ಕನ್ನಡಪ್ರಭ ವಾರ್ತೆ ಬೆಂಗಳೂರು
ಶುಕ್ರವಾರ ಕ್ರಿಕೆಟ್ ಆಟಗಾರ್ತಿ ಶ್ರೇಯಾಂಕ ಪಾಟೀಲ್, ಡಾಕ್ಟರ್ ಬ್ರೋ ಖ್ಯಾತಿಯ ಯೂಟ್ಯೂಬರ್ ಗಗನ್ ಶ್ರೀನಿವಾಸ್ ಅವರು ‘ಗರುಡ ಗ್ಲೈಡ್’ಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಂಡರ್ ಲಾ ಹಾಲಿಡೇಸ್ ಲಿಮಿಟೆಡ್ ಕಾರ್ಯನಿರ್ವಾಹಕ ಅಧ್ಯಕ್ಷ ಅರುಣ್ ಕೆ.ಚಿತ್ತಿಲಪ್ಪಿಲ್ಲಿ, ಸುಮಾರು 13 ಕೋಟಿ ರು.ವೆಚ್ಚದಲ್ಲಿ ಈ ಗರುಡ ಗ್ಲೈಡ್‌ಗಳನ್ನು ಅಳವಡಿಸಲಾಗಿದೆ. ಗುರುತ್ವಾಕರ್ಷಣೆಯನ್ನು ಸವಾಲು ಮಾಡುವ ಐದು ಇನ್ವರ್ಷನ್, ರೈಡ್ ಮಾಡುವವರು ರೋಲ್ ಓವರ್, ವರ್ಟಿಕಲ್ ಲೂಪ್, ಸೈಡ್ ವೈಂಡರ್ ಮತ್ತು ಡಬಲ್ ಇನ್‌ಲೈನ್ ಟ್ವಿಸ್ಟ್‌ಗಳನ್ನು ಸತತವಾಗಿ ಅನುಭವಿಸುತ್ತಾರೆ. ಯಾವುದೇ ವಿರಾಮವಿಲ್ಲದೆ ಸಂಪೂರ್ಣ ರೋಮಾಂಚನ ನೀಡುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದರು.ಸುಮಾರು 662 ಮೀ.ಗಳಷ್ಟು ಉದ್ದವಿರುವ ಸ್ಟೀಲ್ ಹಳಿಯ ಮೇಲೆ ಗಂಟೆಗೆ 80 ಕಿಮೀ ವೇಗದಲ್ಲಿ ಸಾಗುತ್ತಾ, 31 ಮೀ.ಎತ್ತರಕ್ಕೆ ಏರಬಹುದು. 130 ಸೆಕೆಂಡ್‌ಗಳ ಪ್ರಯಾಣವು ಅದ್ಭುತ ರೋಚಕತೆಯಿಂದ ಕೂಡಿದೆ. ಇಲ್ಲಿ ಎರಡು ರೈಲುಗಳು ಏಕಕಾಲದಲ್ಲಿ ಚಲಿಸುತ್ತವೆ. ಪ್ರತಿಯೊಂದೂ 14 ಸವಾರರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದು, ಪ್ರತಿ ಗಂಟೆಗೆ ಸುಮಾರು 252 ಅತಿಥಿಗಳು ಈ ಸವಾರಿಯ ಅನುಭವ ಪಡೆಯಲು ಅನುವು ಮಾಡಿಕೊಡುತ್ತದೆ ಎಂದರು.