ಕನ್ನಡಪ್ರಭ ವಾರ್ತೆ ದಾಂಡೇಲಿ
ನಗರದ ನಾಡವರ ಸಂಘ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಹಾಗೂ ಸೇವಾ ನಿವೃತ್ತರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಇಂದು ತಂತ್ರಜ್ಞಾನ ನಮಗೆ ಅತಿ ಅವಶ್ಯ. ಹಾಗೆಂದು ನಾವು ಮತ್ತು ನಮ್ಮ ಮಕ್ಕಳು ಮೊಬೈಲ್‌ನಲ್ಲಿಯೇ ಕಳೆದು ಹೋಗಬಾರದು. ಮಕ್ಕಳಿಗೆ ಸಾಮಾನ್ಯ ಜ್ಞಾನದ ಅರಿವನ್ನು ನೀಡಬೇಕು. ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು ಕೂಡ ನೀಡಬೇಕು ಎಂದರು.
ಕಾರವಾರದ ದಂತ ವೈದ್ಯ ಡಾ. ಸಮೀರ್ ಕುಮಾರ್ ಟಿ. ನಾಯಕ ಮಾತನಾಡಿ, ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡಿ ಗೌರವಿಸುವುದು ಹಾಗೂ ನಿವೃತ್ತರನ್ನು ಅಭಿನಂದಿಸುವುದು ನಿಜಕ್ಕೂ ಕೂಡ ಶ್ಲಾಘನಾರ್ಹ ಕಾರ್ಯವಾಗಿದೆ. ನಾಡವರ ಸಮಾಜದ ಹಿರಿಮೆ ಹಾಗೂ ಆಡು ಭಾಷೆಯನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.ಸಮಾಜದ ಹಿರಿಯ ಪ್ರಕಾಶ ಬಿ. ನಾಯಕ ಸಾಂದರ್ಭಿಕವಾಗಿ ಮಾತನಾಡಿದರು. ನಾಡವರ ಸಂಘದ ಅಧ್ಯಕ್ಷ ಸುಭಾಷ ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಸುರೇಶ ನಾಯಕ, ವೆಂಕಮ್ಮ ಗಾಂವಕರ, ಶ್ಯಾಮಲಾ ನಾಯಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಖಜಾಂಚಿ ರವಿ ಗಾಂವಕರ ಸ್ವಾಗತಿಸಿದರು. ಉಪಾಧ್ಯಕ್ಷೆ ಜೀವನಾ ನಾಯಕ ಪ್ರಾಸ್ತಾವಿಕ ಮಾತುಗಳಾಡಿದರು. ಕಾರ್ಯದರ್ಶಿ ಮಿಥುನ ನಾಯಕ ವರದಿ ವಾಚಿಸಿದರು. ಮಾನ್ಯತಾ ಪ್ರಾರ್ಥಿಸಿದರು. ನಿರುಪಮಾ ನಾಯಕ, ದೀಪ್ತಿ ನಾಯಕ, ಮೌರ್ಯ ನಾಯಕ ನಿರೂಪಿಸಿದರು.