ಶಿಗ್ಗಾವಿ: ಸಾಹಿತ್ಯಕವಾಗಿ ಹಾವೇರಿ ಜಿಲ್ಲೆ ಅಪಾರ ಕೊಡುಗೆ ನೀಡಿದೆ. ಸರಕಾರದ ಅನುದಾನ ಇಲ್ಲದೆ ಸಾಹಿತ್ಯ ಪರಿಷತ್ ಕಟ್ಟುವ ಕಾರ್ಯ ಕಷ್ಟಕರವಾಗಿರುವ ಹಿನ್ನೆಲೆ ತಾಲೂಕು ಕಸಾಪ ಘಟಕಕ್ಕೆ ವೈಯಕ್ತಿಕವಾಗಿ ೧ ಲಕ್ಷ ರು. ಠೇವಣಿ ನೀಡಲಾಗಿದೆ. ಅದರ ಸದುಪಯೋಗ ಮಾಡಿಕೊಂಡು ತಾಲೂಕಿನಲ್ಲಿ ಕಸಾಪ ಕಾರ್ಯ ಪ್ರವೃತ್ತವಾಗಬೇಕು ಎಂದು ಭಾರತ ಸೇವಾಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿದರು.
ಪ್ರಮಾಣ ವಚನ ಬೋಧಿಸಿ ಮಾತನಾಡಿದ ಬಿಇಒ ಎಂ.ಬಿ. ಅಂಬಿಗೇರ, ಕನ್ನಡ ನಾಡು ಬೆಳವಣಿಗೆಗೆ ಲಕ್ಷಾಂತರ ಸಾಹಿತಿಗಳ, ಕನ್ನಡಾಭಿಮಾನಿಗಳ ಶ್ರಮವಿದೆ. ಈ ನಿಟ್ಟಿನಲ್ಲಿ ತಾಲೂಕು ಕಸಾಪ ಪದಾಧಿಕಾರಿಗಳು ಸಿಕ್ಕ ಅವಕಾಶ ಸದುಪಯೋಗದೊಂದಿಗೆ ಕ್ರಿಯಾತ್ಮಕ ಚಟುವಟಿಕೆಗಳನ್ನ ರೂಪಿಸುವ ಕಾರ್ಯ ಮಾಡಬೇಕು. ಕಾರ್ಯಕ್ರಮಗಳ ಆಯೋಜನೆಗೂ ಪೂರ್ವದಲ್ಲಿ ಆಲೋಚನೆ, ಯೋಜನೆ ಅವಶ್ಯ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾನಂದ ಮ್ಯಾಗೇರಿ ಮಾತನಾಡಿ, ತಾಲೂಕು ಕಸಾಪಗೆ ೨೫ ಸಾವಿರ ರು. ಠೇವಣಿ ಇಡುವುದಾಗಿ ತಿಳಿಸಿದರು.ತಾಲೂಕು ನೂತನ ಕಸಾಪ ಅಧ್ಯಕ್ಷ ನಾಗಪ್ಪ ಬೆಂತೂರ ಮಾತನಾಡಿ, ತಮ್ಮ ಅಧಿಕಾರ ಅವಧಿಯಲ್ಲಿ ವಿಭಿನ್ನ ಮತ್ತು ವಿಶಿಷ್ಠವಾಗಿ ಸಾಹಿತ್ಯ ಪರಿಷತ್ ಕಟ್ಟುವ ಕಾರ್ಯ ಕೈಗೊಳ್ಳುತ್ತೇನೆ. ಸಮಾಜದ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸುವ ಮೂಲಕ ೨೫ಕ್ಕೂ ಹೆಚ್ಚು ವಿನೋತನವಾಗಿ ಕಸಾಪ ಚಟುವಟಿಕೆಗಳ ಮೂಲಕ ವಿನೂತನ ಕಾರ್ಯಕ್ರಮ ಆಯೋಜಿಸುವ ಉದ್ದೇಶ ಹೊಂದಿದ್ದೇನೆ ಎಂದರು. ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ ಹಿರೇಮಠ, ಶಹರ ಘಟಕದ ಅಧ್ಯಕ್ಷೆ ಲಲಿತಾ ಹಿರೇಮಠ, ಎಂ.ಬಿ. ಹಳೇಮನಿ ಮಾತನಾಡಿದರು. ವಿರಕ್ತಮಠದ ಸಂಗನಬಸವ ಶ್ರೀಗಳು ಸಾನಿಧ್ಯ ವಹಿಸಿದ್ದರು.
