ಸಹಕಾರ ಸಂಘದ ಚುನಾವಣೆಯಲ್ಲಿ ಅಕ್ರಮ: ಅಧಿಕಾರಿಗಳ ಶಾಮೀಲು

KannadaprabhaNewsNetwork | Published : Mar 4, 2025 12:34 AM

ಸಾರಾಂಶ

ಕಡೂರು, ತಾಲೂಕಿನ ಪಂಚನಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಭಾನುವಾರ ನಡೆದ ಚುನಾವಣೆಯೇ ಅಕ್ರಮ. ಇದರಲ್ಲಿ ಚುನಾವಣಾಧಿಕಾರಿಯೇ ಶಾಮೀಲಾಗಿದ್ದು ಮರು ಮತದಾನ ನಡೆಯಬೇಕು ಎಂದು ಮುಖಂಡ ತಿಮ್ಮಲಾಪುರ ದಿನೇಶ್ ಆಗ್ರಹಿಸಿದರು.

ಮರು ಮತದಾನ ನಡೆಸಲು ಮುಖಂಡ ತಿಮ್ಮಲಾಪುರ ದಿನೇಶ್ ಆಗ್ರಹ

ಕನ್ನಡಪ್ರಭ ವಾರ್ತೆ, ಕಡೂರು

ತಾಲೂಕಿನ ಪಂಚನಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಭಾನುವಾರ ನಡೆದ ಚುನಾವಣೆಯೇ ಅಕ್ರಮ. ಇದರಲ್ಲಿ ಚುನಾವಣಾಧಿಕಾರಿಯೇ ಶಾಮೀಲಾಗಿದ್ದು ಮರು ಮತದಾನ ನಡೆಯಬೇಕು ಎಂದು ಮುಖಂಡ ತಿಮ್ಮಲಾಪುರ ದಿನೇಶ್ ಆಗ್ರಹಿಸಿದರು.

ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸಂಘದ ಕಾರ್ಯದರ್ಶಿ ಸಹಿ ಮತ್ತು ಸೀಲು ಹಾಕಿ, ಸದಸ್ಯತ್ವದ ಸಂಖ್ಯೆ ನಮೂದಿಸಿದ ಖಾಲಿ ಗುರುತಿನ ಚೀಟಿಗಳನ್ನು ಒಂದು ಟೀಮ್‍ಗೆ ನೀಡಿದ್ದಾರೆ. ಇದರಿಂದ ಶೇರುದಾರರಲ್ಲದವರು ಕೂಡ ಅಕ್ರಮ ಗುರುತಿನ ಚೀಟಿ ಪಡೆದು ನಕಲಿ ಮತದಾನ ಮಾಡಿದ್ದಾರೆ ಎಂದು ದೂರಿದರು.

