ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸೋಮವಾರ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸುಂಟಿಕೊಪ್ಪ ಮಲಯಾಳಿ ಸಮಾಜದ ವತಿಯಿಂದ 17ನೇ ವರ್ಷದ ಅದ್ಧೂರಿ ಓಣಂ ಆಚರಣೆ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯೆಯಿಂದ ಪ್ರಬುದ್ಧರಾಗಿರಿ ಸಂಘಟನೆಯಿಂದ ಶಕ್ತರಾಗಿರಿ ಎಂಬ ಸಂದೇಶವನ್ನು ತಮ್ಮ ಸಮಾಜದಲ್ಲಿ ಮಾತ್ರವೇ ಅನುಸರಿಸದೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳನ್ನು ತಲುಪುವಂತೆ ಕಳೆದ 16 ವರ್ಷಗಳಿಂದ ಓಣಂ ಆಚರಣೆಯಲ್ಲಿ ತೊಡಗಿಸಿಕೊಂಡು ಹಬ್ಬವನ್ನು ಆಚರಿಸುತ್ತಿರುವುದು ಹರ್ಷದಾಯಕ ವಿಚಾರ ಎಂದು ತಿಳಿಸಿದರು.ಶ್ರೀ ನಾರಾಯಣ ಗುರುಗಳ ಮುಖ್ಯ ಸಂದೇಶವಾದ ಸಮಾಜ ಬಾಂಧವರು ಉನ್ನತ ಶಿಕ್ಷಣವನ್ನು ಪಡೆಯುವುದು ಗುರಿಯಾಗಬೇಕು. ವಿವಿಧತೆಯಲ್ಲಿ ಏಕತೆ ಮತ್ತು ಸಮಾಜದಲ್ಲಿ ಸಮಬಾಳು ಸಮಪಾಲುತತ್ವವನ್ನು ತರುವಲ್ಲಿ ಶ್ರಮಿಸುತ್ತಿದ್ದು, ನಾವೆಲ್ಲಾರೂ ಈ ವಿಚಾರದಲ್ಲಿ ಸುಂಟಿಕೊಪ್ಪ ಮಲಯಾಳಿ ಸಮಾಜವನ್ನು ಅಭಿನಂದಿಸಬೇಕಾಗಿದೆ ಎಂದು ಹೇಳಿದ ಅವರು ಈ ಕಾರಣಕ್ಕಾಗಿಯೇ ಕಳೆದ 16ವರ್ಷಗಳಿಂದ ಓಣಂ ಆಚರಣೆಯು ವರ್ಷದಿಂದ ವರ್ಷಕ್ಕೆ ಅದ್ಧೂರಿ ಮತ್ತು ವರ್ಣರಂಜಿತವಾಗಿ ನಡೆಯುತ್ತಿರುವುದು ಸಾಕ್ಷಿಯಾಗಿದೆ ಎಂದು ಅವರು ಶ್ಲಾಘಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ.ಲತೀಫ್ ಮಾತನಾಡಿ, ನಾವೆಲ್ಲರೂ ಪರಸ್ಪರ ಸಹೋದರತೆಯಿಂದ ಸಾಮರಸ್ಯದಿಂದ ಬಾಳಬೇಕು ಈ ರೀತಿಯ ಕಾರ್ಯಕ್ರಮಗಳು ಆಯೋಜಿಸುವ ಸಂದರ್ಭ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಕೈ ಜೋಡಿಸ ಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್, ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ವಿ.ಎಂ.ವಿಜಯನ್, ಮಡಿಕೇರಿ ತಾಲೂಕಿನ ಖಜಾಂಜಿ ದಿನೇಶ್, ಮಡಿಕೇರಿ ಎಸ್.ಎನ್.ಡಿ.ಪಿ. ಅಧ್ಯಕ್ಷ ವಾಸುದೇವನ್, ಪ್ರಕಾಶ್, ಸುಂಟಿಕೊಪ್ಪ ಮಲಯಾಳಿ ಸಮಾಜದ ಸ್ಥಾಪಕಾಧ್ಯಕ್ಷ ಪಿ.ಆರ್.ಸುಕುಮಾರ್, ಪಿ.ಸಿ.ಮೋಹನ್, ವಿ.ಎ.ಸಂತೋಷ್ ಮಾತನಾಡಿದರು.
ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಮಲಯಾಳಿ ಸಮಾಜದ ಅಧ್ಯಕ್ಷ ಎಂ.ಆರ್.ಶಶಿಕುಮಾರ್ ವಹಿಸಿದರು.ಮಲಯಾಳಿ ಬಾಂಧವರು ಓಣಂ ಆಚರಣೆಯ ಪ್ರಮುಖ ಭಾಗವಾದ ಪೂಕಳಂ ಸ್ಪರ್ಧೆಯು ಬೆಳಗ್ಗೆ 7.30ರಿಂದ 9.30ಗಂಟೆಯವರೆಗೆ ನಾರಾಯಣ ಗುರು ಭವನದಲ್ಲಿ ನಡೆಯಿತು.
ಓಣಂ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ದೇಶದ ಸೇನೆಯಲ್ಲಿ ಯೋಧರಾಗಿ ಸೇವೆಸಲ್ಲಿಸಿ ನಿವೃತ್ತಿಗೊಂಡಿರುವ ಪ್ರಶಾಂತ್, ಶಿವಪ್ರಸಾದ್, ಹಾಗೂ ಸುಂಟಿಕೊಪ್ಪ ಪನ್ಯ ತೋಟದಲ್ಲಿ ಅಂತರ್ ರಾಜ್ಯದಲ್ಲಿ ಕೊಲೆಗೈದು ಮೃತದೇಹದ ಗುರುತು ಪತ್ತೆಯಾಗದಂತೆ ಸುಟ್ಟು ಹಾಕಿರುವ ಪ್ರಕರಣವನ್ನು ಭೇದಿಸಿದ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್, ಪ್ರವೀಣ್ ಹಾಗೂ ಮಹಿಳಾ ಪೇದೆ ಆಶಾ ಅವರನ್ನು ಗೌರವಿಸಲಾಯಿತು.
ಪ್ರತಿಭಾ ಪುರಸ್ಕಾರ, ಓಣಂ ಸದ್ಯ ನಡೆಯಿತು. ಮಧ್ಯಾಹ್ನದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.