ಶಿವಮೊಗ್ಗ: ಅಂಜಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಕಾರಗಡಿ ಐಕ್ಯೂಎಸಿ, ಸಾಂಸ್ಕೃತಿಕ ವೇದಿಕೆ ಹಾಗೂ ಕನ್ನಡ ಸಾಹಿತ್ಯ ವೇದಿಕೆ, ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸನಗರ ಇವರ ಸಹಯೋಗದಲ್ಲಿ ರಾಷ್ಟ್ರೀಯ ನವಚೇತನ ಪ್ರಶಸ್ತಿ ಪುರಸ್ಕೃತ ಕವಿ-ಸಾಹಿತಿ ಪ್ರವೀಣ್ ಎಂ. ಕಾರ್ಗಡಿ ಇವರ ಸಾರಥ್ಯದಲ್ಲಿ ಹೊಸನಗರದ ಕೊಡಚಾದ್ರಿ ಕಾಲೇಜು ಕುವೆಂಪು ಸಭಾಂಗಣದಲ್ಲಿ ಜ.18ರಂದು ಬೆಳಗ್ಗೆ 10.30ಕ್ಕೆ ಅಂತಾರಾಷ್ಟ್ರೀಯ ಕವಿ ಸಮ್ಮೇಳನ ನಡೆಯಲಿದೆ ಎಂದು ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಪತಿ ಅಳಗುಂದ ತಿಳಿಸಿದರು.
ಅಂಜಲಿ ಪಿ.ಕಾರಗಡಿ ಅವರಿಂದ ಭಾರತನಾಟ್ಯ ಪ್ರದರ್ಶನವಿದ್ದು, ದಾವಣಗೆರೆಯ ಲೇಖಕಿ ವೀರಮ್ಮ ಎಸ್.ಹಿರೇಬಿದ್ರಿ ಅವರ ಹೊಂಬೆಳಕು ಪ್ರತಿ ಲೋಕಾರ್ಪಣೆಗೊಳ್ಳಲಿದೆ. ಕೆ.ಎಸ್.ವಿನಾಯಕ ಅವರ ವಿಶೇಷವಾದ ಗೋಡೆ ಚಿತ್ರಗಳ ಅಮ್ಮನ ಮಡಿಲು ಪ್ರದರ್ಶನವಿರುತ್ತದೆ ಎಂದರು.
ಈಗಾಗಲೇ ಕರ್ನಾಟಕ, ಅಮೆರಿಕ, ಶ್ರೀಲಂಕಾ ಸೇರಿದಂತೆ ಭಾರತದ ಹಲವು ರಾಜ್ಯಗಳಿಗೆ 100ಕ್ಕೂ ಹೆಚ್ಚಿನ ಕವಿಗಳ ಕಲರವ ಕಾರ್ಯಕ್ರಮಕ್ಕೆ ನೋಂದಣಿ ಮಾಡಿಸಿದ್ದು, ಬೆಳಿಗ್ಗೆ 10ಕ್ಕೆ ಆರಂಭವಾಗುವ ಈ ಕಾರ್ಯಕ್ರಮದಲ್ಲಿ ಕವಿತೆ ವಾಚನ ಮಾಡುವವರಿಗೆ ಹಲವು ಗೋಷ್ಠಿಗಳಿಗೆ. ಮತ್ತು ಭಾಗವಹಿಸುವ ಎಲ್ಲರಿಗೂ ಪ್ರಶಸ್ತಿ ಪತ್ರವಿದ್ದು, ಮಧ್ಯಾಹ್ನ ಊಟದ ವ್ಯವಸ್ಥೆ ಇರುತ್ತದೆ. ದೂರದಿಂದ ಬರುವ ಆಸಕ್ತ ಕವಿಗಳಿಗೆ ಬಯಸಿದಲ್ಲಿ ಸರಳವಾದ ವಸತಿ ವ್ಯವಸ್ಥೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ:6360435514ನ್ನು ಸಂಪರ್ಕಿಸುವಂತೆ ಕೋರಿದರು.ಪತ್ರಿಕಾಗೋಷ್ಠಿಯಲ್ಲಿ ತಾಯಿಮನೆ ಸುದರ್ಶನ್, ಪ್ರವೀಣ್ ಎಂ.ಕಾರ್ಗಡಿ ಉಪಸ್ಥಿತರಿದ್ದರು.