- ಜಿಲ್ಲೆಯ 1,230 ಮತಗಟ್ಟೆಗಳ ಪೈಕಿ ಈವರೆಗೆ ಕೇವಲ 690 ಮತಗಟ್ಟೆಗೆ ಮಾತ್ರ ಪಕ್ಷದ ಏಜೆಂಟ್ ನೇಮಕ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಮತಪಟ್ಟಿಯ ತೀವ್ರ ಪರಿಷ್ಕರಣೆ (ಎಸ್ಐಆರ್) ವೇಳೆ ಪಶ್ಚಿಮ ಬಂಗಾಳದಲ್ಲಿ 90 ಲಕ್ಷಕ್ಕೂ ಹೆಚ್ಚು ಮತ ದಾರರ ಹೆಸರು ರದ್ದಾದ ಹಿನ್ನೆಲೆಯಲ್ಲಿ ರಾಷ್ಟ್ರಾದ್ಯಂತ ಕಾಂಗ್ರೆಸ್ ನಾಯಕರು ಕಟ್ಟೆಚ್ಚರ ವಹಿಸಿದ್ದರೂ, ಎಐಸಿಸಿ ಹಾಗೂ ಕೆಪಿಸಿಸಿ ಸೂಚನೆ ಹೊರತಾಗಿಯೂ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಮುಖಂಡರು ಎಸ್ಐಆರ್ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ.ಜಿಲ್ಲೆಯ 1,230 ಮತಗಟ್ಟೆಗಳ ಪೈಕಿ ಈವರೆಗೆ ಕೇವಲ 690 ಮತಗಟ್ಟೆಗೆ ಮಾತ್ರ ಪಕ್ಷದ ಏಜೆಂಟ್‌ಗಳನ್ನು (ಬಿಎಲ್‌ಎ-2) ನೇಮಿಸಿದ್ದು, ಉಳಿದ 540 ಮತಗಟ್ಟೆಗಳಿಗೆ ಈವರೆಗೂ ನೇಮಿಸುವ ಗೋಜಿಗೆ ಹೋಗಿಲ್ಲ. ಪ್ರಾಮಾಣಿಕ ಕಾರ್ಯಕರ್ತರು ಕರ್ತವ್ಯ ನಿರ್ವಹಿಸಲು ಸಿದ್ಧರಿದ್ದರೂ ಅವರನ್ನು ಬಳಕೆ ಮಾಡಿಕೊಳ್ಳಲು ನಾಯಕರು ಆಸಕ್ತಿ ತೋರುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಜಿಲ್ಲೆಯಲ್ಲಿ ಇನ್ನೂ ಶೇ.90 ರಷ್ಟು ಮ್ಯಾಪಿಂಗ್ ಆಗಿಲ್ಲ. ಇನ್ನೂ 1.03 ಲಕ್ಷಕ್ಕೂ ಹೆಚ್ಚು ಮತದಾರರು ಪತ್ತೆ ಆಗಿಲ್ಲ. ಜಿಲ್ಲೆಯಲ್ಲಿ ಎಸ್‌ಐಆರ್ ಮ್ಯಾಪಿಂಗ್ ನಲ್ಲಿ ಹಿನ್ನೆಡೆಗೆ ಇದೂ ಸಹ ಪ್ರಮುಖ ಕಾರಣ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.