ಚುನಾವಣಾಧಿಕಾರಿ ಸಹ ನೋಟಿಪಿಕೇಷನ್‍ನಲ್ಲಿ ತಪ್ಪು ತಪ್ಪಾಗಿ ಮುದ್ರಿಸಿ ಗೊಂದಲ ಸೃಷ್ಠಿಸಿದ್ದಾರೆ. ಈಗಾಗಲೆ ನಡೆದ ಚುನಾವಣೆ ರದ್ದು ಪಡಿಸಿ ಸಮಗ್ರ ತನಿಖೆಯನ್ನು ಕಾರ್ಯದರ್ಶಿ ಮತ್ತು ಚುನಾವಣಾಧಿಕಾರಿ(ಆರ್.ಓ) ಹೊರತು ಪಡಿಸಿ ಬೇರೆ ಅಧಿಕಾರಿಗಳನ್ನು ನೇಮಕ ಮಾಡಿ ಮರು ಮತದಾನ ನಡೆಸಬೇಕು ಎಂದು ಒತ್ತಾಯಿಸಿದರು. ಅಭ್ಯರ್ಥಿ ಪಿ.ಬಿ.ರಾಜಪ್ಪ ಮತ್ತು ಪಿ.ಎಂ.ಸೋಮಶೇಖರ್ ಮಾತನಾಡಿ, ಚುನಾವಣಾ ಪೂರ್ವದಲ್ಲಿ ಅರ್ಹ ಮತದಾರರ ಪಟ್ಟಿ ಪ್ರಕಟಿಸಲಾಗಿತ್ತು. ಸಾಲಗಾರ ಕ್ಷೇತ್ರಕ್ಕೆ 197 ಮತ್ತು ಸಾಲೇತರ ಕ್ಷೇತ್ರಕ್ಕೆ 69 ಜನ ಅರ್ಹ ಮತದಾರರಿದ್ದಾರೆಂದು ಪ್ರಕಟಿಸ ಲಾಗಿತ್ತು. ಉಳಿದ ನೂರಾರು ಜನ ಶೇರುದಾರರನ್ನು ವಿವಿಧ ಕಾರಣ ನೀಡಿ ಮತದಾನ ಮಾಡಲು ಅನರ್ಹ ಎಂದು ಘೋಷಿಸ ಲಾಗಿತ್ತು. ಅದಕ್ಕಾಗಿ ನ್ಯಾಯಾಲಯದ ಮೊರೆ ಹೋಗಿ ಅರ್ಹ 201 ಸದಸ್ಯರಿಗೆ ಮತದಾನ ಮಾಡಲು ಅವಕಾಶ ತಂದಿದ್ದೇವೆ, ಮತ್ತೊಂದು ಟೀಮ್ ನವರು 395 ಷೇರುದಾರರಿಗೆ ಮತದಾನದ ಹಕ್ಕು ತಂದು ಮತ ಚಲಾಯಿಸಿದ್ದು ಫಲಿತಾಂಶ ಇನ್ನು ಪ್ರಕಟ ವಾಗಿಲ್ಲ. ಕೂಡಲೇ ಸಂಭಂಧಿಸಿದ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ಹೊಸದಾಗಿ ಅರ್ಹ ಷೇರುದಾರರ ಪಟ್ಟಿ ತಯಾರಿಸಿ ಚುನಾವಣೆ ನಡೆಸಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.ಮುಖಂಡರಾದ ರಂಗನಾಥ್, ರವಿಕುಮಾರ್, ಮಲ್ಲಿಕಾರ್ಜುನ್, ಜಗದೀಶ್, ಪಿ.ಬಿ.ರಾಜಪ್ಪ, ವಸಂತಕುಮಾರ್ ಇದ್ದರುಚುನಾವಣಾಧಿಕಾರಿ ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿ ಅನುಪಮ ಹೇಳಿಕೆ---

ಸಹಕಾರ ಸಂಘಕ್ಕೆ ಸಾಲಗಾರ ಕ್ಷೇತ್ರದಿಂದ 197, ಸಾಲೇತರ ಕ್ಷೇತ್ರದಿಂದ 69 ಮತದಾರರನ್ನು ಗುರುತಿಸಿ ಗುರುತಿನ ಚೀಟಿ ನೀಡಲಾಗಿತ್ತು. ನ್ಯಾಯಾಲಯದ ಮೋರೆ ಹೋಗಿದ್ದ ಸುಮಾರು 489 ಜನರಿಗೆ ಮತದಾನದ ಅವಕಾಶ ದೊರೆತ ಹಿನ್ನಲೆಯಲ್ಲಿ ಅವರಿಗೆ ಬೇರೆ ಮತಪೆಟ್ಟಿಗೆಯಲ್ಲಿ ಮತ ಚೀಟಿಗಳನ್ನು ಹಾಕಿಸಿದ್ದು. ಎಲ್ಲಿಯೂ ಲೋಪವಾಗಿಲ್ಲ. ಮಂಜುನಾಥ ಎಂಬುವ ರೊಬ್ಬರು ಅಕ್ರಮ ಮತದಾನ ಮಾಡಿದ್ದು, ಅವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಈಗಾಗಲೇ ಅಭ್ಯರ್ಥಿಗಳ ಸಮ್ಮುಖದಲ್ಲಿ ಮತ ಎಣಿಕೆ ನಡೆದು ಫಲಿತಾಂಶವನ್ನು ನ್ಯಾಯಾಲಯದ ಆದೇಶ ಬರುವ ತನಕ ತಡೆ ಹಿಡಿಯಲಾಗಿದೆ ಎಲ್ಲಿಯೂ ಲೋಪವಾಗಿಲ್ಲ ಎಂದರು. ಯಾರಿಗಾದರೂ ಅನ್ಯಾಯವಾಗಿದ್ದರೆ ಎ.ಆರ್.ನ್ಯಾಯಾಲಯಕ್ಕೆ ಹೋಗಲಿ ಎಂದರು.3ಕೆಕೆಡಿಯುು1.ಕಡೂರು ತಾಲೂಕು ಪಂಚನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳೊಂದಿಗೆ ತಿಮ್ಮಾಲಾಪುರದ ದಿನೇಶ್ ಇದ್ದರು.

Share this article