ಬಂಕಾಪುರ ಹೋಬಳಿ ಅಧ್ಯಕ್ಷ ಎ.ಕೆ.ಅದ್ವಾನಿಮಠ, ದುಂಡಶಿ ಹೋಬಳಿ ಅಧ್ಯಕ್ಷ ಐ.ಎಲ್. ಬೋಸಲೆ, ಹಿರಿಯ ಸಾಹಿತಿ ಬ.ಫ.ಯಲಿಗಾರ, ಬಸಣ್ಣ ಹೆಸರೂರು, ಆರ್. ಎಸ್. ಅರಳಲೆಹಿರೇಮಠ, ಸಿ.ವಿ. ಮತ್ತಿಗಟ್ಟಿ, ಟಿ.ವಿ.ಸುರಗಿಮಠ, ಸುಶೀಲಕ್ಕ ಪಾಟೀಲ, ಕೊಟ್ರೇಶ್ ಮಾಸ್ತರ್ ಬಳಗಲಿ, ಸಿ.ಡಿ. ಯತ್ನಳ್ಳಿ, ಡಾ. ಲತಾ ನಿಡಗುಂದಿ, ರಂಜನಾ ಔಂದಕರ, ಸಂತೋಷಿಮಾ ಬಡಿಗೇರ, ಕೆ.ಎಸ್. ಕೌಜಲಗಿ, ಎಸ್.ಎನ್. ದೊಡ್ಡಗೌಡ್ರ, ಬ್ಯಾಡಗಿ ತಾಲೂಕು ಕಸಾಪ ಅಧ್ಯಕ್ಷ ಜಗಾಪುರ್, ಸವಣೂರು ಅಧ್ಯಕ್ಷ ಚಂದ್ರಗೌಡ ಪಾಟೀಲ, ಬಸವರಾಜ ನಾರಾಯಣಪುರ, ಕಾರ್ಯದರ್ಶಿ ರಮೇಶ ಹರಿಜನ, ಸುಮಂಗಲಾ ಅತ್ತಿಗೇರಿ ಸೇರಿದಂತೆ ಕಸಾಪ ಅಜೀವ ಸದಸ್ಯರು, ಕನ್ನಡ, ರೈತಪರ ಹೋರಾಟಗಾರರು, ವಿವಿಧ ಮುಖಂಡರುಗಳು ಉಪಸ್ಥಿತರಿದ್ದರು, ಪ್ರಾಸ್ತಾವಿಕವಾಗಿ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಮಾತನಾಡಿದರು. ಕಲಾವಿದ ಬಸವರಾಜ ಶಿಗ್ಗಾವಿ ಹಾಗೂ ಶರೀಫ್ ಮಾಕಾಪುರ ಅವರಿಂದ ವಚನ ಗಾಯನ ಪ್ರಸ್ತುತಪಡಿಸಿದರು, ಶಾಲಾ ವಿದ್ಯಾರ್ಥಿಗಳು ಕವನ ವಾಚನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯದರ್ಶಿ ರಮೇಶ ಹರಿಜನ, ಸುಮಂಗಲಾ ಅತ್ತಿಗೇರಿ ಕಾರ್ಯಕ್ರಮ ನಿರ್ವಹಿಸಿದರು.