ಕನ್ನಡ ಮನಸ್ಸುಗಳು ಒಂದಾಗಿ ಕನ್ನಡ ಕಟ್ಟುವ ಕೆಲಸ ಮಾಡುವುದು ಅಗತ್ಯ

KannadaprabhaNewsNetwork |  
Published : Nov 22, 2026, 01:15 AM IST
ಿಿ | Kannada Prabha

ಸಾರಾಂಶ

ಶೃಂಗೇರಿ ಶತಶತಮಾನಗಳ ಇತಿಹಾಸ, ಪರಂಪರೆ ಹೊಂದಿರುವ ಶ್ರೀಮಂತ ಭಾಷೆಯಾದ ಕನ್ನಡ ದೇಶದ 22 ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದು, ಶಾಸ್ತ್ರೀಯ ಸ್ಥಾನಮಾನ ಪಡೆದಿದೆ.ಇಂತಹ ಸಮೃದ್ಧ ಭಾಷೆಯನ್ನು ಉಳಿಸಿ, ಬೆಳೆಸಬೇಕಿದೆ. ಕನ್ನಡ ಮನಸ್ಸುಗಳು ಒಂದಾಗಿ ಕನ್ನಡ ಕಟ್ಟುವ ಕೆಲಸ ಮಾಡಬೇಕಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

- ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಮತ । ತಾಲೂಕು ಸಮ್ಮೇಳನ

ಕನ್ನಡಪ್ರಭ ವಾರ್ತೆ ಶೃಂಗೇರಿ

ಶತಶತಮಾನಗಳ ಇತಿಹಾಸ, ಪರಂಪರೆ ಹೊಂದಿರುವ ಶ್ರೀಮಂತ ಭಾಷೆಯಾದ ಕನ್ನಡ ದೇಶದ 22 ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದು, ಶಾಸ್ತ್ರೀಯ ಸ್ಥಾನಮಾನ ಪಡೆದಿದೆ.ಇಂತಹ ಸಮೃದ್ಧ ಭಾಷೆಯನ್ನು ಉಳಿಸಿ, ಬೆಳೆಸಬೇಕಿದೆ. ಕನ್ನಡ ಮನಸ್ಸುಗಳು ಒಂದಾಗಿ ಕನ್ನಡ ಕಟ್ಟುವ ಕೆಲಸ ಮಾಡಬೇಕಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಶನಿವಾರ ಶೃಂಗೇರಿ ಪಡುಬೈಲು ದೇವಸ್ಥಾನದ ಆವರಣದಲ್ಲಿ ಕಸಾಪ ಹಾಗೂ ಜಾನಪದ ಪರಿಷತ್ ಕಸಬಾ ಘಟಕ ಆಯೋಜಿಸಿದ್ದ ತಾಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿ ಕನ್ನಡ ಭಾಷೆಯ ಸೊಗಸು, ಸೊಗಡು ಅದ್ಭುತ. ಸಾಹಿತ್ಯ ಪ್ರತಿಯೊಬ್ಬ ವ್ಯಕ್ತಿಯಜೀವನದಲ್ಲಿ ಅನಿವಾರ್ಯ. ಜೀವನದ ಪ್ರತಿಬಂಬವಾಗಬೇಕಿದೆ. ಕನ್ನಡ,ಕನ್ನಡತನ ಕೇವಲ ಸಾಹಿತಿ, ಕವಿಗಳಿಗೆ ಸೀಮಿತವಾಗದೆ ಜನಸಾಮಾನ್ಯರೂ ಕನ್ನಡ, ಕನ್ನಡತನ, ಸಾಹಿತ್ಯವನ್ನು ತಮ್ಮ ಉಸಿರಾಗಿರಿಸಿ ಕೊಳ್ಳುವಂತಾಗಬೇಕು. ಆಗಲೇ ಕನ್ನಡ ಭಾಷೆ,ಸಾಹಿತ್ಯ ಉಳಿಯಲು ಸಾಧ್ಯ.

ಕನ್ನಡ ಪುಸ್ತಕ,ಸಾಹಿತ್ಯ ಓದುವ ಕೆಲಸ ನಡೆಯಬೇಕು.ಶಾಸಕಾಂಗ,ಕಾರ್ಯಾಂಗ,ನ್ಯಾಯಾಂಗ ಎಲ್ಲಾ ಕ್ಷೇತ್ರಗಳಲ್ಲಿ ಕನ್ನಡ ಬಳಕೆಯಾಗಬೇಕು.ಕನ್ನಡ ಭಾಷೆ ಬಗ್ಗೆ ನಾವು ಮಾತನಾಡುವ ಮೊದಲು ನಮ್ಮ ಭಾಷೆ,ಸಾಹಿತ್ಯದ ಉಳಿವಿನ ಬಗ್ಗೆ ಚಿಂತಿಸಬೇಕಿದೆ.

