ಕನ್ನಡಪ್ರಭವಾರ್ತೆ ಗುಳೇದಗುಡ್ಡ
ಕಸಾಪ ತಾಲೂಕು ಘಟಕದ ಅಧ್ಯಕ್ಷ ಡಾ.ಎಚ್.ಎಸ್. ಘಂಟಿ ಸನ್ಮಾನಿಸಿ ಮಾತನಾಡಿ, ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಹಲವು ಸೃಜನಾತ್ಮಕ ಕೃತಿಗಳನ್ನು ರಚಿಸುವುದರ ಜೊತೆಗೆ ಕನ್ನಡ ಮತ್ತು ತತ್ವಶಾಸ್ತ್ರ ಎರಡು ವಿಷಯದಲ್ಲಿ ಪಿ.ಎಚ್ ಡಿ ಪಡೆದು, ಸಾಹಿತ್ಯ ಚಟುವಟಿಕೆ ಸಂಘಟನೆ ಮಾಡಿದ ಸಂಶೋಧಕ ಡಾ.ಪಿ.ಎಂ. ಹುಗ್ಗಿ ಅವರು ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಅವರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಖುಷಿ ಪರಿಷತ್ತಿಗಿದೆ. ಸಮ್ಮೇಳನವನ್ನು ಹಬ್ಬದಂತೆ ಆಯೋಜನೆ ಮಾಡುತ್ತಿದ್ದು, ಎಲ್ಲ ಕನ್ನಡಪರ ಸಂಘಟನೆಗಳು ಕೈ ಜೋಡಿಸುವ ಮೂಲಕ ಸಮ್ಮೇಳನ ಯಶಸ್ವಿಗೊಳಿಸಲು ಕೋರಿದರು.
ಬಾದಾಮಿ ಕಸಾಪ ನಿಕಟಪೂರ್ವ ಅಧ್ಯಕ್ಷ ರವಿ ಕಂಗಳ ಮಾತನಾಡಿ, ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಡಾ.ಪಿ.ಎಂ.ಹುಗ್ಗಿ ಸಾಹಿತಿಗಳಾಗಿ, ಸಾಹಿತ್ಯ ಸಂಘಟಕರಾಗಿ, ಚಿಂತಕರಾಗಿ, ಉತ್ತಮ ವಾಗ್ಮಿಗಳಾಗಿದ್ದಾರೆ. ಅವರು ನಮ್ಮ ಕೊಂಕನಕೊಪ್ಪ ಗ್ರಾಮದವರಾಗಿದ್ದು, ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಸಂತಸ ತಂದಿದೆ. ಗ್ರಾಮದ ಎಲ್ಲರೂ ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತೇವೆ ಎಂದರು.