ಇ-ಶ್ರಮ್ ನೋಂದಾಯಿತ ಕಾರ್ಮಿಕರಿಗೆ ಪಡಿತರ ಚೀಟಿ ನೀಡಿ

KannadaprabhaNewsNetwork | Updated : Nov 10 2024, 01:33 AM IST

ಸಾರಾಂಶ

ಹಿರಿಯೂರು: ಸುಪ್ರೀಂ ಕೋರ್ಟ್ ಆದೇಶದಂತೆ ಇ ಶ್ರಮ್ ನೋಂದಾಯಿತ ಕಾರ್ಮಿಕರಿಗೆ ಆದ್ಯತಾ ಪಡಿತರ ಚೀಟಿ ನೀಡಬೇಕು ಎಂದು ಒತ್ತಾಯಿಸಿ ಸಿರಿ ಗನ್ನಡನಾಡು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದರು.

ಹಿರಿಯೂರು: ಸುಪ್ರೀಂ ಕೋರ್ಟ್ ಆದೇಶದಂತೆ ಇ ಶ್ರಮ್ ನೋಂದಾಯಿತ ಕಾರ್ಮಿಕರಿಗೆ ಆದ್ಯತಾ ಪಡಿತರ ಚೀಟಿ ನೀಡಬೇಕು ಎಂದು ಒತ್ತಾಯಿಸಿ ಸಿರಿ ಗನ್ನಡನಾಡು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದರು.

ಸುಪ್ರೀಂ ಕೋರ್ಟ್ ಇ ಶ್ರಮ್ ನೋಂದಾಯಿತ ಕಾರ್ಮಿಕರಿಗೆ ಆದ್ಯತಾ ಪಡಿತರ ಚೀಟಿ ನೀಡಲು ಆದೇಶಿಸಿದ್ದು ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಬಿಪಿಎಲ್ ಕಾರ್ಡ್‌ ಇಲ್ಲದ ಕಾರ್ಮಿಕರು ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ. ಆದರೆ ತಾಲೂಕಲ್ಲಿ ಬಿಪಿಎಲ್ ಕಾರ್ಡ್‌ ಇಲ್ಲದ ಕಾರ್ಮಿಕರು ಅರ್ಜಿ ಸಲ್ಲಿಸಲು ಹೋದರೆ ಇ ಶ್ರಮ್ ಕಾರ್ಡಿನಲ್ಲಿರುವ ಯುಎಎನ್ ನಂಬರ್ ತೆಗೆದುಕೊಳ್ಳುತ್ತಿಲ್ಲ. ಕಾರಣ ಕೇಳಿದರೆ ಸಂಬಂಧಪಟ್ಟ ಆಹಾರ ಇಲಾಖೆಯಲ್ಲಿ ವಿಚಾರಿಸಿ ಎಂದು ಆನ್‌ಲೈನ್ ಸೆಂಟರ್ ನವರು ಹೇಳುತ್ತಾರೆ.

ಆಹಾರ ಇಲಾಖೆಯಲ್ಲಿ ಬಿಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಇ ಶ್ರಮ್ ಕಾರ್ಡಿನ ಯುಎಎನ್ ನಂಬರ್ ಸೇರಿಸಿ ಬನ್ನಿ ಆನಂತರ ಅರ್ಜಿ ಹಾಕಿ ಎನ್ನುತ್ತಿದ್ದಾರೆ. ಸಂಬಂಧಪಟ್ಟ ಹೆಲ್ಪ್ ಲೈನಿಗೆ ಕರೆ ಮಾಡಿದರೂ ಆಹಾರ ಇಲಾಖೆಗೆ ಭೇಟಿ ನೀಡಿ ಎನ್ನುತ್ತಿದ್ದಾರೆ. ಸಮಸ್ಯೆ ಹೊತ್ತು ಬಂದ ಕಾರ್ಮಿಕರಿಗೆ ಆಹಾರ ಇಲಾಖೆ ಸಿಬ್ಬಂದಿ ಸರಿಯಾಗಿ ಮಾಹಿತಿ ನೀಡದೇ ಕಾರ್ಮಿಕರನ್ನು ಅಲೆಸುತ್ತಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ.

ಇಲಾಖೆ ಸಿಬ್ಬಂದಿ ನ್ಯಾಯಾಲಯದ ಆದೇಶವನ್ನು ಪಾಲಿಸದೇ ಬಡ ಕಾರ್ಮಿಕರಿಗೆ ಸರಿಯಾದ ಮಾಹಿತಿ ನೀಡದೇ ಉಡಾಫೆ ಉತ್ತರ ಕೊಟ್ಟು ಕಳಿಸಲಾಗುತ್ತಿದ್ದು, ಇನ್ನಾದರೂ ಅರ್ಹ ಕಾರ್ಮಿಕರಿಗೆ ಇ ಶ್ರಮ್ ನೋಂದಾಯಿತ ಬಿಪಿಎಲ್ ಕಾರ್ಡ ನ್ನು ನೀಡಬೇಕು ಎಂದು ಒತ್ತಾಯಿಸಿಲಾಗಿದೆ.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸೈಯದ್ ಜಬ್ಬಾರ್, ಪ್ರಧಾನ ಕಾರ್ಯದರ್ಶಿ ಮುಕುಂದ, ಕಾರ್ಯಕಾರಿಣಿ ಸದಸ್ಯರಾದ ಮೊಹಮ್ಮದ್ ಖಾಸಿಂ, ಪ್ರಸನ್ನ, ಗಿರೀಶ್ ಬಾಬು, ಹಬೀಬ್ ಮುಂತಾದವರು ಹಾಜರಿದ್ದರು.

Share this article