ಕನ್ನಡಪ್ರಭ ವಾರ್ತೆ ಕಲಬುರಗಿ
ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಜಿಮ್ಸ್‍ಗೆ ಹೊಸದಾಗಿ ನಿರ್ದೇಶಕರ ಹುದ್ದೆಗೆ ಅರ್ಹತೆ ಇರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಬದಲು ರಾಜಕೀಯ, ಹಣ ಬಲ ಇರುವ ಅರ್ಹತೆ ಇಲ್ಲದಿರುವ ಮತ್ತು ಅಕ್ರಮ ನೇಮಕಾಯಲ್ಲಿ ಕಾನೂನು ಬಾಹಿರವಾಗಿ ಹುದ್ದೆ ಪಡೆದು ಕಲಬುರ್ಗಿ ಉಚ್ಛ ನ್ಯಾಯಾಲಯವು ಕಳೆದ 2021ರಲ್ಲಿ ಡಾ. ಉಮೇಶ್ ಎಸ್.ಆರ್ ಅವರಿಗೆ ವಜಾಗೊಳಿಸುವುದಕ್ಕೆ ಆದೇಶ ನೀಡಿದೆ ಎಂದರು.
ಆದಾಗ್ಯೂ, ಡಾ. ಉಮೇಶ್ ಅವರನ್ನು ಜಿಮ್ಸ್ ಪ್ರಿನ್ಸಿಪಾಲರನ್ನಾಗಿ ಮುಂದುವರೆಯಲು ಹಿಂದಿನ ನಿರ್ದೇಶಕಿ ಡಾ. ಕವಿತಾ ಪಾಟೀಲ್ ಅವರು ಬೆಂಬಲಿಸಿದ್ದರಿಂದ ಈಗ ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರ ಆಪ್ತ ಗೆಳೆಯ ಡಾ. ಉಮೇಶ್ ಅವರಿಗೆ ನಿರ್ದೇಶಕ ಹುದ್ದೆಗೆ ಅರ್ಹತೆ ಇಲ್ಲದಿದ್ದರೂ ಸಹ ಅಕ್ರಮವಾಗಿ ನೇಮಕಾತಿ ಮಾಡಲಾಗಿದೆ ಎಂದು ಆಕ್ರೋಶ ಹೊರಹಾಕಿದರು.ಅರ್ಹತೆ ಇರುವ ಐದು ಅಭ್ಯರ್ಥಿಗಳನ್ನು ಬಿಟ್ಟು ನಿರ್ದೇಶಕರ ಹುದ್ದೆಗೆ ಅರ್ಹತೆ ಇಲ್ಲದ ಡಾ. ಉಮೇಶ್ ಎಸ್.ಆರ್. ಅವರಿಗೆ ನೀಡಿರುವುದು ನಾಚಿಕೆಗೇಡಿತನದ್ದಾಗಿದೆ. ಯಾರಿಗೆ ರಾಜಕೀಯ, ಹಣ ಬಲ ಇರುತ್ತದೆಯೋ ಅವರು ಎಷ್ಟೇ ಭ್ರಷ್ಟಾಚಾರ ಮಾಡಿದರೂ ಸಹ ಉನ್ನತ ಹುದ್ದೆ ಪಡೆಯಬಹುದು ಎನ್ನುವುದಕ್ಕೆ ಡಾ. ಉಮೇಶ್ ಅವರ ನೇಮಕಾತಿಯೇ ಸಾಕ್ಷಿಯಾಗಿದೆ ಎಂದು ಅವರು ಕಿಡಿಕಾರಿದರು.
2015-2016ರಲ್ಲಿ ಮೂರು ಪ್ರಾಧ್ಯಾಪಕ ಹುದ್ದೆಗಳನ್ನು ಅಕ್ರಮವಾಗಿ ನೇಮಕ ಮಾಡಲಾಗಿದೆ. ಆ ಹುದ್ದೆಗಳನ್ನು ಮೂರು ತಿಂಗಳೊಳಗೆ ರದ್ದುಪಡಿಸಿ ಹೊಸ ಅಧಿಸೂಚನೆ ಹೊರಡಿಸಲು ಕಲಬುರ್ಗಿ ಉಚ್ಛ ನ್ಯಾಯಾಲಯವು ನಿರ್ದೇಶನ ನೀಡಿದೆ.
ಸಮಿತಿಯ ಅಧ್ಯಕ್ಷ ಶ್ರವಣಕುಮಾರ್ ನಾಯಕ್ ಹಾಗೂ ವೇದಿಕೆಯ ಜಿಲ್ಲಾಧ್ಯಕ್ಷ ಸಂದೀಪ್ ಪಿ. ಭರಣಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಮಿತಿ ಜಿಲ್ಲಾಧ್ಯಕ್ಷ ನಂದಕುಮಾರ್ ನಾಯಕ್, ಸಂಚಾಲಕ ರಮೇಶ್ ಮದಕರಿ ಮುಂತಾದವರು ಪಾಲ್ಗೊಂಡಿದ್ದರು.