ಅದ್ಧೂರಿ ಮದುವೆಗಳಿಂದ ದೂರ ಇರಲು ಇಸ್ಲಾಂ ಮಾರ್ಗದರ್ಶನ

KannadaprabhaNewsNetwork |  
Published : Apr 20, 2026, 02:00 AM IST
ಇಸ್ಲಾಂ ಮದುವೆಯನ್ನು ಸರಳಗೊಳಿಸಿದೆ | Kannada Prabha

ಸಾರಾಂಶ

ತರೀಕೆರೆಮದುವೆಗಳನ್ನು ಇಸ್ಲಾಂ ಸರಳೀಕರಣ ಗೊಳಿಸಿರುವುದರಿಂದಾಗಿ ಹೆಣ್ಣು ಮಕ್ಕಳು ಉತ್ತಮವಾದ ದಾಂಪತ್ಯ ಜೀವನ ನಡೆಸಬಹುದಾಗಿದೆ ಎಂದು ಉತ್ತರ ಪ್ರದೇಶ ರಾಜ್ಯದ ಕಚೋಚ ಷರೀಫ್ ಆಧ್ಯಾತ್ಮ ಕೇಂದ್ರದ ಹಜ್ರತ್ ಖಾಸಿಂ ಅಶ್ರಫ್ ಹೇಳಿದರು.

ಎಚ್. ಎಸ್. ಎಸ್. ಶೇಕುಲ್ ಇಸ್ಲಾಂ ಟ್ರಸ್ಟ್ ನಿಂದ ನಡೆದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಮದುವೆಗಳನ್ನು ಇಸ್ಲಾಂ ಸರಳೀಕರಣ ಗೊಳಿಸಿರುವುದರಿಂದಾಗಿ ಹೆಣ್ಣು ಮಕ್ಕಳು ಉತ್ತಮವಾದ ದಾಂಪತ್ಯ ಜೀವನ ನಡೆಸಬಹುದಾಗಿದೆ ಎಂದು ಉತ್ತರ ಪ್ರದೇಶ ರಾಜ್ಯದ ಕಚೋಚ ಷರೀಫ್ ಆಧ್ಯಾತ್ಮ ಕೇಂದ್ರದ ಹಜ್ರತ್ ಖಾಸಿಂ ಅಶ್ರಫ್ ಹೇಳಿದರು.

