- ಯಶೋದಮ್ಮ ನಾಗತಿ ಪ್ರೌಢಶಾಲೆಯಲ್ಲಿ ಕಾನೂನು ಸಾಕ್ಷರತಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ,ತರೀಕೆರೆವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರವಿರಬೇಕು ಎಂದು ವಕೀಲರ ಸಂಘದ ಅಧ್ಯಕ್ಷ ಬಿ.ವಿ.ದಿನೇಶ್ ಕುಮಾರ್
ಹೇಳಿದರು.ತಾಲೂಕು ಕಾನೂನು ನೆರವು ಸಮಿತಿ, ವಕೀಲರ ಸಂಘ, ಯಶೋದಮ್ಮ ನಾಗತಿ ಪ್ರೌಢಶಾಲೆಯಿಂದ ನಡೆದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ತಮ್ಮನ್ನು ತಾವು ತಿಳಿದುಕೊಳ್ಳಬೇಕು ಅಬ್ದುಲ್ ಕಲಾಂ, ಮಹಾತ್ಮಾಗಾಂಧಿ ಇಂತಹ ಮಹನೀಯರ ಪುಸ್ತಕ ಓದಬೇಕು ಎಂದು ಸಲಹೆ ಮಾಡಿದರು.ಹಿರಿಯ ವಕೀಲರ ಎಸ್.ಸುರೇಶ್ ಚಂದ್ರ ಮಾತನಾಡಿ ಪ್ರತಿ ವರ್ಷ ನವೆಂಬರ್ ನಲ್ಲಿ ರಾಷ್ಟ್ರೀಯ ಕಾನೂನು ಸೇವಾ ದಿನ ಆಚರಿಸಲಾಗುತ್ತಿದೆ. ಜನರು ಕಾನೂನಿಂದ ವಂಚಿತರಾಗಬಾರದು. ವಿದ್ಯಾರ್ಥಿಗಳು ಕಾನೂನು ತಿಳಿದು ಕೊಳ್ಳಬೇಕು, ಕಾನೂನು ಗೊತ್ತಿಲ್ಲ ಎಂದು ತಪ್ಪು ಮಾಡಿದರೆ ಶಿಕ್ಷೆಯಾಗುತ್ತದೆ. ಜನರು ನ್ಯಾಯಾಲಯಕ್ಕೆ ಅಲೆದಾಡು ವುದನ್ನು ತಪ್ಪಿಸಲು ಇರುವ ರಾಜೀ ಸಂಧಾನದಿಂದ ಸಮಯ ಮತ್ತು ಹಣ ಎರಡೂ ಉಳಿಯುತ್ತದೆ ಎಂದು ಹೇಳಿದರು.ವಕೀಲ ಬಿ.ಪಿ.ವಿಕಾಸ್ ಮಾತನಾಡಿ ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ವಾಹನ ಓಡಿಸಲು ಸರಿಯಾದ ವಯಸ್ಸು ಅಗತ್ಯ. ಚಾಲನಾ ಪರವಾನಗಿ ಇಲ್ಲದೆ ವಿದ್ಯಾರ್ಥಿಗಳು ವಾಹನ ಚಲಾಯಿಸುವುದು ಶಿಕ್ಷಾರ್ಹ ಅಪರಾದ ಎಂದು ಹೇಳಿದರು.
ವಕೀಲ ಎಂ.ಕೆ.ತೇಜಮೂರ್ತಿ ಮಾತನಾಡಿ ವಿದ್ಯಾರ್ಥಿಗಳು ರ್‍ಯಾಗಿಂಗ್ ಮಾಡಬಾರದು. ವಿನಯತೆ ಇದ್ದರೆ ವಿದ್ಯೆ ಕಲಿಯ ಬಹುದು. ಶಿಕ್ಷಕರಿಗೆ ಗೌರವ ಕೊಡಬೇಕು. ನಮ್ಮ ಬದುಕು ನಾವೇ ರೂಪಿಸಿಕೊಳ್ಳಬೇಕು ಎಂದು ಹೇಳಿದರು.ವಕೀಲ ಎನ್.ವೀರಭದ್ರಪ್ಪ ಪೋಕ್ಸೋ ಹಾಗೂ ಬಾಲ್ಯ ವಿವಾಹ ಕಾಯ್ದೆ ಬಗ್ಗೆ ಮಾತನಾಡಿದರು. ಯಶೋದಮ್ಮ ನಾಗತಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ವೀರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕ ಕುಮಾರ ನಾಯ್ಕ ಭಾಗವಹಿಸಿದ್ದರು.
-27ಕೆಟಿಆರ್.ಕೆ.1ಃ
ತರೀಕೆರೆಯ ಯಶೋದಮ್ಮ ನಾಗತಿ ಪ್ರೌಢಶಾಲೆಯಲ್ಲಿ ನಡೆದ ಕಾನೂನು ಸಾಕ್ಷರತಾ ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಬಿ.ವಿ.ದಿನೇಶ್ ಕುಮಾರ್, ವಕೀಲರಾದ ಎಸ್.ಸುರೇಶ್ ಚಂದ್ರ, ಎಂ.ಕೆ..ತೇಜಮೂರ್ತಿ, ಮುಖ್ಯೋಪಾಧ್ಯಾಯ ವೀರಪ್ಪ ಭಾಗವಹಿಸಿದ್ದರು.