ಮಾದಕ ವಸ್ತು ನಿರ್ಮೂಲನ ಜಾಗೃತಿ ಅಭಿಯಾನದಲ್ಲಿ ತಿಮ್ಮಣ್ಣ ಕಳವಳಕನ್ನಡಪ್ರಭ ವಾರ್ತೆ ಹೊಸದುರ್ಗ ಸಮಾಜಘಾತಕ ಕೆಲಸದಲ್ಲಿ ವಿದ್ಯಾವಂತ ಯುವಕರು ತೊಡಗುತ್ತಿರುವುದು ದುರಂತ ಎಂದು ಹೊಸದುರ್ಗ ಠಾಣೆ ಪಿಐ ತಿಮ್ಮಣ್ಣ ಕಳವಳ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಜೀವನದ ಅಮೂಲ್ಯ ಸಮಯದಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳುವುದರ ಬದಲು ಮಾದಕ ವ್ಯಸನಕ್ಕೆ ತುತ್ತಾಗುತ್ತಿರುವುದು ಸಮಾಜದಲ್ಲಿ ಕಳವಳಕಾರಿಯಾಗಿದ್ದು, ಮಾದಕ ವ್ಯಸನ ಮಾಡುವುದರಿಂದ ಕುಟುಂಬದ ನೆಮ್ಮದಿ ಹಾಳಾಗುತ್ತಿದೆ ಎಂದರು.
ಮಾದಕ ವಸ್ತು ಸೇವನೆ ಮಾಡಿದವನಲ್ಲಿ ನಿರಂತರ ಒಂಟಿತನ ಕಾಡುತ್ತದೆ. ಗಾಂಜಾ ಅಫೀಮು ಸೇವಿಸಿದ ವ್ಯಕ್ತಿಗಳು ಮನಸ್ಸಿನ ನಿಯಂತ್ರಣವನ್ನು ಕಳೆದುಕೊಂಡು ಕಳ್ಳತನ, ದರೋಡೆಯಂತಹ ಹೀನ ಕೃತ್ಯದಲ್ಲಿ ಭಾಗಿಯಾಗುತ್ತಾನೆ. ಮಾದಕ ವಸ್ತುಗಳನ್ನು ಬೆಳೆಸುವುದು, ಸಾಗಾಣಿಕೆ ಮಾಡುವುದು ಮತ್ತು ಸೇವಿಸುವುದು ಅಕ್ಷಮ್ಯ ಅಪರಾಧವಾಗಿದ್ದು ಮಾದಕ ವ್ಯಸನ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದರೆ 20 ವರ್ಷ ಜೈಲು ಮತ್ತು ಎರಡು ಲಕ್ಷ ಜುಲ್ಮಾನೆ ವಿದಿಸಲಾಗುವುದು ಎಂದರು.ಅಪ್ರಾಪ್ತ ವಯಸ್ಕರೊಂದಿಗೆ ವಿವಾಹ ಅಕ್ಷ್ಯಮ್ಯ ಅಪರಾಧವಾಗಿದ್ದು, ಪೋಕ್ಸೋ ಮೊಕದ್ದಮೆ ದಾಖಲಿಸಿ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ದುರ್ಗಾ ಐಟಿಐ ಪ್ರಾಚಾರ್ಯ ಪುನೀತ್, ಕಚೇರಿ ಅಧೀಕ್ಷಕ ಎಲ್.ಕೆ ಮನೋಹರ್, ಉಪನ್ಯಾಸಕ ಡಿ.ಎಂ. ಕುಮಾರ್, ರಾಜು, ಧನಂಜಯ ನಟರಾಜ್, ವೈ ಕುಮಾರ್, ರಮೇಶ್, ಹರೀಶ್ ,ಮಹೇಶ್, ಪದ್ಮಾವತಿ, ಬಸವರಾಜ್, ಮುನಿಸ್ವಾಮಿ, ಗಿರಿಶ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.