ಕ್ಯಾಮೆರಾದಲ್ಲಿ ಹುಲಿ ಉರುಳಿಗೆ ಸಿಕ್ಕಿದೆ ಎನ್ನುವ ಫೋಟೋಗಳು ಎಲ್ಲೆಡೆ ಹರಿದಾಡುತ್ತಿವೆ
ಭದ್ರಾ ಅಭಯಾರಣ್ಯಕ್ಕೆ ಹೊಂದಿಕೊಂಡಂತಿರುವ ಪಂಡರವಳ್ಳಿ ಭಾಗ ಹುಲಿಗಳ ಆವಾಸಸ್ಥಾನದಲ್ಲಿ ಉರುಳು ಸುತ್ತಿಕೊಂಡು ಹುಲಿಯೊಂದು ಓಡಾಡುತ್ತಿರುವ ಅನುಮಾನ ಮೂಡಿದೆ.
ಮುತ್ತೋಡಿ ವನ್ಯಜೀವಿ ವಿಭಾಗ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಹುಲಿಗಳ ಸಂಚಾರ ಸರ್ವೇ ಸಾಮಾನ್ಯ. ಹೀಗಿರುವಾಗ ಇದೇ ಪ್ರದೇಶದಲ್ಲಿ ಹುಲಿಗೆ ಉರುಳು ಹಾಕಿದ್ದರೆ ಅದು ಅಕ್ಷಮ್ಯ ಅಪರಾಧವಾಗಿದೆ. ಮಾಹಿತಿ ಪ್ರಕಾರ ಹುಲಿಯೊಂದು ಉರುಳಿಗೆ ಸಿಲುಕಿ ತಪ್ಪಿಸಿಕೊಂಡಿದ್ದರೂ ಆ ಉರುಳು ಹುಲಿಗೆ ಸಿಕ್ಕಿಕೊಂಡಿದೆ. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಅರಣ್ಯ ಇಲಾಖೆ ಹುಲಿ ಕಾಣಿಸಿಕೊಂಡ ಪ್ರದೇಶದಲ್ಲಿ ಕ್ಯಾಮರಾ ಅಳವಡಿಸಿದೆ. ಆದರೆ, ಅರಣ್ಯ ಇಲಾಖೆ ಕ್ಯಾಮೆರಾದಲ್ಲಿ ಈವರೆಗೆ ಹುಲಿಕಾಣಿಸಿಕೊಂಡಿಲ್ಲ.ಇದರ ಹೊರತಾಗಿ ಅದೇ ಭಾಗದಲ್ಲಿ ಹುಲಿ, ಕಡವೆ ಒಂದನ್ನು ಬೇಟೆಯಾಡಿ ತಿಂದಿರುವ ಕಳೇಬರ ಸಿಕ್ಕಿದೆ. ಹೀಗಿರುವಾಗ ಉರುಳು ಸುತ್ತಿಕೊಂಡಿರುವ ಹುಲಿ, ಬೇಟೆಯಾಡಿದೆಯೇ ಎಂಬ ಅನುಮಾನವೂ ಇದೆ. ಸ್ಥಳೀಯ ಮೂಲಗಳ ಪ್ರಕಾರ ಗಂಡು ಮತ್ತು ಹೆಣ್ಣು ಹುಲಿ ಒಟ್ಟಿಗೆ ಸಂಚಾರ ನಡೆಸುತ್ತಿವೆ. ಈ ಮಧ್ಯೆ ಗಂಡು ಹುಲಿ ಉರುಳಿಗೆ ಸಿಲುಕಿರಬಹುದು. ಉರುಳಿನಿಂದ ಹೊರಬಂದರೂ ಉರುಳಿನ ತಂತಿಗಳು ಹುಲಿ ದೇಹದೊಳಗೆ ಹಾಗೇ ಇರಬಹುದು. ಹೀಗಾಗಿಯೇ ಪಂಡರವಳ್ಳಿ ಭಾಗದಲ್ಲಿ ಹುಲಿ ಘರ್ಜನೆ ಹೆಚ್ಚಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಈ ರೀತಿ ಫೋಟೋಗಳು ವೈರಲ್ ಆದ ಬೆನ್ನಲ್ಲೇ ಅರಣ್ಯ ಇಲಾಖೆ ಸಿಬ್ಬಂದಿ ಜಾಗೃತರಾಗಿದ್ದಾರೆ. ನಿರಂತರ ವಾಗಿ ಗಸ್ತು ಮಾಡುವುದು ಮಾತ್ರವಲ್ಲದೆ, ಜನರಲ್ಲಿಯೂ ಹುಲಿ ಬಗ್ಗೆ ಎಚ್ಚರಿಕೆ ನೀಡಲಾರಂಭಿಸಿದ್ದಾರೆ.
