ಬ್ಯಾಡಗಿ: ನಮ್ಮಿಂದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣದ ತಮ್ಮ ಬದುಕಿಗೆ ಬೇಕಾದ ವಿವಿಧ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಅವರೆಲ್ಲರೂ ಒಂದು ಸಿದ್ಧಾಂತ ರೂಢಿಸಿಕೊಳ್ಳುವ ಮೂಲಕ ದೇಶ ನೀಡಿದಂತಹ ಜವಾಬ್ದಾರಿಗಳನ್ನು ನಿಭಾಯಿಸುವಂತೆ ನಿವೃತ್ತ ಮುಖ್ಯಶಿಕ್ಷಕ ಎಂ.ಕೆ. ಹೊಸ್ಮನಿ ಮನವಿ ಮಾಡಿದರು.
ಪಾಲಕರಿಂದ ಶಿಕ್ಷಣ ಸಂಸ್ಥೆಗಳ ಮಾನದಂಡ: ಹಣಗಳಿಸಲೆಂದೇ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವ ಕಾಲ ದೂರವಾಯಿತು, ಸರ್ಕಾರಿ ಕಾಲೇಜುಗಳಿರಲಿ, ಖಾಸಗಿಯಿರಲಿ ಪಾಲಕರಿಂದ ಶಿಕ್ಷಣ ಸಂಸ್ಥೆಗಳನ್ನು ಮಾನದಂಡಕ್ಕೆ ಒಳಪಡಿಸಲಾಗುತ್ತಿದೆ, ಗುಣಾತ್ಮಕ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಸಕಲ ಸೌಲಭ್ಯಗಳನ್ನು ನೀಡಲೇಬೇಕಾದ ಅನಿವಾರ್ಯತೆಯಿದೆ ಅಂದರಷ್ಟೇ ಶಿಕ್ಷಣ ಸಂಸ್ಥೆಗಳನ್ನು ಉಳಿಸಿಕೊಳ್ಳಲು ಸಾಧ್ಯವೆಂದರು.
ಆರ್ಥಿಕವಾಗಿ ಸಬಲರಾಗಲು ಶಿಕ್ಷಣವೇ ಕಾರಣ:ಬಹಳಷ್ಟು ವಿದ್ಯಾರ್ಥಿಗಳು ಆರ್ಥಿಕವಾಗಿ ಸಬಲರಾಗಲು ಶಿಕ್ಷಣವೇ ಕಾರಣವೆಂಬುದನ್ನು ಮರೆಯಬಾರದು ಅಷ್ಟಕ್ಕೂ ಸಮಾಜದಲ್ಲಿ ಉನ್ನತ ಸ್ಥಾನ ಪಡೆದವರು ಜ್ಞಾನ ನೀಡಿದ ಪ್ರಾಧ್ಯಾಪಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದರು.ಮಕ್ಕಳು ಸಿದ್ಧಾಂತ ರೂಢಿಸಿಕೊಳ್ಳಲಿ: ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಥೆಯ ಚೇರಮನ್ ಚಂದ್ರಣ್ಣ ಶೆಟ್ಟರ ಮಾತನಾಡಿ, ದೇಶ ಕಟ್ಟುವಂತಹ ಸಾಮರ್ಥ್ಯವಿರುವ ವಿದ್ಯಾರ್ಥಿಗಳನ್ನು ಗುರ್ತಿಸಿ ದೇಶಕ್ಕೆ ಕೊಡುಗೆಯಾಗಿ ನೀಡುವುದೇ ಶಿಕ್ಷಕರ ಮೇಲಿನ ಬಹುದೊಡ್ಡ ಜವಾಬ್ದಾರಿ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಬಿ.ಎಫ್. ದೊಡ್ಮನಿ, ಎಂ.ವಿ. ನೆಲವಿಗಿ, ಎಸ್.ಎನ್. ಪೋಲೇಶಿ, ಸುಭಾಸ ಯಲಿ, ಎಸ್.ಎಸ್. ಮಹಾರಾಜಪೇಟ, ಜಿ.ಎಚ್. ಹುಲ್ಲತ್ತಿ, ಎಚ್.ಜಿ. ಸುಮಂಗಲ, ಆರ್.ಬಿ. ಮರದ, ನಾಗರಾಜ ಕುಳೇನೂರ, ಬಿ.ಎಸ್. ಆಣೂರಶೆಟ್ರ, ಎಸ್.ಎಂ. ಅಂಗಡಿ, ಮೃತ್ಯುಂಜಯ ತುರ್ಕಾಣಿ, ಎಸ್.ಡಿ.ಚನ್ನಗೌಡ್ರ, ಎಸ್.ಎಫ್.ಸಂಕಣ್ನನವರ, ಬಿ.ಎಂ. ತುಮರಿಕೊಪ್ಪದ, ಎಸ್.ಎಂ .ಐರಣಿ, ಎಚ್.ಬಿ. ಭಜಂತ್ರಿ ಹಾಗೂ 1998-99 ಸಾಲಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.