ಉಪಸಭಾಧ್ಯಕ್ಷ ಹುದ್ದೆ ಸಿಕ್ಕಿರುವುದು ದೇವರ ಇಚ್ಛೆ: ಮಂಕಾಳ ವೈದ್ಯ

KannadaprabhaNewsNetwork |  
Published : Aug 23, 2026, 02:30 AM IST
ಭಟ್ಕಳ ಜನತಾ ಪತ್ತಿನ ಸಹಕಾರಿ ಸಂಘದಿಂದ ಸಂಘದ ಅಧ್ಯಕ್ಷ ಹಾಗೂ ರಾಜ್ಯ ವಿಧಾನಸಭೆಯ ಡೆಪ್ಯೂಟಿ ಸ್ಪೀಕರ್ ಮಂಕಾಳ ಎಸ್. ವೈದ್ಯರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಇಲ್ಲಿಯ ಜನತಾ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರಿಂದ ಸಂಘದ ಅಧ್ಯಕ್ಷ ಹಾಗೂ ವಿಧಾನಸಭೆಯ ಉಪ ಸಭಾಧ್ಯಕ್ಷ ಮಂಕಾಳ ಎಸ್. ವೈದ್ಯರನ್ನು ಹೃದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು.

ಭಟ್ಕಳ ಜನತಾ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ, ಸಿಬ್ಬಂದಿಗಳಿಂದ ಗೌರವ

ಕನ್ನಡಪ್ರಭ ವಾರ್ತೆ ಭಟ್ಕಳ

ಇಲ್ಲಿಯ ಜನತಾ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರಿಂದ ಸಂಘದ ಅಧ್ಯಕ್ಷ ಹಾಗೂ ವಿಧಾನಸಭೆಯ ಉಪ ಸಭಾಧ್ಯಕ್ಷ ಮಂಕಾಳ ಎಸ್. ವೈದ್ಯರನ್ನು ಹೃದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಕಾಳ ವೈದ್ಯರು, ನನಗೆ ಸಚಿವ ಸ್ಥಾನ ಸಿಗುವುದಾಗಿತ್ತು. ಆದರೆ ನನಗೆ ವಿಧಾನಸಭೆಯ ಉಪ ಸಭಾಧ್ಯಕ್ಷ ಹುದ್ದೆ ಸಿಕ್ಕಿರುವುದು ದೇವರ ಇಚ್ಛೆಯಾಗಿದೆ. ದೇವರ ಇಚ್ಛೆಯಂತೆ ಎಲ್ಲವೂ ನಡೆದಿದೆ. ಇದರಲ್ಲಿ ಯಾರದ್ದೂ ಪಾತ್ರವಿಲ್ಲ. ಯಾವ ಸಮಯಕ್ಕೆ ಯಾವ ಹುದ್ದೆ ಸಿಗಬೇಕು ಎನ್ನುವುದು ದೇವರ ಇಚ್ಛೆಯೇ ಆಗಿದೆ. ಯಾವುದೂ ಕೂಡ ನಮ್ಮ ಕೈಯಲ್ಲಿ ಇರುವುದಿಲ್ಲ. ಯಾರು ಏನಾಗಬೇಕು ಎನ್ನುವುದು ದೇವರ ಇಚ್ಛೆಯಾಗಿದೆ ಎಂದ ಅವರು, ನಾನು ಈ ಮಟ್ಟಕ್ಕೆ ಬೆಳೆಯಲು ಜನತಾ ಬ್ಯಾಂಕೇ ಕಾರಣವಾಗಿದೆ. ಜನತಾ ಬ್ಯಾಂಕಿನ ನಿರ್ದೇಶಕನಾದ ಬಳಿಕವೇ ನಾನು ರಾಜಕಾರಣಕ್ಕೆ ಬಂದಿದ್ದೇನೆ. ಜನತಾ ಬ್ಯಾಂಕು ನನಗೆ ಜನರ ಪರಿಚಯ ಮಾಡಿಸಿದೆ. ಕಳೆದ 30 ವರ್ಷಗಳಿಂದ ನಾನು ಜನತಾ ಬ್ಯಾಂಕಿನ ನಿರ್ದೇಶಕ ಮತ್ತು ಅಧ್ಯಕ್ಷ ಸ್ಥಾನದಲ್ಲಿದ್ದು, ಬ್ಯಾಂಕಿನಲ್ಲಿ ಸುಮಾರು 100 ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಬ್ಯಾಂಕು ₹500 ಕೋಟಿಗೂ ಅಧಿಕ ವಹಿವಾಟು ಹೊಂದಿದೆ. ಹಿರಿಯರು ಕಟ್ಟಿದ ಸಂಸ್ಥೆಯನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕಾಗಿದೆ ಎಂದರು.

ಉಪಾಧ್ಯಕ್ಷ ಪರಮೇಶ್ವರ ದೇವಡಿಗ ಪ್ರಸ್ತಾವಿಕ ಮಾತನಾಡಿದರು.

ಪ್ರಧಾನ ವ್ಯವಸ್ಥಾಪಕ ವಿನಯ ನಾಯ್ಕ ಸ್ವಾಗತಿಸಿ, ವಂದಿಸಿದರು. ಈ ಸಂದರ್ಭ ನಿರ್ದೇಶಕರಾದ ಕೃಷ್ಣಾ ನಾಯ್ಕ, ನಾಗಪ್ಪ ನಾಯ್ಕ, ಕೃಷ್ಣಾನಂದ ಪೈ,ಪರಮೇಶ್ವರ ನಾಯ್ಕ, ತಿಮ್ಮಪ್ಪ ನಾಯ್ಕ, ವೆಂಕಟ್ರಮಣ ಮೊಗೇರ, ರಾಮಚಂದ್ರ ಕಿಣಿ, ಅಲ್ಬರ್ಟ ಡಿಕೋಸ್ತ, ಗೀತಾ ನಾಯ್ಕ, ಲಕ್ಷ್ಮೀ ಎಂ. ನಾಯ್ಕ, ನಿವೃತ್ತ ಪ್ರಧಾನ ವ್ಯವಸ್ಥಾಪಕ ಡಿ.ಎಲ್. ನಾಯ್ಕ ಮುಂತಾದವರಿದ್ದರು.

---------

22ಬಿಕೆಲ್2: ಭಟ್ಕಳ ಜನತಾ ಪತ್ತಿನ ಸಹಕಾರಿ ಸಂಘದಿಂದ ಸಂಘದ ಅಧ್ಯಕ್ಷ ಹಾಗೂ ರಾಜ್ಯ ವಿಧಾನಸಭೆಯ ಡೆಪ್ಯೂಟಿ ಸ್ಪೀಕರ್ ಮಂಕಾಳ ಎಸ್. ವೈದ್ಯರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಸಿಗುವ ವಿಶ್ವಾಸ: ಪೊನ್ನಣ್ಣ
ಸದ್ಗುಣಗಳೇ ಮಾನವನ ಧೀಶಕ್ತಿಯಾಗಲಿ: ದಿನೇಶ ಪೂಜಾರ