ರಬಕವಿ-ಬನಹಟ್ಟಿ: ಬನಹಟ್ಟಿ ಪೊಲೀಸರು ಅಂತಾರಾಜ್ಯ ಬೈಕ್ ಕಳ್ಳನನ್ನು ಬಂಧಿಸಿ, ಆತನಿಂದ ₹೨.೪೦ ಲಕ್ಷ ಮೌಲ್ಯದ ವಿವಿಧ ಕಂಪನಿಯ ನಾಲ್ಕು ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ಜಿಲ್ಲೆಯ ನಂದೇಶ್ವರ ಗ್ರಾಮದ ವಿಶ್ವನಾಥ ಗುರವ (೨೪) ಬಂಧಿತ ಆರೋಪಿ. ಈತನಿಂದ ನಾಲ್ಕು ಬೈಕ್ ಜಪ್ತಿ ಮಾಡಲಾಗಿದೆ. ತಾಲೂಕಿನ ಹಿಪ್ಪರಗಿ ಗ್ರಾಮದ ಹಿಪ್ಪರಗಿ ಡ್ಯಾಂ ಹತ್ತಿರ ವಾಹನ ಪರಿಶೀಲನೆ ನಡೆಸುತ್ತಿದ್ದ ವೇಳೆ ಪೊಲೀಸರ ಬಲೆಗೆ ಈತ ಬಿದ್ದಿದ್ದಾನೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.