ಜಾನಪದ ಸಮ್ಮೇಳನಕ್ಕೆ ಸರ್ವಾಧ್ಯಕ್ಷೆ ಮೋಟಮ್ಮ‌ಗೆ ಆಹ್ವಾನ

KannadaprabhaNewsNetwork |  
Published : Mar 30, 2026, 12:15 AM IST
ಮೋಟಮ್ಮ‌ | Kannada Prabha

ಸಾರಾಂಶ

ಚಿಕ್ಕಮಗಳೂರುಚಿಕ್ಕಮಗಳೂರು ಜಿಲ್ಲಾ 6ನೇ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾದ ಮಾಜಿ ಸಚಿವೆ ಹಾಗೂ ಜಾನಪದ ಹಿರಿಯ ಕಲಾವಿದೆ ಮೋಟಮ್ಮ‌ಅವರನ್ನು ಭಾನುವಾರ ಸನ್ಮಾನಿಸಿ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಡುವಂತೆ ಕರ್ನಾಟಕ ಜಾನಪದ ಪರಿಷತ್ತು ಚಿಕ್ಕಮಗಳೂರು ಜಿಲ್ಲಾ ಘಟಕ ಪದಾಧಿಕಾರಿಗಳು ಮನವಿ‌‌ ಮಾಡಿ ಆಹ್ವಾನಿಸಿದರು.

ಕರ್ನಾಟಕ ಜಾನಪದ ಪರಿಷತ್ತು ಚಿಕ್ಕಮಗಳೂರು ಜಿಲ್ಲಾ ಘಟಕ ಪದಾಧಿಕಾರಿಗಳ ಮನವಿ‌‌

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಚಿಕ್ಕಮಗಳೂರು ಜಿಲ್ಲಾ 6ನೇ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾದ ಮಾಜಿ ಸಚಿವೆ ಹಾಗೂ ಜಾನಪದ ಹಿರಿಯ ಕಲಾವಿದೆ ಮೋಟಮ್ಮ‌ಅವರನ್ನು ಭಾನುವಾರ ಸನ್ಮಾನಿಸಿ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಡುವಂತೆ ಕರ್ನಾಟಕ ಜಾನಪದ ಪರಿಷತ್ತು ಚಿಕ್ಕಮಗಳೂರು ಜಿಲ್ಲಾ ಘಟಕ ಪದಾಧಿಕಾರಿಗಳು ಮನವಿ‌‌ ಮಾಡಿ ಆಹ್ವಾನಿಸಿದರು.

ಮೂಡಿಗೆರೆ ಶಾಸಕಿ ನಯನಾ ಮೊಟ್ಟಮ್ಮ ಅವರು ಸಮ್ಮೇಳನದಲ್ಲಿ ಉಪಸ್ಥಿತರಿದ್ದು ಅದ್ದೂರಿಯಾಗಿ ಸಮ್ಮೇಳನ ನಡೆಯಲು ಎಲ್ಲಾ ಸಹಕಾರ ನೀಡಬೇಕೆಂದು ಇದೇ ವೇಳೆ ಮನವಿ ಮಾಡಲಾಯಿತು.

ಜಾನಪದ ಪರಿಷತ್ತು ಚಿಕ್ಕಮಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಜಿ. ಬಿ. ಸುರೇಶ್ ಮಾತನಾಡಿ, ಆಶ್ರಯ ಫೌಂಡೇಶನ್ ಸಹಯೋಗ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಜಿ.ಪಿ. ಕೃಷ್ಣೇಗೌಡರ ಸಾರಥ್ಯದಲ್ಲಿ ಏ.26 ರಂದು ಚಿಕ್ಕಮಗಳೂರು ನಗರದ ಕುವೆಂಪು ಕಲಮಂದಿರದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ ಎಂದರು.

ಮೋಟಮ್ಮ ನಾಡಿನ ಜಾನಪದ ಕಲೆ, ಸಾಹಿತ್ಯ,ಸಂಗೀತ, ಉಳಿಸಿ ಬೆಳೆಸುವಲ್ಲಿ ಬಹಳಷ್ಟು ಶ್ರಮವಹಿಸಿದ್ದಾರೆ. ಸೋಬಾನೆ ಪದ, ಹಸೆ ಪದ, ನಾಟಿಪದ, ಜಾನಪದ ಗೀತೆಗಳು ಮುಂತಾದ ಹಾಡುಗಳನ್ನು ಕಟ್ಟಿ ಜಾನಪದ ಸಮ್ಮೇಳನ, ಜಾನಪದ ಜಾತ್ರೆ, ಸಾರ್ವಜನಿಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಸೊಗಸಾಗಿ ಹಾಡಿದ್ದಾರೆ ಎಂದು ಹೇಳಿದರು.

ಏ.26 ರಂದು ಸಮ್ಮೇಳನ ಅಧ್ಯಕ್ಷರನ್ನು ಹನುಮಂತಪ್ಪ ವೃತ್ತದಿಂದ ಕುವೆಂಪು ಕಲಮಂದಿರದವರೆಗೆ ಜಿಲ್ಲೆಯ ಎಲ್ಲಾ ಜಾನಪದ ಕಲಾ ತಂಡಗಳೊಂದಿಗೆ ಪೂರ್ಣ ಕುಂಭ ಸ್ವಾಗತದೊಂದಿಗೆ ಅದ್ಧೂರಿ ಮೆರವಣಿಗೆಯೊಂದಿಗೆ ಕರೆತರಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಪ್ರೊ. ಬೋರ ಲಿಂಗಯ್ಯ ಅವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗುವುದು.

