ದೊಡ್ಡಬಳ್ಳಾಪುರ: ಪೂರ್ವಿಕರ ಕಾಲದಿಂದಲೂ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದು, ಅಕ್ರಮ- ಸಕ್ರಮಕ್ಕಾಗಿ ನಮೂನೆ 53 ಮತ್ತು 57ರಲ್ಲಿ ಅರ್ಜಿ ಸಲ್ಲಿಸಿದ್ದೇವೆ. ಆದರೆ ಸಾಗುವಳಿ ಚೀಟಿ ವಿತರಣೆಗೆ ಶಾಸಕರು, ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಜಿಲ್ಲಾ ಸಂಚಾಲಕಿ ನಾಗರತ್ನ ಆರೋಪಿಸಿದರು.
ಕರ್ನಾಟಕ ಭೂ ಹಕ್ಕುದಾರಿಕೆಯ ವೇದಿಕೆಯ ರಾಜ್ಯಾಧ್ಯಕ್ಷ ಎಸ್.ವಿ ನರಸಪ್ಪ, ಜಿಲ್ಲಾ ಸಂಚಾಲಕಿ ವಿ.ನಾಗರತ್ನ, ಬಗರ್‌ಹುಕುಂ ಸಾಗುವಳಿಯ ತಾಲೂಕು ಸಂಚಾಲಕ ನಾರಾಯಣಸ್ವಾಮಿ, ನಾಗಾನಾಯಕ್, ಪಿಳ್ಳಪ್ಪ, ನರಸಿಂಹಯ್ಯ, ಹುಚ್ಚಹನುಮಯ್ಯ, ಹನುಮಂತರಾಯಪ್ಪ ಉಪಸ್ಥಿತರಿದ್ದರು.
ಬಾಕ್ಸ್.................ಹೋರಾಟದ ಬೇಡಿಕೆಗಳೇನು?
1.ಬಗರ್ ಹುಕುಂ ಸಮಿತಿಯ ಸಭೆ ಮಾಡಿ ಬಾಕಿ ಇರುವ ಸಾಗುವಳಿ ಚೀಟಿಯನ್ನು ವಿತರಣೆ ಮಾಡುವುದು.2.ಕಂದಾಯ ಮತ್ತು ಅರಣ್ಯ ಇಲಾಖೆ ಭೂಮಿಯನ್ನು ಜಂಟಿ ಸರ್ವೆ ಮಾಡುವುದು.
3.ಪಹಣಿಯಲ್ಲಿ ಪಿ. ಮತ್ತು ಸರ್ಕಾರಿ ಗೋಮಾಳ ಎಂಬ ಹೆಸರನ್ನು ತೆಗೆಯುವುದು.4.ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವವನನ್ನು ಒಕ್ಕಲೆಬ್ಬಿಸದೇ ಸಾಗುವಳಿ ಚೀಟಿ ನೀಡುವುದು.
6.ಸಾಗುವಳಿ ಸಭೆಯಲ್ಲಿ ನಡೆದ ಮಾಹಿತಿಯನ್ನು ನೋಟಿಸ್ ಬೋರ್ಡಿಗೆ ಹಾಕುವುದು.7. ಸಾಗುವಳಿ ಸಮಿತಿ ದಿನಾಂಕವನ್ನು ನೋಟಿಸ್ ಬೋರ್ಡಿಗೆ ಹಾಕುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗಿದೆ,
ಫೋಟೋ-18ಕೆಡಿಬಿಪಿ2-ದೊಡ್ಡಬಳ್ಳಾಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಬಗರ್‌ಹುಕುಂ ಸಾಗುವಳಿ ಚೀಟಿಗಾಗಿ ಹಕ್ಕೊತ್ತಾಯ ಮಂಡಿಸಲಾಯಿತು.