ. ಇಡೀ ರಾಜ್ಯ, ರಾಷ್ಟ್ರದಲ್ಲೇ ಅಪರೂಪದ ಕ್ರಿಕೆಟ್ ಟೂರ್ನಿ ಇದಾಗಿದೆ ಎಂದು ದಿನೇಶ ಶೆಟ್ಟಿ ವಿವರಿಸಿದರು.

- - -

-25ಕೆಡಿವಿಜಿ5.ಜೆಪಿಜಿ:

ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರಿಕೆಟ್ ಟೂರ್ನಿಯ ಟಿ ಶರ್ಟ್‌ಗಳನ್ನು ದಿನೇಶ ಶೆಟ್ಟಿ, ಶ್ರೀನಿವಾಸ ಶಿವಗಂಗಾ, ಜಯಪ್ರಕಾಶ ಗೌಡ ಇತರರು ಬಿಡುಗಡೆ ಮಾಡಿದರು.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಶವ ಬಗ್ಗೆ ಬುರುಡೆ ಬಿಟ್ಟ ಚಿನ್ನಯ್ಯಗೆ ಬೇಲ್
ಕೈ ರೆಬೆಲ್ಸ್‌ ಜತೆ ಸೇರಿ ನಾವು ಸರ್ಕಾರ ಮಾಡಲ್ಲ : ಅಶೋಕ್‌