ವೀರಗಾಸೆ, ಡೊಳ್ಳು ಕುಣಿತ, ಕೀಲು ಕುದುರೆ, ಕೋಲಾಟ, ನಂದಿ ಧ್ವಜ ಕುಣಿತ, ಗಾರುಡಿ ಗೊಂಬೆ, ಸೋಮನ ಕುಣಿತ, ಕಂಸಾಳೆ, ಜಾನಪದ ನೃತ್ಯ ಮುಂತಾದ ಕಲಾತಂಡಗಳವರು ಪ್ರದರ್ಶನ ನೀಡುವರು. ವೇದಿಕೆಯಲ್ಲಿ ಹಿರಿಯ ಜಾನಪದ ಕಲಾವಿದರನ್ನು ಸನ್ಮಾನಿಸಲಾಗುವುದು. ಸಮ್ಮೇಳನ ಉದ್ಘಾಟನೆ, ರೈತ ಜಾನಪದ, ಜಾನಪದದಲ್ಲಿ ಮಹಿಳೆ, ಜಾನಪದರ ಜಗಲಿ, ಸಮರಪ್ಪ ಸಮಾರಂಭ, ಜಾನಪದ ಸಿರಿ ಪ್ರಶಸ್ತಿ ಪ್ರದಾನ, ಜಾನಪದ ಗೀತೆ ಗಾಯನ ಮತ್ತು ನೃತ್ಯ ಪ್ರದರ್ಶನಗಳ ಕಾರ್ಯಕ್ರಮ ಅನಾವರಣಗೊಳ್ಳಲಿದೆ ಎಂದು ತಿಳಿಸಿದರು.

ಮೂಡಿಗೆರೆ ತಾಲೂಕ ಜಾನಪದ ಪರಿಷತ್ ಅಧ್ಯಕ್ಷ ಕುನ್ನಳ್ಳಿ ರವಿ ಮಾತನಾಡಿ, ಮೂಡಿಗೆರೆ ತಾಲೂಕಿನಿಂದ ಜಾನಪದ ಪರಿಕರಗಳ ವಸ್ತು ಪ್ರದರ್ಶನ ಮತ್ತು ಮಲೆನಾಡಿನ ವಿಶೇಷ ಅಡುಗೆಗಳನ್ನು ಪರಿಚಯಿಸಲಾಗುವುದು. ತಾಲೂಕಿನ ಎಲ್ಲಾ ಕಲಾವಿದರಿಗೆ ಮೆರವಣಿಗೆಯಲ್ಲಿ ಅವಕಾಶ ನೀಡಲಾಗುವುದು ಎಂದರು.

ಈ ವೇಳೆ ಗೌರವಾಧ್ಯಕ್ಷ ಸುಬ್ರಮಣ್ಯ, ನಿಕಟ ಪೂರ್ವ ಅಧ್ಯಕ್ಷ ಬಕ್ಕಿ ರವಿ, ನಿರ್ಮಲ ಮಂಚೇಗೌಡ ಬಿದರಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗೀಶ್ ,ಉಪಾಧ್ಯಕ್ಷ ಚಂದ್ರೇಗೌಡ, ಜಗದೀಶ, ಜ್ಯೋತಿ, ಗೋಪಾಲ, ದೀಪಿಕಾ,ಆಶಾ ಗಣೇಶ್, ಯಾಕುಬ್, ಸುಬತ್ತು ಉಪಸ್ಥಿತರಿದ್ದರು.-- ಕೋಟ್ --

ನನ್ನ ಜೀವನ ಮತ್ತು ನಾನು ಬೆಳೆದು ಬಂದ ಹಾದಿ ಮತ್ತು ರೀತಿ ನೀತಿಗಳೇ ಜಾನಪದ ಮತ್ತು ಜ್ಞಾನಪದ ಭಂಡಾರ. ನನ್ನ ಜೀವನವೇ ಜಾನಪದವೆಂದು ಹೇಳಬಹುದು. ನಾಡಿನ ಜಾನಪದ ವಿದ್ವಾಂಸರು, ಗ್ರಾಮೀಣ ಭಾರತದ ಜಾನಪದರು ಹಾಗೂ ಕೃಷಿಕರು ಮತ್ತು ಮಹಿಳೆಯರು ಉಳಿಸಿ ಬೆಳೆಸಿಕೊಂಡು ಬಂದಿರುವ ಜಾನಪದ ಸಾಹಿತ್ಯ ಸಂಗೀತ ಹಾಗೂ ಕಲೆಗಳನ್ನು ಇಂದಿನ ಯುವಕ ಯುವತಿಯರು ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ತಲುಪಿಸಿದಾಗ ಮಾತ್ರ ನಮ್ಮ ಭಾರತೀಯ ಸಂಸ್ಕೃತಿ ಹಾಗೂ ಈ ಮಣ್ಣಿನ ಸ್ವಂತಿಕೆ ಮತ್ತು ಜೀವಂತಿಕೆ ಉಳಿಯಲು ಸಾಧ್ಯ.- ಮೋಟಮ್ಮ ಮಾಜಿ ಸಚಿವೆ

(ಕೋಟ್ ಗೆ ಮೋಟಮ್ಮ ಫೋಟೊ )

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒತ್ತಡರಹಿತ ಜೀವನಕ್ಕಾಗಿ ದೈಹಿಕ ಚಟುವಟಿಕೆ ಅಗತ್ಯ: ಡಾ.ಮೇಘನಾ
ಎಲ್ಲಾ ಕ್ಷೇತ್ರಗಳಲ್ಲೂ ಪುರುಷರಿಗಿಂತ ಮಹಿಳೆಯರ ಸಾಧನೆ ಉತ್ತಮ: ಶಾಸಕ ಜಿ.ಎಚ್. ಶ್ರೀನಿವಾಸ್