ಪಂಡರವಳ್ಳಿ ಭಾಗದಲ್ಲಿ ಹುಲಿ ಉರುಳಿಗೆ ಸಿಕ್ಕಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ಕನಿಷ್ಠ 20 ಕಡೆ ಕ್ಯಾಮೆರಾ ಅಳವಡಿಸಲಾಗಿದೆ. ಆದರೆ ಇದುವರೆಗೆ ಯಾವುದೇ ಹುಲಿ ಕಾಣಿಸಿಲ್ಲ. ಇನ್ನೊಂದು ವಿಶೇಷವೆಂದರೆ ಅರಣ್ಯ ಇಲಾಖೆ ಅಳವಡಿಸಿದ ಕ್ಯಾಮೆರಾ ಇರುವ ಭಾಗದಲ್ಲಿಯೇ ಹುಲಿ ಕಡವೆಯೊಂದನ್ನು ಬೇಟೆಯಾಡಿ ತಿಂದಿರುವ ಕುರುಹುಗಳು ಲಭ್ಯವಾಗಿವೆ. ಹೀಗಿರುವಾಗ ಹುಲಿ ಉರುಳಿಗೆ ಸಿಲುಕಿದೆಯೋ ಅಥವಾ ಇದೆಲ್ಲ ವದಂತಿಯೇ ಎಂಬ ಗೊಂದಲ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಉಂಟಾಗಿದೆ.
ಅಸ್ಸಾಂ, ಪಶ್ಚಿಮ ಬಂಗಾಳ ಕಾರ್ಮಿಕರಿಂದ ಹುಲಿಗಳಿಗೆ ಉರುಳು?
ಆಗ ಆ ಹುಲಿಯನ್ನು ಬೆಳಗಾವಿಗೆ ಕೊಂಡೊಯ್ದು ಬಿಡಲಾಗಿತ್ತು. ಅಂದು ಆ ಹುಲಿ ಮನುಷ್ಯರ ಮೇಲೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಕೊಲ್ಲಲಾಗಿತ್ತು. ಇದೆಲ್ಲವೂ ಹತ್ತು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹುಲಿಗಳನ್ನು ಅವುಗಳ ಆವಾಸಸ್ಥಾನದಲ್ಲಿಯೇ ಬಿಟ್ಟು ಅವುಗಳನ್ನು ಸಂರಕ್ಷಿಸುವ ಹೊರತಾಗಿ ಮಲೆನಾಡಿ ನಲ್ಲಿಯೇ ಹುಲಿಗಳನ್ನು ಕೊಲ್ಲುವ ಸಂಚು ನಡೆದಿದೆಯೇ ಎಂಬ ಅನುಮಾನವೂ ಮೂಡಿದೆ.
ಪ್ರಕರಣ ದಾಖಲಿಸದ ಅಧಿಕಾರಿಗಳು
ಉರುಳು ಸುತ್ತಿಕೊಂಡು ಹುಲಿ ಓಡಾಡುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಆ ಭಾಗದಲ್ಲಿ 20ಕ್ಕೂ ಹೆಚ್ಚು ಕ್ಯಾಮರಾ ಅಳವಡಿಸಿದ್ದೇವೆ. ಇದುವರೆಗೆ ಹುಲಿ ಪತ್ತೆಯಾಗಿಲ್ಲ. ಹುಲಿ ಉರುಳು ಸುತ್ತಿಕೊಂಡು ಓಡಾಡುತ್ತಿದ್ದರೆ ಸೆರೆಹಿಡಿದು ರಕ್ಷಿಸುವ ಕಾರ್ಯ ಮಾಡಲಾಗುವುದು.
- ಕೆ.ಟಿ.ಬೋರಯ್ಯ, ಡಿಎಫ್ಓ ಚಿಕ್ಕಮಗಳೂರು