ರಾಷ್ಟ್ರೀಯ ಪಕ್ಷಗಳಿಗೆ ಏಜೆಂಟ್ ನೇಮಕಕ್ಕೆ ಅವಕಾಶ
ಹಿರಿಯ ನಾಯಕರ ಸೂಚನೆ ನಿರ್ಲಕ್ಷ್ಯ
ಕಳೆದ ಮೇ ನಲ್ಲಿ ಚಿಕ್ಕಮಗಳೂರಿಗೆ ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಆಗಮಿಸಿದ ವೇಳೆ ಎಸ್‌ಐಆರ್ ಕುರಿತು ನಡೆಸಿದ ಸಭೆ ಸೇರಿದಂತೆ ಈವರೆಗೆ 2 ರಿಂದ 3 ಸಭೆಗೆ ಮಾತ್ರ ಜಿಲ್ಲಾ ಕಾಂಗ್ರೆಸ್ ಸೀಮಿತವಾಗಿದೆ.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ಏಜೆಂಟ್ ನೇಮಿಸಿಲ್ಲ
---ಬಾಕ್ಸ್---
ಜೆಡಿಎಸ್ ನಿಂದ ಒಂದು ಕ್ಷೇತ್ರಕ್ಕೆ ಮಾತ್ರ ನೇಮಕಜಿಲ್ಲೆಯ ಜೆಡಿಎಸ್‌ನಿಂದ ಶೃಂಗೇರಿ ವಿಧಾನಸಭಾ ಕ್ಷೇತ್ರದ 256 ಮತಗಟ್ಟೆಗಳ ಪೈಕಿ 172 ಮತಗಟ್ಟೆಗೆ ಮಾತ್ರ ಜೆಡಿಎಸ್‌ನಿಂದ ಬಿಎಲ್‌ಎ-2ಗಳನ್ನು ನೇಮಕ ಮಾಡಲಾಗಿದೆ. ಉಳಿದಂತೆ ಯಾವುದೇ ವಿಧಾನ ಸಭಾ ಕ್ಷೇತ್ರಕ್ಕೆ ತನ್ನ ಏಜೆಂಟ್‌ಗಳನ್ನು ನೇಮಿಸಿಲ್ಲ.
---ಬಾಕ್ಸ್---ಬಿಎಲ್‌ಎ-2 ಕಾರ್ಯ ಏನು?
ಚುನಾವಣಾ ಆಯೋಗ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಎಲ್ಲಾ ರಾಷ್ಟ್ರೀಯ ಪಕ್ಷದಿಂದ ತಲಾ ಒಬ್ಬ ಬಿಎಲ್‌ಎ-1 ನೇಮಕಕ್ಕೆ ಅವಕಾಶ ನೀಡಿದೆ. ಅದೇ ರೀತಿ ಪ್ರತಿ ಮತಗಟ್ಟೆಗೆ ಬಿಎಲ್‌ಎ-2 ನೇಮಕಕ್ಕೆ ಅವಕಾಶ ನೀಡಿದೆ.ಬಿಎಲ್‌ಎ-1 ತರಬೇತಿ ಕಾರ್ಯದಲ್ಲಿ ಭಾಗವಹಿಸುವುದು, ಆ ವಿಚಾರಗಳನ್ನು ಪಕ್ಷದ ಮುಖಂಡರಿಗೆ, ಕಾರ್ಯ ಕರ್ತರಿಗೆ ತಿಳಿಸುವುದಾಗಿದೆ. ಆದರೆ, ಬೂತ್‌ಮಟ್ಟದಲ್ಲಿ ಬಿಎಲ್‌ಎ-2 ಪಾತ್ರ ಹೆಚ್ಚಾಗಿದೆ.
ಬಿಎಲ್‌ಎ-2 ಬೂತ್‌ಮಟ್ಟ ಅಧಿಕಾರಿಗಳೊಂದಿಗೆ (ಬಿಎಲ್‌ಒ) ಸಮನ್ವಯ ಸಾಧಿಸುವುದು. ಮ್ಯಾಪಿಂಗ್ ಆಗದಿರುವ ಮತದಾರರ ಮ್ಯಾಪಿಂಗ್ ಕಾರ್ಯಕ್ಕೆ ಸಹಾಯ ಮಾಡುವುದು. ತಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿ ಅರ್ಹ ಮತದಾರರು ಮ್ಯಾಪಿಂಗ್‌ನಿಂದ ಹೊರಗೆ ಉಳಿಯದಂತೆ ನಿಗಾ ವಹಿಸುವುದಾಗಿದೆ.---ಬಾಕ್ಸ್----ಬೂತ್ ಮಟ್ಟದ ಏಜೆಂಟ್-2 ನೇಮಕದ ವಿವರವಿಧಾನಸಭಾ ಕ್ಷೇತ್ರಮತಗಟ್ಟೆ ಸಂಖ್ಯೆಬಿಜೆಪಿಕಾಂಗ್ರೆಸ್‌ಜೆಡಿಎಸ್
ಶೃಂಗೇರಿ256234223172ಮೂಡಿಗೆರೆ23123100
ಚಿಕ್ಕಮಗಳೂರು26126100ತರೀಕೆರೆ2292292140
ಕಡೂರು2532532530ಒಟ್ಟು12301208690172
(ಕಾಂಗ್ರೆಸ್ ಲೋಗೋ ಬಳಸಿ ಜತೆಗೆ ಸೂಕ್ತ ಫೋಟೋ ಬಳಸಿ)