ಸರ್ಕಾರಿ ಶಾಲೆಗಳು ಇಂದು ಮುಚ್ಚುವ ಹಂತ ತಲುಪಿದ್ದು ಆತಂಕಕಾರಿ ಬೆಳವಣಿಗೆ. ರಾಜ್ಯದಲ್ಲಿ 48 ಸಾವಿರ ಸರ್ಕಾರಿ ಶಾಲೆಗಳಿದ್ದು, ಬರುವ ಮಾರ್ಚ್ ಗೆ 7 ಸಾವಿರ ಶಾಲೆಗಳು ಮುಚ್ಚಲಿವೆ. ವಿದ್ಯಾರ್ಥಿಗಳ ಕೊರತೆಯೇ ಇದಕ್ಕೆ ಕಾರಣ. ಕನ್ನಡ ಉಳಿದಿರುವುದು ಸರ್ಕಾರಿ ಶಾಲೆಗಳಲ್ಲಿ ಮಾತ್ರ. ಸರ್ಕಾರಿ ಶಾಲೆಗಳು ಮುಚ್ಚಿದರೆ ಕನ್ನಡದ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಸರ್ಕಾರಿ ಶಾಲೆಗಳನ್ನು ಉಳಿಸಬೇಕು. ಕನ್ನಡ ಭಾಷೆ ಬೇಳೆಸಬೇಕು.ಕನ್ನಡತನ ಗಟ್ಟಿಗೊಳಿಸಬೇಕು.ಆದ್ದರಿಂದ ಕನ್ನಡ ನಾಡು ನುಡಿ ಭಾಷೆ ಸಂಸ್ಕೃತಿ ಉಳಿಸಿ ಬೆಳೆಸಲು ಎಲ್ಲರು ಕಂಕಣಬದ್ದರಾಗಬೇಕು ಎಂದರು.

ಸಮ್ಮೇಳನದ ಅಧ್ಯಕ್ಷ ನಾಗೇಶ್ ಕಾಮತ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡ ಭಾಷೆ ,ಸಾಹಿತ್ಯ ಉಳಿಸಿ ಬೆಳೆಸುವ ಮಹತ್ತರ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಹೋಬ‍ಳಿ ಮಟ್ಟದಲ್ಲಿ ಇಂತಹ ಸಮ್ಮೇಳನ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. ನಾವೇಲ್ಲರು ಸೇರಿ ಕನ್ನಡ ಕಟ್ಟುವ ಕೆಲಸ ಮಾಡೋಣ. ಎಲ್ಲರ ಸಹಕಾರದಿಂದ ಶೃಂಗೇರಿಯಲ್ಲಿ ಯಕ್ಷಗಾನ ಸಮ್ಮೇಳನ ಆಯೋಜಿಸುವ ಕೆಲಸ ಮಾಡಬೇಕೆಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್, ಜಿಲ್ಲಾ ಜಾನಪದ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ್ ಜಿ.ಬಿ,ಚಟ್ನಳ್ಳಿ ಮಹೇಶ್, ಸುಮಂಗಲಿ ಆನಂದ ಸ್ವಾಮಿ,ರೇಣುಕಾ ರಾಮಪ್ಪ, ಅಂಗುರುಡಿ ದಿನೇಶ್, ಆಗುಂಬೆ ಗಣೇಶ್ ಹೆಗ್ಡೆ ,ಚೇತನ್, ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.21 ಶ್ರೀ ಚಿತ್ರ 1-

ಶೃಂಗೇರಿ ಪಡುಬೈಲು ದೇವಸ್ಥಾನದ ಆವರಣದಲ್ಲಿ ಶನಿವಾರ ಕಸಾಪ ಹಾಗೂ ಜಾನಪದ ಪರಿಷತ್ ಕಸಬಾ ಹೋಬಳಿ ಘಟಕ ಆಯೋಜಿಸಿದ್ದ ತಾಲೂಕು ಸಮ್ಮೇಳನವನ್ನು ಸಂಸದ ಕೋಟಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಜಾಸೇವಾ ಜನರ ಸಮಸ್ಯೆ ಪರಿಹಾರಕ್ಕೆ ಸಹಕಾರ
ಶಾಸನಗಳ ಸಂರಕ್ಷಣೆ ನಮ್ಮೆ ಹೊಣೆ