ಪೇಜಾವರ ವಿಶ್ವೇಶತೀರ್ಥ ಶ್ರೀಪಾದರ ಬಗ್ಗೆ ಪ್ರಬಂಧ ಸ್ಪರ್ಧೆಗೆ ಆಹ್ವಾನ

KannadaprabhaNewsNetwork |  
Published : Nov 29, 2026, 03:00 AM IST
ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಶುಕ್ರವಾರ ಕನಕದಾಸರ ಜಯಂತಿ ಆಚರಣೆ ನಡೆಯಿತು.  | Kannada Prabha

ಸಾರಾಂಶ

ಹರಿಪಾದ ಸೇರಿರುವ ಪದ್ಮವಿಭೂಷಣ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪುಣ್ಯ ತಿಥಿಯ ಸಲುವಾಗಿ ಡಿ.೨೯ರಂದು ನಡೆಯರುವ ಕಾರ್ಯಕ್ರಮದ ಪ್ರಯುಕ್ತ ಕಲ್ಕೂರ ಪ್ರತಿಷ್ಠಾನ ವಿಶ್ವೇಶತೀರ್ಥ ಶ್ರೀಪಾದರ ಬಗ್ಗೆ ಪ್ರಬಂಧಸ್ಪರ್ಧೆ ಏರ್ಪಡಿಸಲಾಗಿದ್ದು, ವಿದ್ಯಾರ್ಥಿಗಳಿಂದ ಪ್ರಬಂಧ ಆಹ್ವಾನಿಸಲಾಗಿದೆ.

ಮಂಗಳೂರು: ಹರಿಪಾದ ಸೇರಿರುವ ಪದ್ಮವಿಭೂಷಣ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪುಣ್ಯ ತಿಥಿಯ ಸಲುವಾಗಿ ಡಿ.೨೯ರಂದು ನಡೆಯರುವ ಕಾರ್ಯಕ್ರಮದ ಪ್ರಯುಕ್ತ ಕಲ್ಕೂರ ಪ್ರತಿಷ್ಠಾನ ವಿಶ್ವೇಶತೀರ್ಥ ಶ್ರೀಪಾದರ ಬಗ್ಗೆ ಪ್ರಬಂಧಸ್ಪರ್ಧೆ ಏರ್ಪಡಿಸಲಾಗಿದ್ದು, ವಿದ್ಯಾರ್ಥಿಗಳಿಂದ ಪ್ರಬಂಧ ಆಹ್ವಾನಿಸಲಾಗಿದೆ.ಕಾಲೇಜು ಹಾಗೂ ಮುಕ್ತ ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಕಾಲೇಜು ವಿಭಾಗಕ್ಕೆ ‘ಪದ್ಮವಿಭೂಷಣ ವಿಶ್ವೇಶತೀರ್ಥರು ನಾನು ಕಂಡಂತೆ’ ಎಂಬ ವಿಷಯದ ಬಗ್ಗೆ ಮತ್ತು ಮುಕ್ತ ವಿಭಾಗಕ್ಕೆ ‘ಪದ್ಮವಿಭೂಷಣ ವಿಶ್ವೇಶತೀರ್ಥ ಶ್ರೀಪಾದರು ವಿಶ್ವಮಾನ್ಯರು: ಅವಲೋಕನ, -ಅನುಸಂಧಾನ’ ವಿಷಯದ ಬಗ್ಗೆ ಪ್ರಬಂಧವನ್ನು ಮೂರು ಪುಟಗಳಿಗೆ ಮೀರದಂತೆ ಬರೆದು, ಡಿ.೨೫ರ ಒಳಗಾಗಿ, ಸ್ವ-ವಿಳಾಸ ಮತ್ತು ಸಂಪರ್ಕ ದೂರವಾಣಿ ಸಂಖ್ಯೆಯೊಂದಿಗೆ, ಜಿ.ಕೆ.ಭಟ್ ಸೇರಾಜೆ (ಸಂಚಾಲಕರು) ಕಲ್ಕೂರ ಪ್ರತಿಷ್ಠಾನ, ಶ್ರೀಕೃಷ್ಣ ಸಂಕೀರ್ಣ, ಮಹಾತ್ಮ ಗಾಂಧಿ ರಸ್ತೆ, ಕೊಡಿಯಾಲ್‌ಬೈಲ್, ಮಂಗಳೂರು ಈ ವಿಳಾಸಕ್ಕೆ ಕಳುಹಿಸಿಕೊಡಬೇಕು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

-----------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಕ್ಕರೆ ಕನಿಷ್ಠ ಮಾರಾಟ ಬೆಲೆ ಕೆ.ಜಿ.ಗೆ ₹60ಕ್ಕೆ ಹೆಚ್ಚಿಸಿ
ಸೈನಿಕ ಶಾಲೆ ಪ್ರವೇಶಾತಿಗೆ ಜ.31ರಂದು ಪರೀಕ್ಷೆ