ಪಟ್ಟಣದಲ್ಲಿ ಎಚ್. ಎಸ್. ಎಸ್. ಶೇಕುಲ್ ಇಸ್ಲಾಂ ಟ್ರಸ್ಟ್ ನಿಂದ ನಡೆದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದ ಅವರು ಮಾತನಾಡಿ ಅದ್ಧೂರಿ ಮದುವೆಗಳಿಂದ ದೂರ ಇರುವಂತೆ ಇಸ್ಲಾಂ ಮಾರ್ಗದರ್ಶನ ಮಾಡಿದ್ದು . ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜೀವನ ಮತ್ತು ಆದರ್ಶಗಳನ್ನು ನಾವೆಲ್ಲ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಪತಿ ಹಾಗೂ ಪತ್ನಿ ಪರಸ್ಪರ ಧರಿಸುವ ಬಟ್ಟೆಯಾಗಿದ್ದಾರೆ. ಬಟ್ಟೆ ಧರಿಸುವುದರಿಂದ ಮನುಷ್ಯನ ಸೌಂದರ್ಯ ಹೆಚ್ಚುತ್ತದೆ. ಬಟ್ಟೆ ಕೊಳೆಯಾದರೆ ಶುಭ್ರವಾಗಿ ತೊಳೆಯುವಂತೆ ಪರಸ್ಪರ ಕ್ಷಮೆ ಹಾಗೂ ಪ್ರೀತಿಯಿಂದ ದಾಂಪತ್ಯ ಕಲಹವನ್ನು ಸರಿ ಪಡಿಸಿಕೊಳ್ಳಬೇಕು. ಅಲ್ಲಾಹನು ನೂತನ ವಧುವರರಿಗೆ ಸಮೃದ್ಧಿ ಕರುಣಿಸಲಿ ಎಂದು ಪ್ರಾರ್ಥಿಸಿದರು.ಹುಬ್ಬಳ್ಳಿಯ ಮದನಿ ಮಿಯಾ ಅರೇಬಿಕ್ ಕಾಲೇಜಿನ ಹಜ್ರತ್ ನಿಸಾರ್ ಅಹಮದ್ ಮಿಸ್ಬಾಯಿ ಮಾತನಾಡಿ ಸಾಮೂಹಿಕ ವಿವಾಹಗಳು ಇಸ್ಲಾಂನ ಆದರ್ಶಗಳಾಗಿದ್ದು, ಇಂತಹ ಕಾರ್ಯಕ್ರಮಗಳು ದೇವರಲ್ಲಿ ಪ್ರೀತಿ ತರುತ್ತದೆ ಎಂದು ಹೇಳಿದರು. ನೂತನ ವಧುವರರಿಗೆ ಅಗತ್ಯ ವಸ್ತುಗಳು ಸೇರಿದಂತೆ 5 ಗ್ರಾಂ ಚಿನ್ನದ ಉಡುಗೊರೆ ನೀಡಲಾಯಿತು. ಪಟ್ಟಣದ ಮಸೀದಿಗಳ ಮೌಲಾನ ಜಬೀಉಲ್ಲಾ ಖಾನ್ ನಿಜಾಮಿ. ಅಖಿಲ್ ರಜಾ, ಸಕ್ಲೇನ್, ಅಹಮದ್, ಅಹ್ಮದ್ ಅಲಿ, ಶೇಕುಲ್ ಇಸ್ಲಾಂ ಟ್ರಸ್ಟ್ .ನ ಅಧ್ಯಕ್ಷರು ಮೊಹಮ್ಮದ್ ಜಾಫರ್ ಸಾದೀಕ್, ಅಹಮದ್ ಜಾನ್, ಎಜಾಜ್ ಪಾಶ, ಮುತಾಹಿರ್, ಷಹಬುದ್ದೀನ್. ನೌಷಾದ್, ಇಸ್ಮಾಯಿಲ್ ಹಾಗು ಇತರೇ ಪದಾಧಿಕಾರಿಗಳು ಭಾಗವಹಿಸಿದ್ದರು.

ವಾಣಿ ಶ್ರೀನಿವಾಸ್, ಪುರಸಭೆ ಮಾಜಿ ಅಧ್ಯಕ್ಷ ಟಿ. ಜೆ. ಗೋಪಿ ಕುಮಾರ್. ಎಂ. ನರೇಂದ್ರ, ಉಮ್ಮರ್ ಫಾರೂಕ್, ಪ್ರಕಾಶ್ ವಮಾ೯, ಸದಸ್ಯರಾದ ಟಿ. ದಾದಾಪೀರ್, ಶಮೀಂ ಭಾನು, ಅಬ್ಬಾಸ್ , ಡಾ.ಎಸ್.ಗಿರೀಶ್, ಡಾ.ಮಂಜೇಶ್, ಡಾ.ಅಗ್ನಿ , ಮಾಜಿ ಪುರಸಭಾ ಸದಸ್ಯ ಕೃಷ್ಣಮೂರ್ತಿ ಶುಭ ಕೋರಿದರು.

-

17ಕೆಟಿಆರ್.ಕೆ.4ಃ ತರೀಕೆರೆಯಲ್ಲಿ ಎಚ್. ಎಸ್. ಎಸ್. ಶೇಕುಲ್ ಇಸ್ಲಾಂ ಟ್ರಸ್ಟ್ ನಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳಾ ಮೀಸಲಾತಿಗೆ ಕಾಂಗ್ರೆಸ್‌ ವಿರೋಧ: ಜೆಡಿಎಸ್‌ ಪ್ರತಿಭಟನೆ
ವಿಶ್ವಕರ್ಮ ಸಮಾಜ ಸಂಘಟಿತರಾಗಲಿ: ಕೆ.ಪಿ. ನಂಜುಂಡಿ