ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ: ಶಾಸಕ ಎಆರ್‌ಕೆ

KannadaprabhaNewsNetwork | Published : Feb 11, 2024 1:46 AM

ಸಾರಾಂಶ

ತಿಮ್ಮರಾಜಿಪುರ ಗ್ರಾಮದಲ್ಲಿ ಮಾಜಿ ಶಾಸಕ ಅನೇಕ ಯೋಜನೆಗಳನ್ನು ಜಾರಿ ಮಾಡಹುದಿತ್ತು, ಆದರೆ ಮಾಡಲಿಲ್ಲ, ಮಾಜಿ ಶಾಸಕ ಜಯಣ್ಣ ಮತ್ತು ಮುಖ್ಯಮಂತ್ರಿ ಪರಿಶ್ರಮದಿಂದಾಗಿ ಗ್ರಾಮದಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳು ಕಾರ್ಯಗತಗೊಂಡಿದ್ದು ಇಂದು ಪುನರಾವರ್ತನೆಯಾಗುತ್ತಿದೆ ಎಂದು ಶಾಸಕ ಎ ಆರ್ ಕೃಷ್ಣಮೂರ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ತಿಮ್ಮರಾಜಿಪುರ ಗ್ರಾಮದಲ್ಲಿ ಮಾಜಿ ಶಾಸಕ ಅನೇಕ ಯೋಜನೆಗಳನ್ನು ಜಾರಿ ಮಾಡಹುದಿತ್ತು, ಆದರೆ ಮಾಡಲಿಲ್ಲ, ಮಾಜಿ ಶಾಸಕ ಜಯಣ್ಣ ಮತ್ತು ಮುಖ್ಯಮಂತ್ರಿ ಪರಿಶ್ರಮದಿಂದಾಗಿ ಗ್ರಾಮದಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳು ಕಾರ್ಯಗತಗೊಂಡಿದ್ದು ಇಂದು ಪುನರಾವರ್ತನೆಯಾಗುತ್ತಿದೆ ಎಂದು ಶಾಸಕ ಎ ಆರ್ ಕೃಷ್ಣಮೂರ್ತಿ ಹೇಳಿದರು.

ತಿಮ್ಮರಾಜಿಪುರ ಗ್ರಾಮದಲ್ಲಿ ಕನಕ ಭವನ, ಕೂಸಿನ ಮನೆ, ಡಿಜಿಟಲ್ ಗ್ರಂಥಾಲಯ, ಗರಡಿ ಮನೆ ಇನ್ನಿತರ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿ, ಕೂಲಿ ಕಾರ್ಮಿಕರು ತಮ್ಮ ಮಕ್ಕಳನ್ನು ಕೂಸಿನ ಮನೆಯಲ್ಲಿ ಬಿಟ್ಟು ಹೋದರೆ ಅಲ್ಲಿನ ಪಾಲಕರು ಕಾರ್ಮಿಕರ ಮಕ್ಕಳ ಯೋಗ ಕ್ಷೇಮ ನೋಡಿಕೊಳ್ಳಲಿದ್ದಾರೆ, ಹಾಗಾಗಿ ಕೂಸಿನ ಮನೆ ಯೋಜನೆ ಗ್ರಾಮೀಣ ಭಾಗದ ಮಹಿಳೆಯರಿಗೆ ವರದಾಯಕವಾಗಿದೆ. ಸಿಎಂ ಸಿದ್ದರಾಮಯ್ಯ ಗ್ರಾಮೀಣ ಭಾಗದ ಜನರ ಸಂಕಷ್ಟ ಮನಗಂಡಿದ್ದಾರೆ. ಹಾಗಾಗಿ ಗ್ರಾಮೀಣ ಜನರ ಬದುಕು ಹಸನಾಗಿಲು ಅನೇಕ ಯೋಜನೆ ಜಾರಿಗೊಳಿಸಿದ್ದಾರೆ ಎಂದರು. ತಿಮ್ಮರಾಜೀಪುರ ಗ್ರಾಮದಲ್ಲಿ ನರೇಗಾ ಕಾಮಗಾರಿಗೆ ತೆರಳುವರ ಮಕ್ಕಳ ಅನುಕೂಲಕ್ಕಾಗಿ ಕೂಸಿನ ಮನೆ ನಿರ್ಮಿಸಲಾಗಿದೆ. ಸಿದ್ದರಾಮಯ್ಯ ನುಡಿದಂತೆ ನಡೆದ ಮುಖ್ಯಮಂತ್ರಿ. ಕಾಂಗ್ರೆಸ್ ಸರ್ಕಾರ ಜನಪರ ಕೆಲಸ ಮಾಡುತ್ತಿದೆ ಎಂದರು. ಸರ್ಕಾರ ನುಡಿದಂತೆ ನಡೆದಿದ್ದು ಅನೇಕ ಯೋಜನೆಗಳನ್ನು ಬಡವರ ಅನುಕೂಲಕ್ಕಾಗಿ ಜಾರಿ ಮಾಡಿದೆ, ಎಲ್ಲಾ ಸವಲತ್ತುಗಳನ್ನು ಗ್ರಾಮೀಣ ಭಾಗದ ಜನತೆ ಸದ್ಬಳಕೆ ಮಾಡಿಕೊಳ್ಳಬೇಕು. ಸರ್ಕಾರದ ಮಹಾತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯಲ್ಲಿ ನಮ್ಮ ಕ್ಷೇತ್ರದ ನೂರಾರು ಮಹಿಳೆಯರಿಗೆ ತಲುಪಿರಲಿಲ್ಲ, ಜನಸಂಪರ್ಕ ಸಭೆಯಲ್ಲೂ ಈ ಬಗ್ಗೆ ಅನೇಕ ದೂರುಗಳಿತ್ತು, ಇದನ್ನ ಬಗೆಹರಿಸುವಂತೆ ಸಿಡಿಪಿಓ ನಂಜಮ್ಮಣಿ ಅವರಿಗೆ ಸೂಚಿಸಿದ್ದೆ, ಈನಿಟ್ಟಿನಲ್ಲಿ ಸಿಡಿಪಿಓ ಸಮರ್ಪಕ ರೀತಿ ಈ ಯೋಜನೆ ಜಾರಿಗೆ ಸ್ಪಂದಿಸಿದ್ದಾರೆ ಎಂದು ಪ್ರಶಂಸಿಸಿದರು .ಈ ಸಂದರ್ಭದಲ್ಲಿ ತಾಪಂ ಇಒ ಶ್ರೀನಿವಾಸ್, ಕೆಆರ್‌ಡಿಐಎಲ್ ಎಇಇ ಚಿಕ್ಕಲಿಂಗಯ್ಯ, ಸಿಡಿಪಿಒ ನಂಜಮಣ್ಣಿ,ತಿಮ್ಮರಾಜೀಪುರ ಗ್ರಾಪಂ ಅಧ್ಯಕ್ಷೆ ರಶ್ಮಿರಾಜು, ಉಪಾಧ್ಯಕ್ಷೆ ಸಹನಾಪ್ರಿಯ, ಪಿಡಿಒ ಶಿವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ತೋಟೇಶ್, ಗುಣಶೇಖರ್, ರಾಜು, ಹಾಲಪ್ಪ ಇದ್ದರು.

Share this article