ಮಕ್ಕಳ ಶ್ರೇಯೋಭಿವೃದ್ಧಿಗೆ ದುಡಿಯುತ್ತಿರುವುದು ಸಂತಸ

KannadaprabhaNewsNetwork |  
Published : Nov 20, 2025, 04:00 AM IST
18 MLP 02 ಪೋಟೋ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ ನಾವೆಲ್ಲ ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಇಂತಹ ಯಾವುದೇ ಸೌಲಭ್ಯಗಳೂ ನಮಗಿರಲಿಲ್ಲ. ಆದರೆ ಇಂದಿನ ಮಕ್ಕಳು ಅದೃಷ್ಟವಂತರು. ಇಲಾಖೆ, ಸಮುದಾಯ, ಸಂಘ ಸಂಸ್ಥೆಗಳು ಇಂದು ಮಕ್ಕಳ ಶ್ರೇಯೋಭಿವೃದ್ಧಿಗೆ ದುಡಿಯುತ್ತಿರುವುದು ಸಂತಸ ಎಂದು ಸೈದಾಪುರ ಗ್ರಾಪಂ ಅಧ್ಯಕ್ಷ ಮಹಾಲಿಂಗಪ್ಪ ಸನದಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ನಾವೆಲ್ಲ ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಇಂತಹ ಯಾವುದೇ ಸೌಲಭ್ಯಗಳೂ ನಮಗಿರಲಿಲ್ಲ. ಆದರೆ ಇಂದಿನ ಮಕ್ಕಳು ಅದೃಷ್ಟವಂತರು. ಇಲಾಖೆ, ಸಮುದಾಯ, ಸಂಘ ಸಂಸ್ಥೆಗಳು ಇಂದು ಮಕ್ಕಳ ಶ್ರೇಯೋಭಿವೃದ್ಧಿಗೆ ದುಡಿಯುತ್ತಿರುವುದು ಸಂತಸ ಎಂದು ಸೈದಾಪುರ ಗ್ರಾಪಂ ಅಧ್ಯಕ್ಷ ಮಹಾಲಿಂಗಪ್ಪ ಸನದಿ ಹೇಳಿದರು.

ಸಮೀಪದ ಸಮೀರವಾಡಿಯ ಸೋಮಯ್ಯಾ ಶಿಶುನಿಕೇತನ ವಿದ್ಯಾಮಂದಿರದಲ್ಲಿ ಜರುಗಿದ ಸೈದಾಪುರ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಸೋಮಯ್ಯಾ ಸಕ್ಕರೆ ಕಾರ್ಖಾನೆಯ ಪಾತ್ರ ತುಂಬಾ ದೊಡ್ಡದು. ಈ ಕಾರ್ಖಾನೆಯ ಅಭಿವೃದ್ಧಿಗೆ ಮತ್ತು ಅವರ ಕಾರ್ಯಗಳಿಗೆ ತಾವು ಸದಾ ಕೈಜೋಡಿಸುವುದಾಗಿ ಹೇಳಿದರು.

ಸಕ್ಕರೆ ಕಾರ್ಖಾನೆಯ ಸಿಟಿಒ ದಿನೇಶ್ ಶರ್ಮಾ ಮಾತನಾಡಿ, ಈ ಸ್ಪರ್ಧಾ ಜಗತ್ತಿಗೆ ಪಠ್ಯ ಕಲಿಕೆ ಮಾತ್ರ ಸಾಲದು, ಮಗುವಿನ ಅಂತಃಶಕ್ತಿಯ ಅಭಿವ್ಯಕ್ತಿಗೆ ಅವಕಾಶ ಒದಗಿಸಿ ಸೋಲನ್ನು ಸ್ವೀಕರಿಸುವ ಗುಣ ಬೆಳೆಸುವ ಹಾಗೂ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಆತ್ಮವಿಶ್ವಾಸದೊಂದಿಗೆ ದೇಶ ಪ್ರತಿನಿಧಿಸುವ ಮಟ್ಟಕ್ಕೆ ಈ ಕಾರ್ಯಕ್ರಮಗಳು ಬುನಾದಿಯಾಗಲಿವೆ, ಇಲಾಖೆಯ ಈ ಮಹೋನ್ನತ ಕಾರ್ಯದ ಪೂರ್ಣ ಫಲ ಮಕ್ಕಳು ಪಡೆಯಬೇಕೆಂದರು.

ಸಿಆರ್ ಪಿ ಬಿ.ಕೆ. ಸಬರದ ಮಾತನಾಡಿದರು. ನಂತರ ಜರುಗಿದ ವಿವಿಧ ಸ್ಪರ್ಧೆಗಳಲ್ಲಿ ಮಕ್ಕಳು ಭಾಗವಹಿಸಿ ಗಮನ ಸೆಳೆದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ರೂಪಾ ಶಿಂಧೆ, ಕವಿತಾ ಕಾಂಬಳೆ, ಶಾಲೆಯ ಸಂಯೋಜಕ ಡಿ.ಎಚ್.ನದಾಫ್, ಮುಖ್ಯೋಪಾಧ್ಯಾಯರಾದ ವಿವೇಕಾನಂದ ಎಚ್. ಭಜಂತ್ರಿ, ಎಸ್.ಎಂ.ನ್ಯಾಮಗೌಡ, ಪತ್ರಕರ್ತ ನಾರನಗೌಡ ಉತ್ತಂಗಿ ಇತರರಿದ್ದರು.ಕಾವೇರಿ ಚವ್ಹಾಣ ಪ್ರಾರ್ಥಿಸಿ,ಸೋಮು ಕನಕರಡ್ಡಿ ನಿರೂಪಿಸಿ,ಶಶಿಕಲಾ ಮೋಜನಿದಾರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರದಿಂದ ಗೋಬ್ಯಾಕ್‌ ಗೌರ್ನರ್‌ ಅಭಿಯಾನ ಚಿಂತನೆ
ವಿಧಾನ ಕದನಾಧಿವೇಶನ